

ನರಗುಂದ: ವಾಲ್ಮೀಕಿ ಸಮಾಜದವರ ಕುರಿತು ಅವಹೇಳಕಾರಿ ಪದ ಬಳಸಿ ನಿಂದಿಸಿರುವ ಮಾಜಿ ಸಂಸದ ರಮೇಶ ಕತ್ತಿ ಅವರ ವಿರುದ್ಧ ನರಗುಂದ ತಾಲೂಕು ಶ್ರೀಆದಿಕವಿ ಮಹರ್ಷಿ ವಾಲ್ಮೀಕಿ ಸಮಾಜದ ಸೇವಾ ಸಮಿತಿ ಸದಸ್ಯರು ಪಟ್ಟಣದ ಪೊಲೀಸ್ ಠಾಣೆಯಲ್ಲಿ ಗುರುವಾರ ದೂರು ದಾಖಲಿಸಿದರು.
ಬೆಳಗಾವಿ ಬಿಡಿಸಿಸಿ ಬ್ಯಾಂಕ್ ನಿರ್ದೇಶಕರ ಚುನಾವಣೆ ಸಂದರ್ಭದಲ್ಲಿ ಹುಕ್ಕೇರಿ ತಾಲೂಕು ಬೆಲ್ಲದ ಬಾಗೇವಾಡಿಯ ಮಾಜಿ ಸಂಸದ ರಮೇಶ ಕತ್ತಿ ಅವರು ವಾಲ್ಮೀಕಿ ಸಮಾಜದವರ ಕುರಿತು ಅವಾಚ್ಯ ಪದ ಬಳಸಿ ನಿಂದಿಸಿದ್ದಾರೆ. ನಮ್ಮ ಸಮಾಜದ ಬಗ್ಗೆ ನಿಂದಿಸುತ್ತಿರುವಾಗ ಅಥಣಿ ಶಾಸಕ ಲಕ್ಷ್ಮಣ ಸವದಿ, ಇನ್ನಿತರರು ಕಿಚಾಯಿಸಿ ನಕ್ಕಿದ್ದು ಅವಮಾನಕರ ಸಂಗತಿ. ಇದು ಪರಿಶಿಷ್ಟ ಜಾತಿ, ಪಂ. ಪಂಗಡದವರಿಗೆ ಮಾಡಿರುವ ಅನ್ಯಾಯವಾಗಿದೆ ಎಂದು ಸಮಾಜದ ತಾಲೂಕು ಅಧ್ಯಕ್ಷ ಭೀಮಪ್ಪ ಕಡ್ಲಿಕೊಪ್ಪ ಹೇಳಿದ್ದಾರೆ.
ವೈ.ಎಫ್.ಸಂಗ್ರೇಶಿ, ಭೀಮಪ್ಪ ತಳವಾರ, ಹುಲಿಯಪ್ಪ ನಾಯ್ಕರ, ಎಂ.ಎಸ್.ತಳವಾರ, ಹನುಮಪ್ಪ ದೊಡಮನಿ, ಸಿದ್ಧಪ್ಪ ವಾಲ್ಮೀಕಿ, ಸುರೇಶ ಅರಹುಣಸಿ, ಹೇಮಪ್ಪ ವಾಲ್ಮೀಕಿ, ಬಸವರಾಜ ತಳವಾರ, ವಿಠ್ಠಲ ಪೂಜಾರ, ಯಲ್ಲಪ್ಪ ಬೆಳ್ಳೇರಿ, ಚಿದಾನಂದ ಸುರೇಬಾನ, ಮಹೇಶ ತಳವಾರ, ಇತರರಿದ್ದರು.