ಶಾಂತಿ ಕದಡುವವರ ವಿರುದ್ಧ ಕ್ರಮಕ್ಕೆ ಆಗ್ರಹ

MANAVI
Published on

ಕಲಘಟಗಿ: ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಗ್ರಾಮದ ಜೈನಮುನಿ ಕಾಮಕುಮಾರ ನಂದಿ ಅವರ ಹತ್ಯೆ ಪ್ರಕರಣ ಖಂಡಿಸಿ ತಾಲೂಕಿನ ಜೈನ ಸಮಾಜದ ವ್ಯಾಪಾರಸ್ಥರು ಗುರುವಾರ ವ್ಯಾಪಾರ ವಹಿವಾಟು ಸ್ಥಗಿತಗೊಳಿಸಿ ಗ್ರೇಡ್ 2 ತಹಸೀಲ್ದಾರ್ ಬಸವರಾಜ ಹೊಂಕಣ್ಣವರಗೆ ಮನವಿ ಸಲ್ಲಿಸಿದರು.

ಸಮಾಜದ ಶಾಂತಿ ಕದಡುವವರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು. ಜೈನ ಮುನಿಗಳಿಗೆ ಸೂಕ್ತ ರಕ್ಷಣೆ ಒದಗಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಜೈನ ಸಮಾಜದ ತಾಲೂಕು ಅಧ್ಯಕ್ಷ ಕಿರಣ ಅಳಗವಾಡಿ, ನಾಗರಾಜ ಕಡಬಿ, ಶೀತಲ ಸಾಬಣ್ಣವರ, ಪ್ರದೀಪ ಬಾಳಿಕಾಯಿ, ನವೀನ ಅಳಗವಾಡಿ, ಮಹಾವೀರ ಪರವಾಪೂರ, ಶರದಕುಮಾರ ಪಟ್ಟಣಶೆಟ್ಟಿ, ರವೀಂದ್ರ ರಂಗೊಳ್ಳಿ, ಶಿವರಾಯ ರಗಪ್ಪನವರ, ಪ್ರವೀಣ ಇಜಾರಿ, ಭೀಮರಾಯ ದೇವಲಾಪೂರ, ಭರತೇಶ ಉಪಾಧ್ಯ, ಬಸವರಾಜ ಕಳಸಣ್ಣವರ, ಅರ್ಜುನ ಪಾಯಪ್ಪನವರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net