ಆರೇ ತಿಂಗಳಲ್ಲಿ ಕಟ್ಟಡ ಫಿನಿಶ್!: ನ್ಯೂಪಡ್ಪು ಶಾಲೆ ಆಂಗ್ಲಮಾಧ್ಯಮ ಕಲಿಕೆಗೆ ಅನುಕೂಲ : ಅಕ್ಷರ ದಾಸೋಹ ಕೊಠಡಿಗೆ ಬೇಡಿಕೆ

New Project (19)
Published on

ಅನ್ಸಾರ್ ಇನೋಳಿ ಉಳ್ಳಾಲ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬರ ಶ್ರಮದ ಪ್ರತೀಕ ಎನಿಸಿರುವ ನ್ಯೂಪಡ್ಪು ಪ್ರಾಥಮಿಕ ಶಾಲೆಯ ನೂತನ ಕಟ್ಟಡ ಕಾಮಗಾರಿ ಕೇವಲ ಆರು ತಿಂಗಳಲ್ಲೇ ಮುಗಿದು ಎದ್ದುನಿಂತಿದೆ. ಇದರಿಂದ ಕಟ್ಟಡ ಕೊರತೆ ನಿವಾರಣೆಯಾಗಿ ಆಂಗ್ಲಮಾಧ್ಯಮ ಕಲಿಕೆಗೆ ಅನುಕೂಲ ಕಲ್ಪಿಸಿದೆ. ಹರೇಕಳ ಹಾಜಬ್ಬರ ಹಲವು ವರ್ಷಗಳ ಪ್ರಯತ್ನದ ಫಲವಾಗಿ 1999-2000ನೇ ಇಸವಿಯಲ್ಲಿ ಶಾಲೆ ಆರಂಭಿಸಲಾಗಿತ್ತು. 2023ನೇ ಸಾಲಿನಿಂದಲೇ ಇಲ್ಲಿ ಎಲ್‌ಕೆಜಿ ತರಗತಿ ಆರಂಭಿಸಲಾಗಿದ್ದು, ಹೈನೋದ್ಯಮಿ ಮೈಮೂನ ಅವರು ಶಿಕ್ಷಕರ ವೇತನ ಪಾವತಿಸುವ ಮೂಲಕ ಶಾಲೆಗೆ ಬಲ ತುಂಬಿದ್ದರು. ಕಳೆದ ಬಾರಿ ಎಲ್‌ಕೆಜಿಯಿಂದ 7ನೇ ತರಗತಿವರೆಗೆ 129 ವಿದ್ಯಾರ್ಥಿಗಳಿದ್ದರೆ, ಈ ಬಾರಿ ಎಲ್‌ಕೆಜಿ, ಯುಕೆಜಿ, ಸಹಿತ 7ನೇ ತರಗತಿವರೆಗೆ ಒಟ್ಟು 135 ಮಕ್ಕಳಿದ್ದಾರೆ. ಆದರೆ ಶಾಲೆಗೆ ಕೊಠಡಿಗಳ ಕೊರತೆ ಕಂಡು ಬಂದ ಹಿನ್ನೆಲೆಯಲ್ಲಿ ಸ್ಪೀಕರ್ ಅನುದಾನದಲ್ಲಿ ಕಳೆದ ವರ್ಷ ನವೆಂಬರ್ ತಿಂಗಳ 18ರಂದು ನಾಲ್ಕು ಕೊಠಡಿಗಳ ಕಟ್ಟಡ ನಿರ್ಮಾಣ ಕೆಲಸಕ್ಕೆ ಚಾಲನೆ ನೀಡಲಾಗಿತ್ತು. ಕೇವಲ ಆರು ತಿಂಗಳಲ್ಲೇ ಕಟ್ಟಡ ಎದ್ದು ನಿಂತಿದ್ದು ಶನಿವಾರ ಕಟ್ಟಡ ಉದ್ಘಾಟಿಸಲಾಗಿದೆ. ಎಲ್‌ಕೆಜಿ, ಯು.ಕೆ.ಜಿ. ಹಾಗೂ ಇನ್ನೆರಡು ತರಗತಿಗಳ ಮಕ್ಕಳು ನೂತನ ಕಟ್ಟಡದಲ್ಲಿ ಅಕ್ಷರ ಜ್ಞಾನ ಪಡೆಯಲಿದ್ದಾರೆ. ಬೇಕಿದೆ ಸುಸಜ್ಜಿತ ಅಡುಗೆ ಕೋಣೆ: ಶಾಲಾ ಮಕ್ಕಳಿಗೆ ಅಕ್ಷರ ದಾಸೋಹ ವ್ಯವಸ್ಥೆಗೆ ಕಟ್ಟಡ ಇದೆ. ಇದು ಆರ್‌ಸಿಸಿ ಆಗಿದ್ದರೂ ಹಿಂಬಾಗದ ಗೋಡೆ ತಡೆಗೋಡೆಗೆ ತಾಗಿಕೊಂಡೇ ಇರುವುದರಿಂದ ಮಳೆಗಾಲದಲ್ಲಿ ಗೋಡೆಯ ಮೂಲಕ ನೀರು ಬರುತ್ತದೆ. ಇದರಿಂದಾಗಿ ಇಲ್ಲಿ ಆಹಾರ ಆಹಾರ ಸಾಮಗ್ರಿಗಳನ್ನು ಬೆಂಚುಗಳ ಮೇಲೆ ಇಡಲಾಗಿದೆ. ಈ ನಿಟ್ಟಿನಲ್ಲಿ ಅಕ್ಷರ ದಾಸೋಹಕ್ಕೆ ಉತ್ತಮ ಕಟ್ಟಡ ಅಗತ್ಯವಿದೆ.\

