ಸಿಎಂಗೆ ಅವಮಾನಿಸಿದವನ ವಿರುದ್ಧ ಕ್ರಮಕ್ಕೆ ಆಗ್ರಹ

Demand action against whoever insulted CM
ಸಿಂದಗಿ ತಾಲೂಕಿನ ಬೋರಗಿ ಗ್ರಾಮದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಸಿಎಂಗೆ ಅವಮಾನಿಸಿದ ವ್ಯಕ್ತಿಯ ಮೇಲೆ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿ ಗ್ರೇಡ್​&2 ತಹಸೀಲ್ದಾರ ಆಯ್​.ಜೆ. ಬಳಗಾನೂರ ಅವರಿಗೆ ಮನವಿ ಸಲ್ಲಿಸಲಾಯಿತು. ಭೀಮನಗೌಡ ಪಾಟೀಲ, ದಯಾನಂದ ನಾಲವಾರ, ನಿತ್ಯಾನಂದ ಕಟ್ಟಿಮನಿ, ನಿಂಗಣ್ಣ ಬಿರಾದಾರ, ಮುತ್ತುಗೌಡ ಪಾಟೀಲ, ಹಸನಾಜ ದೊಡಮನಿ ಮತ್ತಿತರರಿದ್ದಾರೆ.
Published on

ಸಿಂದಗಿ: ಭಾನುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅವಮಾನಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದ್ದ ವ್ಯಕ್ತಿಯ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ತಾಲೂಕಿನ ಬೋರಗಿ ಗ್ರಾಮದಲ್ಲಿ ಸೋಮವಾರ ಪ್ರತಿಭಟನೆ ನಡೆಸಿ ಗ್ರೇಡ್​&2 ತಹಸೀಲ್ದಾರ ಆಯ್​.ಜೆ. ಬಳಗಾನೂರ ಅವರಿಗೆ ಮನವಿ ಸಲ್ಲಿಸಲಾಯಿತು.

ಪಂಚಮಸಾಲಿ ಮೀಸಲಾತಿ ಹೋರಾಟದ ಹಿನ್ನಲೆಯಲ್ಲಿ ಗ್ರಾಮದ ಈರಣ್ಣ ಬಸವಂತ್ರಾಯ ರಟಗಲ್ಲ ಎಂಬ ವ್ಯಕ್ತಿ ತನ್ನ ೇಸ್​ಬುಕ್​ ಖಾತೆಯಲ್ಲಿ ಸಿದ್ದರಾಮಯ್ಯ ಅವರ ಭಾವಚಿತ್ರದ ಮೇಲೆ ಚಪ್ಪಲಿಯಿರಿಸಿ, ಅವರ ತೇಜೋವಧೆಯ ಜತೆಗೆ ಜಾತಿ ನಿಂದನೆ ಮಾಡಿದ್ದಾನೆ. ಆದ್ದರಿಂದ ಪೊಲೀಸರು ಸ್ವಯಂ ದೂರು ದಾಖಲಿಸಿಕೊಂಡು ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಭೀಮನಗೌಡ ಪಾಟೀಲ, ದಯಾನಂದ ನಾಲವಾರ, ನಿತ್ಯಾನಂದ ಕಟ್ಟಿಮನಿ, ನಿಂಗಣ್ಣ ಬಿರಾದಾರ, ಮುತ್ತುಗೌಡ ಪಾಟೀಲ, ಹಸನಾಜ ದೊಡಮನಿ, ಬಸವರಾಜ ಬಿರಾದಾರ, ಮಹಾದೇವಪ್ಪ ಚಾವರ, ಗಂಗಾಧರ ಸೋಮನಾಯಕ, ವಿನೋದ ಕರನಾಳ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net