ರೋಟರಿ ಕಾಫಿಲ್ಯಾಂಡ್‌ನಿಂದ ರುದ್ರಭೂಮಿಗೆ ಶವದಹನ ಪೆಟ್ಟಿಗೆ ವಿತರಣೆ

19 ckm 4
ಚಿಕ್ಕಮಗಳೂರು ರಾಮನಹಳ್ಳಿಯಲ್ಲಿರುವ ಸ್ಮಶಾನಕ್ಕೆ ೩ ಲಕ್ಷ ರೂ. ವೆಚ್ಚದಲ್ಲಿ ಎರಡು ಶವದಹನ ಪೆಟ್ಟಿಗೆಯನ್ನು ಮಂಗಳವಾರ ಜಿಲ್ಲಾ ರೋಟರಿ ಕಾಫಿಲ್ಯಾಂಡ್‌ನಿಂದ ಉಚಿತವಾಗಿ ಕೊಡುಗೆ ನೀಡಲಾಯಿತು. ಕಾಫಿಲ್ಯಾಂಡ್ ಅಧ್ಯಕ್ಷ ತನೋಜ್‌ನಾಯ್ಡು, ಕಾರ್ಯದರ್ಶಿ ನಾಗೇಶ್ ಕೆಂಜಿಗೆ, ಚೇರ್ಮನ್ ಬಿ.ಎನ್. ಸುರೇಶ್, ಮಾಜಿ ಅಧ್ಯಕ್ಷ ಎಚ್.ಎನ್.ಪ್ರಕಾಶ್, ನಗರಸಭಾಧ್ಯಕ್ಷ ವರಸಿದ್ಧಿ ವೇಣುಗೋಪಾಲ್, ನಗರಸಭೆ ಸದಸ್ಯ ಲಕ್ಷ್ಮಣ್ ಮತ್ತಿತರರಿದ್ದರು.
Published on

ಚಿಕ್ಕಮಗಳೂರು: ನಗರದ ರಾಮನಹಳ್ಳಿ ಸಮೀಪವಿರುವ ಹಿಂದೂ ರುದ್ರಭೂಮಿಗೆ ೩ ಲಕ್ಷ ರೂ. ವೆಚ್ಚದಲ್ಲಿ ಎರಡು ಶವದಹನ ಪೆಟ್ಟಿಗೆಯನ್ನು ಮಂಗಳವಾರ ಜಿಲ್ಲಾ ರೋಟರಿ ಕಾಫಿಲ್ಯಾಂಡ್‌ನಿಂದ ಉಚಿತವಾಗಿ ಕೊಡುಗೆ ನೀಡಲಾಯಿತು.

