ಭ್ರಷ್ಟ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹ

Apeal To DC
Published on

ದಾಂಡೇಲಿ: ದಾಂಡೇಲಿ, ಹಳಿಯಾಳ, ಜೊಯಿಡಾ ತಾಲೂಕಿನಲ್ಲಿ ಭ್ರಷ್ಟಾಚಾರದಲ್ಲಿ ತೊಡಗಿರುವ ಸರ್ಕಾರಿ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ದಾಂಡೇಲಿ ಮಹಾನಾಯಕ ಡಾ. ಅಂಬೇಡ್ಕರ ಅಭಿಮಾನಿ ಸೇನೆ ಹಾಗೂ ಆದಿ ಜಾಂಬುವಂತ ಸಂಘಟನೆಯ ಪದಾಧಿಕಾರಿಗಳು ಬುಧವಾರ ಜಿಲ್ಲಾಧಿಕಾರಿಗೆ ಲಿಖಿತ ದೂರು ಸಲ್ಲಿಸಿದರು.

ಹಳಿಯಾಳ,ದಾಂಡೇಲಿ, ಜೊಯಿಡಾ ತಾಲೂಕಿನಲ್ಲಿ ಭ್ರಷ್ಟಾಚಾರದಲ್ಲಿ ತೊಡಗಿರುವ ಹೆಸ್ಕಾಂ, ಅರಣ್ಯ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳ ವಿರುದ್ಧ ದೂರು ಸಲ್ಲಿಸಲಾಗಿದೆ. ಈ ಎಲ್ಲ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ಮನವಿಯಲ್ಲಿ ಆಗ್ರಹಿಸಲಾಗಿದೆ.

ಮಹಾನಾಯಕ ಡಾ. ಬಿ.ಆರ್. ಅಂಬೇಡ್ಕರ್ ಸೇನೆ ಹಾಗೂ ಆದಿ ಜಾಂಬವಂತ ಸಂಘಟನೆ ಸಂಸ್ಥಾಪಕ ಉಪಾಧ್ಯಕ್ಷ ಚಂದ್ರಕಾಂತ ನಡಿಗೇರಿ, ಜಿಲ್ಲಾಧ್ಯಕ್ಷ ಬಸವರಾಜ ಹರಿಜನ, ಎಚ್ ಪಿ ಗೋಪಾಲ, ರಾಘು, ಸುನಿಲ, ಸತೀಶ ಚೌಹಾಣ್, ಸರಸ್ವತಿ ಚೌವ್ಹಾಣ, ರೇಣುಕಾ ಮಾದರ, ಯಶ್ವಂತ, ಪ್ರೀತಿ ಸಂಘಟನೆ ಪ್ರಮುಖರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net