

ಅಥಣಿ: ಪಟ್ಟಣದ ತಾಸೆಗಲ್ಲಿಯಲ್ಲಿ ಮಳೆಯಿಂದ ಈಚೆಗೆ ಗೋಡೆ ಕುಸಿದು ಮೃತಪಟ್ಟ ಕಾಶೀನಾಥ ಅಪ್ಪಾಸಾಬ ಸುತಾರ (23) ಮನೆಗೆ ಶನಿವಾರ ಭೇಟಿ ನೀಡಿದ ಶಾಸಕ ಲಕ್ಷ್ಮಣ ಸವದಿ ಅವರು ವಾರಸುದಾರರಿಗೆ 5 ಲಕ್ಷ ರೂ. ಪರಿಹಾರಧನ ಆದೇಶ ಪತ್ರ ಹಸ್ತಾಂತರಿಸಿದರು.
ಮೃತ ಯುವಕನ ತಂದೆ ಅಪ್ಪಾಸಾಬ ಮಹಾದೇವ ಸುತಾರ ಆದೇಶ ಪ್ರತಿ ಸ್ವೀಕರಿಸಿದರು. ತಹಸೀಲ್ದಾರ್ ಬಿ.ಎಸ್.ಖಡಕಬಾವಿ, ಕಂದಾಯ ನಿರೀಕ್ಷಕ ಎಸ್.ಬಿ.ಮೆಣಸಂಗಿ, ಗ್ರಾಮ ಲೆಕ್ಕಾಕಾರಿ ಎಂ.ಎಂ.ಮಿರ್ಜಿ, ಡಿವೈಎಸ್‌ಪಿ ಶ್ರೀಪಾದ ಜಲ್ದೆ, ಸಿಪಿಐ ರವೀಂದ್ರ ನಾಯ್ಕೋಡಿ, ಪಿಎಸೆ ಶಿವಶಂಕರ ಮುಕರಿ, ಮುಖಂಡರಾದ ರಾಜು ಬುಲಬುಲೆ, ನಿತಿನ ಗೊಂಗಡಿ, ರಾಮನಗೌಡ ಪಾಟಿಲ, ಪುರಸಭಾ ಸದಸ್ಯರಾದ ಸಂತೋಷ ಸಾವಡಕರ, ಕಲ್ಮೇಶ ಮಡ್ಡಿ ಇತರರಿದ್ದರು.