ಉದ್ಘಾಟನಾ ಸಮಾರಂಭ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಕಟ್ಟಡ ಉದ್ಘಾಟಿಸಿದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಮಿನಾಝ್ ಅಧ್ಯಕ್ಷತೆ ವಹಿಸಿದ್ದರು. ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ, ತಾಪಂ ಮಾಜಿ ಸದಸ್ಯ ಮಹಮ್ಮದ್ ಮುಸ್ತಫಾ ಮಲಾರ್, ನ್ಯೂಪಡ್ಪು ಮಸೀದಿ ಖತೀಬ್ ಮುಹಮ್ಮದ್ ಮುಶ್ತಾಕ್ ಕಾಮಿಲ್ ಸಖಾಫಿ ಮಾತನಾಡಿದರು. ಹರೇಕಳ ಗ್ರಾಪಂ ಅಧ್ಯಕ್ಷೆ ಗುಲಾಬಿ, ಉಪಾಧ್ಯಕ್ಷ ಎಂ.ಪಿ.ಅಬ್ದುಲ್ ಮಜೀದ್, ಸದಸ್ಯರಾದ ಕಲ್ಯಾಣಿ, ಅಬ್ದುಲ್ ಸತ್ತಾರ್ ಬಾವಲಿಗುರಿ, ಅಬೂಬಕ್ಕರ್ ಸಿದ್ಧೀಕ್, ಎಸ್.ಎಂ.ಬಶೀರ್, ಮಾಜಿ ಅಧ್ಯಕ್ಷ ಎಚ್.ಶಾಲಿ, ಹೈನೋದ್ಯಮಿ ಮೈಮೂನಾ ಹರೇಕಳ, ಅಂಬ್ಲಮೊಗರು ಗ್ರಾಪಂ ಅಧ್ಯಕ್ಷ ಮೊಹಮ್ಮದ್ ಇಕ್ಬಾಲ್, ಶಿಕ್ಷಣ ಇಲಾಖೆ ಉಪನಿರ್ದೇಶಕ ಗೋವಿಂದ ಮಡಿವಾಳ್, ತಾಪಂ ಕಾರ್ಯನಿರ್ವಹಣಾಧಿಕಾರಿ ಗುರುದತ್, ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಆರ್.ಈಶ್ವರ್, ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಡಾ.ಮುಸ್ತಫಾ, ಶಿಕ್ಷಣ ಸಂಯೋಜಕ ವಿಶ್ವನಾಥ್ ಮೊದಲಾದವರು ಉಪಸ್ಥಿತರಿದ್ದರು. ಮುಖ್ಯಶಿಕ್ಷಕಿ ರಾಜೇಶ್ವರಿ ಸ್ವಾಗತಿಸಿದರು. ನಿಕಟಪೂರ್ವ ಅಧ್ಯಕ್ಷ ಬದ್ರುದ್ದೀನ್ ಫರೀದ್ ನಗರ ಪ್ರಾಸ್ತಾವಿಕವಾಗಿ ಮಾತನಾಡಿದರು. ನಾಗರಾಜ್ ಪಟಗಾರ ಕಾರ್ಯಕ್ರಮ ನಿರೂಪಿಸಿದರು.

