ಅಸ್ಪಶ್ಯ ಅಲೆಮಾರಿ ಸಮುದಾಯಕ್ಕೆ ಶೇ. 1 ಮೀಸಲಾತಿಗೆ ಒತ್ತಾಯ

Demand for 1% reservation for untouchable nomadic community
Published on

ವಿಜಯಪುರ:ಅಸ್ಪಶ್ಯ ಅಲೆಮಾರಿ ಸಮುದಾಯಗಳಿಗೆ ಪ್ರತ್ಯೇಕ ಶೇ.1 ರಷ್ಟು ಮೀಸಲಾತಿ ನೀಡುವಂತೆ ಒತ್ತಾಯಿಸಿ ಜಿಲ್ಲಾ ಅಹಿಂದ ಮುಖಂಡ ಸೋಮನಾಥ ಕಳ್ಳಿಮನಿ ನೇತೃತ್ವದಲ್ಲಿ ಸಮಾಜದವರು ಸೋಮವಾರ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಮುಖಂಡ ಸೋಮನಾಥ ಕಳ್ಳಿಮನಿ ಮಾತನಾಡಿ, ಒಳ ಮೀಸಲಾತಿಯಲ್ಲಿ ಅಸ್ಪಶ್ಯ ಅಲೆಮಾರಿ ಸಮುದಾಯಗಳಾದ ಡೊಂಬರು, ದುರಗ ಮುರಗಿ, ಸುಡುಗಾಡ ಸಿದ್ಧ, ಬುಡುಗ ಜಂಗಮ, ಜೋಗಿ, ಹಂದಿ ಜೋಗಿ, ಚನ್ನದಾಸ ಹೀಗೆ ಅನೇಕರು ರ್ನಿದಿಷ್ಟ ವಾಸ ಸ್ಥಳವಿಲ್ಲದೆ ಹೊಟ್ಟೆಪಾಡಿಗಾಗಿ ನಿರಂತರವಾಗಿ ಸ್ಥಳದಿಂದ ಸ್ಥಳಕ್ಕೆ ಸಂಚರಿಸುತ್ತಾರೆ. ಅವರ ವೃತ್ತಿ, ಭಾಷೆ, ಜೀವನ, ಆಹಾರ, ಸಂಸತಿ ಸಹ ವಿಶಿಷ್ಟವಾಗಿದ್ದು, ಸರಕಾರಿ ಸೌಲಭ್ಯಗಳು ಮತ್ತು ಶಿಕ್ಷಣದಿಂದ ಬಹುದೂರ ಇದ್ದಾರೆ ಎಂದರು.

ಈಗ ಅಂತಹ ಸಮುದಾಯದವರನ್ನು ಅಸ್ಪಶ್ಯ ಸಮಾಜದೊಂದಿಗೆ ಸೇರಿಸಿದ್ದು ಅಸ್ಪಶ್ಯರಾದ ಈ ಜನಾಂಗವನ್ನು ಅಲ್ಲಿಂದ ಬೇರ್ಪಡಿಸಿ ಶೇ. 1 ರಷ್ಟು ಮೀಸಲಾತಿ ನೀಡಬೇಕು. ಅದು ಈ ಸಮುದಾಯಗಳ ಹಕ್ಕಾಗಿದೆ. ಅದೇನು ಭಿೆಯಲ್ಲ. ಬಸವ, ಅಂಬೇಡ್ಕರ್​ ಅವರ ಸಮಬಾಳು ಸಮಪಾಲು ತತ್ವ ಪ್ರತಿಪಾದಿಸುತ್ತ ಬಂದ ಮುಖ್ಯಮಂತ್ರಿಗಳಿಂದಲೇ ಮಾತ್ರ ಸಾಮಾಜಿಕ ನ್ಯಾಯ ನಿರೀಸಲು ಸಾಧ್ಯ. ಅವರನ್ನು ಕತ್ತಲೆಯಿಂದ ಬೆಳಕಿಗೆ ತರುವ ಕೆಲಸ ಮಾಡಬೇಕೆಂದು ಒತ್ತಾಯಿಸಿದರು.

ಅಹಿಂದ ಮುಖಂಡರಾದ ಮಲ್ಲು ಬಿದರಿ, ಸಂಜು ಕಂಬಾಗಿ, ಮಳಸಿದ್ದ ನಾಯ್ಕೋಡಿ, ಗುರು ಗುಡಿಮನಿ, ಸಿದ್ದರಾಮ ಪೂಜಾರಿ, ಸುರೇಶ ಗೊಣಸಗಿ, ಭಜರಂಗ ಬಹರೂಪಿ, ಬೀರಪ್ಪ ಕಿಲಾರಿ, ಲಕ್ಷ$್ಮಣ ಕೋಳಿ, ಸಾಬು ಪೂಜಾರಿ ಮತ್ತಿತರರಿದ್ದರು.

* ಫೋಟೋ : ಎಂಎಂ 1&3

ಅಸ್ಪಶ್ಯ ಅಲೆಮಾರಿ ಸಮುದಾಯಗಳಿಗೆ ಪ್ರತ್ಯೇಕ ಶೇ. 1ರಷ್ಟು ಮೀಸಲಾತಿ ನೀಡಲು ಆಗ್ರಹಿಸಿ ಅಹಿಂದ ಮುಖಂಡರು ವಿಜಯಪುರದಲ್ಲಿ ಜಿಲ್ಲಾಧಿಕಾರಿ ಡಾ. ಆನಂದ ಕೆ. ಅವರಿಗೆ ಮನವಿ ಸಲ್ಲಿಸಿದರು. ಸೋಮನಾಥ ಕಳ್ಳಿಮನಿ, ಮಲ್ಲು ಬಿದರಿ, ಮಳಸಿದ್ದ ನಾಯ್ಕೋಡಿ ಮತ್ತಿತರರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net