ನರಸಿಂಹಾನಂದ ಸ್ವಾಮಿ ವಿರುದ್ಧ ಕ್ರಮಕ್ಕೆ ಆಗ್ರಹ

MND manavi
Published on

ಮುಂಡಗೋಡ: ಪ್ರವಾದಿ ಮಹ್ಮದ ಪೈಗಂಬರ್ ಅವರಿಗೆ ಅವಹೇಳನಕಾರಿಯಾಗಿ ನಿಂದಿಸಿದ ಯತಿ ನರಸಿಂಹಾನಂದ ಸ್ವಾಮಿಯ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಮುಂಡಗೋಡ ಮುಸ್ಲಿಂ ಸಮುದಾಯದವರು ತಹಸೀಲ್ದಾರ್ ಶಂಕರ ಗೌಡಿ ಮೂಲಕ ರಾಷ್ಟ್ರಪತಿಗೆ ಗುರುವಾರ ಮನವಿ ಸಲ್ಲಿಸಿದರು.

ಈ ಹಿಂದೆ ಇಂತಹ ರೀತಿಯಲ್ಲಿ ಮಾತನಾಡಿ ಶಿಕ್ಷೆ ಅನುಭವಿಸಿ ಬಂದಿರುವ ಸ್ವಾಮಿ ಇದೀಗ ಮತ್ತೆ ಅವಹೇಳನಕಾರಿಯಾಗಿ ಭಾಷಣ ಮಾಡಿ ದೇಶದಲ್ಲಿ ಶಾಂತಿ, ಸೌಹಾರ್ದತೆಗೆ ಧಕ್ಕೆ ಮಾಡಲು ಯತ್ನಿಸುತ್ತಿದ್ದಾರೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಸಲಿಂ ನಂದಿಗಟ್ಟಿ, ರಫೀಕ್ ಇನಾಮದಾರ್, ರಾಜೇಸಾಬ ಕುಂಕೂರ, ನೂರಹ್ಮದ ದರ್ಗಾವಾಲೆ, ಲತೀಫ್ ನಾಲಬಂದ್,ಅಲ್ಲಿಖಾನ್ ಪಠಾಣ, ಎಂ.ಎನ್. ದುಂಡಸಿ, ನೂರಹ್ಮದ ಗಡವಾಲೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net