ಈ ಕಟ್ಟಡ ಕೇವಲ ಶಾಲೆ ಮಾತ್ರವಲ್ಲ, ಭವಿಷ್ಯದ ಹರೇಕಳ, ಭಾರತ ನಿರ್ಮಾಣದ ವೇದಿಕೆಯಾಗಿದೆ. ಊರಿನ ಶ್ರಮ, ಬದ್ಧತೆ, ಸಂಸ್ಕೃತಿಯ ಪ್ರತೀಕ. ಸಾಧ್ಯವಾದಷ್ಟು ಸಹಕಾರ ತಾಯಂದಿರು, ಸಂಘ ಸಂಸ್ಥೆಗಳು ನೀಡಬೇಕು. ಶಿಕ್ಷಕರು ಕರೆದಾಗ ಶಾಲೆಗೆ ಬಂದು ಚರ್ಚಿಸಿ ಹೋಗುವಷ್ಟು ಸಮಯ ಮಕ್ಕಳಿಗಾಗಿ ಪಾಲಕರು ಮೀಸಲಿಡಿ. ಯು.ಟಿ.ಖಾದರ್, ವಿಧಾನಸಭಾಧ್ಯಕ್ಷ ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳಿಗಿಂತ ಯಾವುದೇ ವಿಷಯದಲ್ಲೂ ಕಡಿಮೆಯಿಲ್ಲ, ಈ ಶಾಲೆ ಉಳಿಯಬೇಕಾದರೆ ಸರ್ಕಾರ ಮತ್ತು ಗ್ರಾಮಸ್ಥರ ಸಹಕಾರ ಅಗತ್ಯ. ಪದವಿಪೂರ್ವ ಕಾಲೇಜಿಗೆ ಸಜಿಪದಿಂದಲೂ ವಿದ್ಯಾರ್ಥಿಗಳು ಬರುತ್ತಿದ್ದು ನೂತನ ಕಟ್ಟಡ ನಿರ್ಮಾಣಕ್ಕೆ ಏಳು ಕೋಟಿ ಅನುದಾನ ಅಗತ್ಯವಿದೆ. ಸದ್ಯಕ್ಕೆ ಎರಡು ಕೋಟಿ ಬಿಡುಗಡೆ ಮಾಡಿದರೆ ಕಟ್ಟಡ ನಿರ್ಮಿಸುತ್ತೇವೆ. ಹರೇಕಳ ಹಾಜಬ್ಬ, ಪದ್ಮಶ್ರೀ ಪುರಸ್ಕೃತ ಶಾಲೆಗೆ ತರಗತಿ ಕೊರತೆಯಿಂದ ಪಾಲಕರು ಮಕ್ಕಳನ್ನು ಕಳಿಸಲು ಹಿಂದೇಟು ಹಾಕಿದ್ದರು. ಶಿಕ್ಷಕರೂ ವರ್ಗಾವಣೆಗಾಗಿ ಕೇಳಿಕೊಂಡಿದ್ದರು. ಕಟ್ಟಡದ ಕೊರತೆ ನೀಗಿಸುವ ಬಗ್ಗೆ ನೀಡಿದ್ದ ಭರವಸೆ ಸ್ಪೀಕರ್ ಈಡೇರಿಸಿದ್ದಾರೆ. ಬದ್ರುದ್ದೀನ್ ಫರೀದ್ ನಗರ, ನಿಕಟಪೂರ್ವ ಅಧ್ಯಕ್ಷ, ಹರೇಕಳ ಗ್ರಾಪಂ https://www.vijayavani.net/entrance-ceremony-congratulations-to-meritorious-students https://www.vijayavani.net/anti-drug-day-2

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net