

ದೊಡ್ಡಬಳ್ಳಾಪುರ : ಹರಿದಾಸರ ಕೀರ್ತನೆಗಳನ್ನು ಭಜನಾ ತಂಡದ ಕಲಾವಿದರು ಮನೆ ಮನೆಗೂ ತಲುಪಿಸುತ್ತಿರುವುದು ಕನ್ನಡ ಸಾಹಿತ್ಯಕ್ಕೆ ನೀಡುತ್ತಿರುವ ಕೊಡುಗೆ ಎಂದು ಸಾಹಿತಿ ಡಾ.ನಾ.ಗೀತಾಚಾರ್ಯ ಹೇಳಿದರು. ತಾಲೂಕಿನ ರಾಂಪುರದ ಸಾಹಿತಿ ರಾಂ.ಕೆ.ಹನುಮಂತಯ್ಯ ಅವರ ಭುವನಸಿರಿ ತೋಟದಲ್ಲಿ ಭಾನುವಾರ ಕನ್ನಡಿಗರ ಸ್ನೇಹಕೂಟ ಮತ್ತು ಸಹಮತ ಸಾಹಿತ್ಯ, ಸಾಂಸತಿಕ ಮತ್ತು ಕಲಾ ವೇದಿಕೆ ವತಿಯಿಂದ ಆಯೋಜಿಸಿದ್ದ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಮಾತನಾಡಿದರು.
ತಾಲೂಕಿನ ಮಧುರೆ ಹೋಬಳಿ ಇಸ್ತೂರು ಶ್ರೀ ಕೋದಂಡರಾಮ ಭಜನಾ ಮಂಡಳಿ ಮತ್ತು ದೊಡ್ಡಬೆಳವಂಗಲ ಹೋಬಳಿ ದೊಡ್ಡಹೆಜ್ಜಾಜಿ ಶ್ರೀ ಸೀತಾರಾಮ ಭಜನಾ ಮಂಡಳಿಗೆ ಶತಮಾನದ ಇತಿಹಾಸವಿದೆ. ಇವರು ಪ್ರತಿ ಶ್ರಾವಣ ಮತ್ತು ಧನುರ್ಮಾಸದಲ್ಲಿ ನಿರಂತರ ಒಂದು ತಿಂಗಳು ಭಜನಾ ಕಾರ್ಯಕ್ರಮ ನಡೆಸುತ್ತಿರುವುದು ಉತ್ತಮ ಬೆಳವಣಿಗೆ ಎಂದರು. ಜವಾಹರ ನವೋದಯ ವಿದ್ಯಾಲಯ ನಿವೃತ್ತ ಪ್ರಾಧ್ಯಾಪಕ ವಿ.ಎಸ್.ಹೆಗಡೆ ಮಾತನಾಡಿ, ಕನ್ನಡ ಸಂಸತಿ, ಪರಂಪರೆ ಮತ್ತು ಭಾಷೆಯ ಬಗ್ಗೆ ಪ್ರತಿಯೊಬ್ಬ ಕನ್ನಡಿಗರು ಅಭಿಮಾನ ಹೊಂದಿರಬೇಕು. ಯುವ ಸಮುದಾಯವು ಸಂಸತಿಯ ಮಹತ್ವ ಅರಿತು ಉಳಿಸಿ ಮುನ್ನಡೆಸಬೇಕು.
ಪ್ರತಿಯೊಬ್ಬರಿಗೂ ಸಾಧನೆ ಮಾಡುವ ಅವಕಾಶ ಮತ್ತು ಶಕ್ತಿ ಇರುತ್ತದೆ ಎಂದರು.ಸ್ನೇಹ ಸಮ್ಮಿಲನದಲ್ಲಿ ಕವಿಗೋಷ್ಠಿ, ಆಶುಭಾಷಣ, ರಂಗಗೀತೆ, ಜಾನಪದಗೀತೆ, ಚಲನಚಿತ್ರಗಿತೆ, ಅಭಿನಯ, ನೃತ್ಯ ಕಾರ್ಯಕ್ರಮಗಳನ್ನು ಕಲಾವಿದರಾದ ಎ.ಜಯರಾಮ್, ಹಾಡೋಹಳ್ಳಿ ಗೋವಿಂದರಾಜು, ಜಕ್ಕೂರು ನಾಗರಾಜು, ಸುರಧೇನುಪುರ ಶಿವರಾಜ್, ದೊಡ್ಡಬಳ್ಳಾಪುರ ತಾಲೂಕು ರಂಗಭೂಮಿ ಸಂದ ಕಲಾವಿದರಾದ ರಾಮಾಂಜಿನಪ್ಪ, ಚಂದ್ರಶೇಖರ್, ಮುನಿಪಾಪಣ್ಣ, ಪ್ರಕಾಶ್ ರಾವ್ ಚೌಹಾಣ್, ನಾಗರಾಜು, ರಾಮಕೃಷ್ಣಯ್ಯ, ಗುರುರಾಜು ಜಾಗೀದಾರ್, ಗೀತಾ, ಲಕ್ಷಿ$್ಮ ಇತರರು ನಡೆಸಿಕೊಟ್ಟರು. ವೇದಿಕೆ ಅಧ್ಯೆ ಹೇಮಲತಾ ಸದಾನಂದ,ವಾಣಿಜ್ಯೋದ್ಯಮಿ ಶಿವಾನಂದಪ್ಪ, ತಾಲೂಕು ಕಸಾಪ ಅಧ್ಯಕ್ಷ ಪಿ.ಗೋವಿಂದರಾಜು, ಸರ್ಕಾರಿ ನಿವೃತ್ತ ನೌಕರರ ಜಿಲ್ಲಾ ಸಂದ ಅಧ್ಯಕ್ಷ ಕೆ.ಮಹಾಲಿಂಗಯ್ಯ, ಭಾರತ್ ಸ್ಕೌಟ್ಸ್ ಮತ್ತು ಗೈಡ್ ಸಹಾಯಕ ಜಿಲ್ಲಾ ಆಯುಕ್ತ ವೆಂಕಟರಾಜು ಇದ್ದರು.