ಕಿಡಿಗೇಡಿಗಳ ವಿರುದ್ಧ ಕ್ರಮಕ್ಕೆ ಆಗ್ರಹ

26kls1
Published on

ಕಳಸ: ಹೊರನಾಡು ಅನ್ನಪೂರ್ಣೇಶ್ವರಿ ದೇವಿ ಹಾಗೂ ದೇವಸ್ಥಾನದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲವಾಗಿ ಕಾಮೆಂಟ್ ಮಾಡಿರುವ ಕಿಡಿಗೇಡಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ದೇವಾಲಯದ ಭಕ್ತರು ಕಳಸ ಠಾಣೆಗೆ ದೂರು ನೀಡಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಹಿಂದು ದೇವಾಲಯಗಳ ಬಗ್ಗೆ ಅಂಜುಮ್ ಶೇಖ್ ಹೆಸರಿನಲ್ಲಿ ಕಾಮೆಂಟ್ ಹರಿಬಿಡಲಾಗಿದ್ದು, ಇದು ಧಾರ್ಮಿಕ ಸಾಮರಸ್ಯಕ್ಕೆ ಧಕ್ಕೆ ತರುವಂತಿದೆ. ಜಾಲತಾಣದಲ್ಲಿ ಅಶ್ಲೀಲ ಮತ್ತು ಅಸಹ್ಯಕರ ಸಂದೇಶವನ್ನು ನಕಲಿ ಖಾತೆ ಸೃಷ್ಟಿಸಿ ಮಾಡಲಾಗಿದೆಯೇ ಅಥವಾ ಕೋಮು ಸಾಮರಸ್ಯ ಹಾಳುಮಾಡಲಿಕ್ಕೆಂದೇ ಮಾಡಲಾಗಿದೆಯೇ ಎಂಬುದನ್ನು ಪತ್ತೆಹಚ್ಚಬೇಕು. ಇಂತಹ ನೀಚ ಕೆಲಸ ಮಾಡಿರುವ ವ್ಯಕ್ತಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ದೇವಸ್ಥಾನದ ಭಕ್ತರಾದ ಅಜಿತ್, ಸತೀಶ್, ಗಣೇಶ್, ಹರ್ಷೇಂದ್ರ ಜೈನ್, ಸತ್ಯೇಂದ್ರ ಜೈನ್, ನಾಗ್‌ಕುಮಾರ್, ಸಂತೋಷ್, ಸುಬ್ರಹ್ಮಣ್ಯ ಭಟ್, ಶ್ರೇಣಿಕ್, ಮಹವೀರ, ಪ್ರಜ್ವಲ್ ಜೈನ್, ಧನುಷ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net