ಎಂ.ಬಿ.ಶ್ರೀನಿವಾಸ್ ಜನಸ್ನೇಹಿ ಹೋರಾಟಗಾರ: ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಸಭಾಧ್ಯಕ್ಷೆ ಡಾ.ಮೀರಾ ಹೇಳಿಕೆ

Delivery of wheelchair to Mims mandya
Published on

ಮಂಡ್ಯ: ಪ್ರಗತಿಪರ ಹೋರಾಟಗಾರ ಎಂ.ಬಿ.ಶ್ರೀನಿವಾಸ್ ಜನಸ್ನೇಹಿಯಾಗಿದ್ದರು ಎಂದು ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಜಿಲ್ಲಾ ಸಭಾಧ್ಯಕ್ಷೆ ಡಾ.ಮೀರಾ ಶಿವಲಿಂಗಯ್ಯ ಹೇಳಿದರು.

ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಮಿಮ್ಸ್)ನಲ್ಲಿ ಡಾ.ಎಂ.ಬಿ.ಶ್ರೀನಿವಾಸ್ ಪ್ರತಿಷ್ಠಾನ ಹಾಗೂ ದಲಿತ ಸಂಘರ್ಷ ಸಮಿತಿ ವತಿಯಿಂದ ಆಯೋಜಿಸಿದ್ದ ಹೋರಾಟಗಾರ ಎಂ.ಬಿ.ಶ್ರೀನಿವಾಸ್ ಸ್ಮರಣೆ ಅಂಗವಾಗಿ ವೀಲ್‌ಚೇರ್ ಹಾಗೂ ಒಳರೋಗಿಗಳಿಗೆ ಹಣ್ಣು-ಹಂಪಲು ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಪ್ರಗತಿಪರ ಹೋರಾಟಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದ ಎಂ.ಬಿ.ಶ್ರೀನಿವಾಸ್ ಅವರ ಹೆಸರನ್ನು ಉಳಿಸಲು ಸಾಮಾಜಿಕ ಸೇವೆ ಮಾಡಲು ಕುಟುಂಬ ಸಂಕಲ್ಪ ಮಾಡಿದೆ. ಪ್ರತಿಷ್ಠಾನ ಕಟ್ಟಿ ಮತ್ತಷ್ಟು ಸೇವೆ ಮಾಡಲು ಸನ್ನದ್ದರಾಗಿರುವುದು ಉತ್ತಮ. ಇನ್ನಷ್ಟು ಉನ್ನತ ಮಟ್ಟದಲ್ಲಿ ಪ್ರತಿಷ್ಠಾನ ಬೆಳೆಯಲಿ. ಸರ್ಕಾರಗಳು ಎಲ್ಲ ಸೇವಾ ಕಾರ್ಯಗಳನ್ನು ಮಾಡಲು ಆಗಲ್ಲ. ಆದ್ದರಿಂದ ಸರ್ಕಾರ ಹಾಗೂ ಜನರ ನಡುವೆ ಪ್ರತಿಷ್ಠಾನ ಎನ್.ಜಿ.ಓ ರೀತಿ ಸೇವೆ ಮಾಡಲಿದೆ. ಅವಶ್ಯಕದೆ ಇದೆಯೋ ಅಂತಹ ಸೇವಾಕಾರ್ಯಗಳನ್ನು ಸಮಾಜಮುಖಿಯಾಗಿ ಮಾಡಲಿ ಎಂದರು.

ಪ್ರತಿಷ್ಠಾನದ ಮುಖ್ಯಸ್ಥ ರಾಹುಲ್ ಮಾತನಾಡಿ, ಪ್ರತಿಷ್ಠಾನದ ಮೂಲಕ ಅಗತ್ಯ ಸೇವೆಯನ್ನು ಸಮಾಜಕ್ಕೆ ನೀಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಸೇವಾ ಕಾರ್ಯ ಮಾಡಲು ಸಂಕಲ್ಪ ಮಾಡಿದ್ದೇವೆ. ಇದನ್ನು ಕಾರ್ಯಗತ ಮಾಡಲು ಎಲ್ಲರ ಸಹಕಾರ ಕೋರುತ್ತೇವೆ ಎಂದು ಮನವಿ ಮಾಡಿದರು.

ಮಿಮ್ಸ್ ನಿರ್ದೇಶಕ ಡಾ.ನರಸಿಂಹಸ್ವಾಮಿ, ವೈದ್ಯಕೀಯ ಅಧೀಕ್ಷಕ ಡಾ.ಜಿ.ಶಿವಕುಮಾರ್, ಮನ್‌ಮುಲ್ ನಿರ್ದೇಶಕ ಉಮ್ಮಡಹಳ್ಳಿ ಶಿವಪ್ಪ, ಸಮಾಜಸೇವಕ ಬಿ.ಆರ್.ಸುರೇಶ್, ಶೋಭಾ ಶ್ರೀನಿವಾಸ್, ಪ್ರಿಯಾಂಕಾ, ಮುಖಂಡರಾದ ಸಾತನೂರು ಜಯರಾಂ, ದೇವರಾಜ್ ಕೊಪ್ಪ, ಎಂ.ವಿ.ಕೃಷ್ಣ, ಹಲಗಯ್ಯ, ಶಿವಣ್ಣ, ಜವರಪ್ಪ, ಪವನ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net