ಬಳಿಕ ಮಾತನಾಡಿದ ಕಾಫಿಲ್ಯಾಂಡ್ ಅಧ್ಯಕ್ಷ ತನೋಜ್‌ನಾಯ್ಡು, ಮುಂಜಾನೆಯಿಂದ ನಗರಸಭೆ ಹಾಗೂ ಕಾಫಿಲ್ಯಾಂಡ್‌ನಿಂದ ಶೆಡ್ ಸುತ್ತಲು ಸ್ವಚ್ಛಗೊಳಿಸಲಾಯಿತು. ರುದ್ರಭೂಮಿಯಲ್ಲಿ ಅನೇಕ ಮಂದಿ ಅಕ್ಕಪಕ್ಕದಲ್ಲೇ ಶವವನ್ನು ಹೂಳುವುದರಿಂದ ಜಾಗದ ಸಮಸ್ಯೆ ಉಂಟಾಗುವ ಪರಿಣಾಮ ಶವ ದಹನ ಪೆಟ್ಟಿಗೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.
ಸುತ್ತಮುತ್ತಲಿನ ವಾರ್ಡಿನ ನಿವಾಸಿಗಳ ಅಪೇಕ್ಷೆ ಮೇರೆಗೆ ರುದ್ರಭೂಮಿಯಲ್ಲಿ ಶವದಹನ ಪೆಟ್ಟಿಗೆ ವ್ಯವಸ್ಥೆ ಮಾಡಿದ್ದು ನಗರಸಭೆ ಹಾಗೂ ರೋಟರಿ ಕಾಫಿಲ್ಯಾಂಡ್‌ಗೆ ನಿರ್ವಹಣೆಯ ಜವಾಬ್ದಾರಿಯಿದೆ. ಶವ ದಹನ ಪೆಟ್ಟಿಗೆ ಸೇರಿದಂತೆ ಒಟ್ಟು ೧೫ ಲಕ್ಷ ರೂ. ವೆಚ್ಚದಲ್ಲಿ ಮೂಲ ಸೌಕರ್ಯ ಒದಗಿಸಿ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.
ಪ್ರಸ್ತುತ ಶವದಹನ ಪೆಟ್ಟಿಗೆಯನ್ನು ಮಾತ್ರ ಇರಿಸಲಾಗಿದ್ದು, ಇನ್ನೊಂದು ತಿಂಗಳಲ್ಲಿ ಕಾರ್ಯಾರಂಭವಾಗಲಿದೆ. ಜೊತೆಗೆ ನೀರಿನ ಸೌಕರ್ಯ, ಸೌದೆ ಶೆಡ್, ಬೂದಿ ಸ್ಟ್ಯಾಂಡ್, ಕುರ್ಚಿ ವ್ಯವಸ್ಥೆಯನ್ನು ಮುಂದಿನ ದಿನಗಳಲ್ಲಿ ಕೈಗೊಳ್ಳಲಾಗುವುದು ಎಂದು ಹೇಳಿದರು.
ನಗರಸಭಾಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಮಾತನಾಡಿ, ಈಗಾಗಲೇ ಮಲ್ಲಂದೂರು ರಸ್ತೆ ಸಮೀಪ ಚಿತಾಗಾರ ವ್ಯವಸ್ಥೆಯಿತ್ತು. ಕಾಲಕ್ರಮೇಣ ಜನಸಂಖ್ಯೆ ಹೆಚ್ಚಳಗೊಂಡ ರಾಮನಹಳ್ಳಿ ರುದ್ರಭೂಮಿಯಲ್ಲಿ ಶವ ದಹನಕ್ಕೆ ಶೆಡ್ ನಿರ್ಮಿಸಲಾಗಿತ್ತು. ಇದೀಗ ರೋಟರಿ ಕಾಫಿಲ್ಯಾಂಡ್‌ನಿಂದ ಮೂಲಸೌಕರ್ಯ ಸೇರಿದಂತೆ ಶವ ದಹನಪೆಟ್ಟಿಗೆ ವ್ಯವಸ್ಥೆ ಕಲ್ಪಿಸಿದೆ ಎಂದರು.
ರುದ್ರಭೂಮಿಯನ್ನು ಸಮರ್ಪಕ ನಿರ್ವಹಿಸುವ ನಿಟ್ಟಿನಲ್ಲಿ ನಗರೋತ್ಥಾನದಡಿ ೩೦ ಲಕ್ಷ ರೂ. ವ್ಯಯಿಸಿ ರಸ್ತೆಗೆ ಇಂಟರ್‌ಲಾಕ್, ೧೫ನೇ ಹಣಕಾಸು ಯೋಜನೆಯಡಿ ಕಾವಲುಗಾರನ ಕುಟುಂಬಕ್ಕೆ ಶೌಚಗೃಹ, ಅಡುಗೆ ಕೋಣೆ ಹಾಗೂ ಆವರಣಕ್ಕೆ ಇಂಟರ್‌ಲಾಕ್ ಅಳವಡಿಸುವ ಗುರಿ ಹೊಂದಲಾಗಿದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ರೋಟರಿ ಕಾಫಿಲ್ಯಾಂಡ್ ಕಾರ್ಯದರ್ಶಿ ನಾಗೇಶ್ ಕೆಂಜಿಗೆ, ಚೇರ್ಮನ್ ಬಿ.ಎನ್. ಸುರೇಶ್, ಮಾಜಿ ಅಧ್ಯಕ್ಷ ಎಚ್.ಎನ್.ಪ್ರಕಾಶ್, ನಗರಸಭೆ ಸದಸ್ಯ ಲಕ್ಷ್ಮಣ್, ಸದಸ್ಯರಾದ ರವೀಂದ್ರ ನಾಯ್ಡು, ಗುರುಮೂರ್ತಿ, ಆನಂದ್, ರಾಘವೇಂದ್ರ, ಜೆಯೇಶ್, ಚಂದ್ರಶೇಖರ್, ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ಅಣ್ಣಯ್ಯ, ಆರೋಗ್ಯ ಅಧಿಕಾರಿ ಶಶಿಧರ್‌ರಾಜ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net