ಸರ್ಕಾರದ ಯೋಜನೆಗಳನ್ನು ರೈತರಿಗೆ ತಲುಪಿಸಿ, ಗುತ್ತಲ ಸಹಕಾರಿ ಸಂಘದ ನಿರ್ದೇಶಕರಿಗೆ ಸನ್ಮಾನ

GUTTAL PKPS NEWELY ELECTED MEMBERS
Published on

ಗುತ್ತಲ: ಸಹಕಾರ ಕ್ಷೇತ್ರದಲ್ಲಿ ರೈತರಿಗೆ ಅನುಕೂಲ ಆಗುವಂಥ ಯೋಜನೆಗಳಿದ್ದು, ಅವುಗಳನ್ನು ರೈತರಿಗೆ ಮುಟ್ಟಿಸುವ ಕೆಲಸ ಮಾಡಬೇಕು ಎಂದು ವಿಧಾನ ಸಭೆ ಉಪಾಧ್ಯಕ್ಷ ರುದ್ರಪ್ಪ ಲಮಾಣಿ ಹೇಳಿದರು.

ಪಟ್ಟಣದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘದ ಕಾರ್ಯಾಲಯದಲ್ಲಿ ಶನಿವಾರ ರಾತ್ರಿ ಆಯೋಜಿಸಿದ್ದ ನೂತನ ನಿರ್ದೇಶಕರಿಗೆ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಂಘದ ಎಲ್ಲ ಸದಸ್ಯರಿಗೆ ಸರ್ಕಾರದ ವಿವಿಧ ಯೋಜನೆಗಳನ್ನು ತಲುಪಿಸುವ ಕಾರ್ಯ ಆಗಬೇಕು. ಇಷ್ಟು ವರ್ಷಗಳಲ್ಲಿ ಆಗದ ಕೆಲಸವನ್ನು ನೂತನವಾಗಿ ಆಯ್ಕೆಯಾಗಿರುವ ನಿರ್ದೇಶಕರು ಮಾಡಬೇಕು. ಸಂಘದ ಅಭಿವೃದ್ಧಿಗೆ ಹೆಚ್ಚಿನ ಸಹಾಯ ಮಾಡುವುದಾಗಿ ಭರವಸೆ ನೀಡಿದರು.

ಜಿಪಂ ಮಾಜಿ ಸದಸ್ಯ ಹಾಗೂ ಜಿಲ್ಲಾ ಕಾಂಗ್ರೆಸ್ ಹಿರಿಯ ಉಪಾಧ್ಯಕ್ಷ ಸಿ.ಬಿ. ಕುರವತ್ತಿಗೌಡರ ಪ್ರಸ್ತಾವಿಕವಾಗಿ ಮಾತನಾಡಿ, ಕಳೆದ 3ದಶಕದ ಬಳಿಕೆ ಪ್ರಥಮ ಬಾರಿಕೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಸಂಘದ ಅಭಿವೃದ್ಧಿಗೆ ಎಲ್ಲ ನಿರ್ದೇಶಕರು ಶ್ರಮಿಸಬೇಕು. ರೈತರಿಗೆ ಸಂಘದ ಮೂಲಕ ಅನುಕೂಲತೆಗಳನ್ನು ದೊರಕಿಸಿಕೊಡಬೇಕು ಎಂದರು.

ಶಾಸಕ ರುದ್ರಪ್ಪ ಲಮಾಣಿ ಅವರನ್ನು ಸನ್ಮಾನಿಸಲಾಯಿತು. ಇದಕ್ಕೂ ಮುನ್ನ ರುದ್ರಪ್ಪ ಲಮಾಣಿ ಅವರು ನೂತನ ನಿರ್ದೇಶಕರುಗಳನ್ನು ಸನ್ಮಾನಿಸಿದರು.

ತಾಲೂಕು ಕಾಂಗ್ರೆಸ್ ಅಧ್ಯಕ್ಷ ಎಂ.ಎಂ. ಮೈದೂರ, ಪಪಂ ಮಾಜಿ ಉಪಾಧ್ಯಕ್ಷ ನಾಗರಾಜ ಎರಿಮನಿ, ಆಶ್ರಯ ಕಮಿಟಿ ಮಾಜಿ ಅಧ್ಯಕ್ಷ ಶಹಜಾನಸಾಬ ಅಗಡಿ, ರುದ್ರಪ್ಪ ಹಾದಿಮನಿ, ಅರ್ಬನ್ ಬ್ಯಾಂಕ್ ಅಧ್ಯಕ್ಷ ಬಸವರಾಜ ಕೆಂಚಮಲ್ಲ, ಮಂಜುನಾಥ ದಪ್ಪೇರ, ಪಪಂ ಸದಸ್ಯರಾದ ಪ್ರದೀಪ ಸಾಲಗೇರಿ, ಬಸಣ್ಣ ನೆಗಳೂರ, ಮಹ್ಮದ್​ಹನೀಫ್ ರಿತ್ತಿ, ಅಜಯ ಬಂಡಿವಡ್ಡರ, ಖಲೀಲಅಹ್ಮದ್ ಖಾಜಿ, ಗುಡ್ಡಪ್ಪ ಗೊರವರ, ವಿನೋದ ಗುತ್ತಲ, ವಿಜಯ ಚಲವಾದಿ, ಮಾಲತೇಶ ಬನ್ನಿಮಟ್ಟಿ, ಲಿಂಗೇಶ ಬೆನ್ನೂರ, ರಿಯಾಜಅಹ್ಮದ ರಾಣೆಬೆನ್ನೂರ, ಲಿಂಗರಾಜ ನಾಯಕ, ಮಲ್ಲೇಶ ಲಮಾಣಿ, ಸಂತೋಷ ಲಮಾಣಿ, ಕೃಷ್ಣಾಜಿ ತೇಲ್ಕರ, ಶಿವಾನಂದ ಕೋರಿಶೆಟ್ಟರ, ಶಿವಯೋಗೆಪ್ಪ ಹಾಲಗಿ, ನೂತನ ನಿರ್ದೇಶಕರಾದ ಭರಮಣ್ಣ ಹಾದಿಮನಿ, ಚನ್ನಪ್ಪ ಬನ್ನಿಮಟ್ಟಿ, ವಿರೂಪಾಕ್ಷಪ್ಪ ಶಿತಾಳ, ಅಶೋಕ ತೇಲ್ಕರ್, ಚನ್ನಬಸಪ್ಪ ಕಾಗಿನೆಲ್ಲಿ, ಕೋಟೆಪ್ಪ ಗೊರವರ, ಪುಷ್ಪಾ ಹಾವೇರಿ, ಸಾವಿತ್ರವ್ವ ಬನ್ನಿಮಟ್ಟಿ, ಸಂಘದ ವ್ಯವಸ್ಥಾಪಕ ಚಂದ್ರಶೇಖರ ಕಾಗಿನೆಲ್ಲಿ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net