ಅಪಘಾತ ಪ್ರಕರಣ ತನಿಖೆಗೆ ಆಗ್ರಹ

KT Shivakumar sene
Published on

ಚಿತ್ರದುರ್ಗ: ಕೆಇಬಿ ಕಲ್ಯಾಣ ಮಂಟಪದ ಮುಂಭಾಗ ಜು.12ರಂದು ಮಧ್ಯರಾತ್ರಿ ಬೈಕ್ ಅಪಘಾತವಾಗಿ ಸವಾರ ರಘುರಾಮ್ ಹಾಗೂ ಎರಡು ಆಕಳು ಸಾವು ಪ್ರಕರಣವನ್ನು ತನಿಖೆ ನಡೆಸಿ, ನೊಂದ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ಕರುನಾಡ ವಿಜಯಸೇನೆ ಜಿಲ್ಲಾಧ್ಯಕ್ಷ ಕೆ.ಟಿ.ಶಿವಕುಮಾರ್ ಒತ್ತಾಯಿಸಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬೈಕ್‌ನಿಂದ ಗುದ್ದಿದ್ದರೆ ಎರಡು ಆಕಳು ಮೃತಪಡುವ ಸಂಭವ ತೀರಾ ಕಡಿಮೆ. ಅಲ್ಲದೆ, ದ್ವಿಚಕ್ರ ವಾಹನವೂ ಹೆಚ್ಚು ಡ್ಯಾಮೇಜ್ ಆಗಿಲ್ಲ. ಹೀಗಾಗಿ ಹಿಂಬದಿಯಿಂದ ಬೇರೊಂದು ವಾಹನ ಡಿಕ್ಕಿ ಹೊಡೆದು ದುರ್ಘಟನೆ ಸಂಭವಿಸರಬೇಕು ಎಂದು ಸಂಶಯ ವ್ಯಕ್ತಪಡಿಸಿದರು.

ಹೆದ್ದಾರಿಯಲ್ಲಿ ರೇಡಿಯಂ ಸ್ಟಿಕ್ಕರ್ ಹಾಕಿಲ್ಲ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳ ನಿರ್ಲಕ್ಷ ಇದಕ್ಕೆ ಕಾರಣ. ಆದ್ದರಿಂದ ಹೆದ್ದಾರಿ ನಿರ್ವಹಣೆಯ ಗುತ್ತಿಗೆದಾರರನ್ನು ಎ-1, ಅಧಿಕಾರಿಗಳನ್ನು ಎ-2 ಆರೋಪಿಗಳಾಗಿ ವಿಚಾರಣೆ ನಡೆಸಿ, ತಪ್ಪಿತಸ್ಥರಿಗೆ ಕಾನೂನು ಕ್ರಮ ಜರುಗಿಸಬೇಕು. ನಗರದ ಎಲ್ಲ ರಸ್ತೆಗಳಲ್ಲೂ ಸಿಗ್ನಲ್ ಅಳವಡಿಸಿ, ಮುಂದೆ ಇಂತಹ ದುರ್ಘಟನೆ ನಡೆಯದಂತೆ ಎಚ್ಚರವಹಿಸಬೇಕು ಎಂದು ಕೋರಿದರು.

ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ವೀಣಾ ಗೌರಣ್ಣ, ಉಪಾಧ್ಯಕ್ಷೆ ರತ್ನಮ್ಮ, ಗೋಪಿ, ಮೃತ ಯುವಕನ ತಂದೆ ಅಣ್ಣಾದೊರೆ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net