

ಹೆಬ್ರಿ: ಹೆಬ್ರಿ ಗಿಲ್ಲಾಲಿಯ ನಿವಾಸಿ ವಿಜಯ ಅನಾರೋಗ್ಯದಿಂದ ಖಾಸಗಿ ಆಸ್ಪತ್ರೆಯಲ್ಲಿದ್ದು, ಅವರ ಚಿಕಿತ್ಸೆಗಾಗಿ ಕಾರ್ಕಳ ಹೆಬ್ರಿ ಮರಾಠಿ ಸೇವಾ ಸಂಘ ವತಿಯಿಂದ 25,000 ಚೆಕ್ಕನ್ನು ಪತಿ ದಯಾನಂದ ನಾಯ್ಕಗೆ ಸಂಘದ ಅಧ್ಯಕ್ಷ ಶೇಖರ ಕಡ್ತಲ ಹಸ್ತಾಂತರಿಸಿದರು. ಸಂಘ ಉಪಾಧ್ಯಕ್ಷರಾದ ಸುಧಾಕರ ನಾಯ್ಕ, ಸುಗಂಧಿ ನಾಯ್ಕ, ಕಾರ್ಯದರ್ಶಿ ಹರೀಶ್, ಕೋಶಾಧಿಕಾರಿ ಶ್ರೀನಿವಾಸ ನಕ್ರೆ, ಸದಸ್ಯರಾದ ಕೃಷ್ಣ ನಾಯ್ಕ ಬಚ್ಚಪ್ಪು, ಶೀನ ನಾಯ್ಕ, ಮಹೇಶ್ ಉಪಸ್ಥಿತರಿದ್ದರು.