

ವಿಜಯವಾಣಿ ಸುದ್ದಿಜಾಲ ಧಾರವಾಡ
ಜನ ಭಾಷೆಯನ್ನೇ ದೈವ ಭಾಷೆಯನ್ನಾಗಿ ಮಾಡಿದ ಕೀತಿರ್ ಬಸವಣ್ಣವರಿಗೆ ಸಲ್ಲುತ್ತದೆ ಎಂದು ಸುತ್ತೂರಿನ ಶ್ರೀ ಶಿವರಾತ್ರಿ ದೇಶಿ ಕೇಂದ್ರ ಸ್ವಾಮೀಜಿ ಹೇಳಿದರು.
ನಗರದ ಕರ್ನಾಟಕ ವಿಶ್ವ ವಿದ್ಯಾಲಯದ ಬಸವೇಶ್ವರ ಪೀಠವು ಬುಧವಾರ ಸುವರ್ಣ ಮಹೋತ್ಸವ ಭವನದಲ್ಲಿ ಏರ್ಪಡಿಸಿದ್ದ ಬಸವೇಶ್ವರ ಪೀಠದ ಸುವರ್ಣ ಮಹೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಬಸವಣ್ಣನವರ ವಚನ ಪರಂಪರೆ ಬಹಳ ದೊಡ್ಡದಿದೆ. ಬಸವಾದಿ ಶರಣರ ವಚನ ಮತ್ತು ತತ್ವಗಳನ್ನು ವಿದ್ಯಾಥಿರ್ಗಳಿಗೆ ವಿವಿಧ ಮಾಧ್ಯಮದ ಮೂಲಕ ತಲುಪಿಸುವ ಕಾರ್ಯ ಆಗಬೇಕಾಗಿದೆ. ಕಾಲ ಬದಲಾದಂತೆ ನವ ಮಾಧ್ಯಮಗಳ ಮುಖಾಂತರ ಬಸವೇಶ್ವರ ವಚನ ಮತ್ತು ತತ್ವಗಳನ್ನು ಪ್ರಸಾರ ಮಾಡಬೇಕು. ಬಸವಣ್ಣನವರು ಕಾಯಕ ತತ್ವಕ್ಕೆ ಮಹತ್ವ ನೀಡಿದ್ದರು. ಮನುಷ್ಯನಿಗೆ ದುಡಿಮೆ ಮಹತ್ವವನ್ನು ಬಸವಣ್ಣನವರು ವಚನ ಮತ್ತು ಹಸ್ತ ಪ್ರತಿಗಳನ್ನು ಡಿಜಿಟಲೀಕರಣ ಮಾಡುವುದು ಸೂಕ್ತ ಎಂದರು.
ಸಾನ್ನಿಧ್ಯ ವಹಿಸಿದ್ದ ಗದಗ ಡಂಬಳದ ತೋಂಟದಾರ್ಯ ಸಂಸ್ಥಾನಮಠದ ಡಾ. ತೋಂಟದ ಸಿದ್ಧರಾಮ ಸ್ವಾಮೀಜಿ ಮಾತನಾಡಿ, ಎಲ್ಲ ಕಾಲಕ್ಕೂ ಬಸವಣ್ಣವರು ಯುಗ ಯುಗದ ಜಾಗತಿಕ ನಾಯಕರಾಗಿದ್ದಾರೆ. ಸಾಮಾಜಿಕ ನ್ಯಾಯಕ್ಕಾಗಿ ಬಸವಣ್ಣವರು ಶ್ರಮಿಸಿದರು. ಕಾಯಕ ದಾಸೋಹದಂತಹ ಸಂಸತಿ ನೀಡಿದ್ದಾರೆ. ಭಾರತದ ಸಂವಿಧಾನದಲ್ಲಿ ಬಸವಾದಿ ಶರಣರ ಆಶಯಗಳನ್ನು ಅಳವಡಿಸಿಕೊಳ್ಳಲಾಗಿದೆ. ಬಸವಣ್ಣನವರು ತಮ್ಮ ಅಂತರಂಗದ ಮೂಲಕ ವಚನಗಳನ್ನು ನೀಡಿದ್ದಾರೆ. ರಾಜ್ಯ ಸರ್ಕಾರ ಬಸವಣ್ಣನವರನ್ನು ಸಾಂಸತಿಕ ನಾಯಕ ಎಂದು ಘೋಷಿಸಿದ್ದು ಸಮಂಜಸವಾಗಿದೆ ಎಂದರು.
ಡಾ. ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ, ಭಾಲ್ಕಿ ಹಿರೇಮಠ ಸಂಸ್ಥಾನ ಮಠದ ಶ್ರೀ ಬಸವಲಿಂಗ ಪಟ್ಟದ್ದೇವರು, ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ, ಶ್ರೀ ಶಿವರುದ್ರ ಸ್ವಾಮೀಜಿ, ಶ್ರೀ ನೀಲಕಂಠ ಸ್ವಾಮೀಜಿ, ಡಾ. ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿದರು. ಕವಿವಿ ಕುಲಪತಿ ಪ್ರೊ.ಕೆ.ಬಿ.ಗುಡಸಿ ಅಧ್ಯಕ್ಷತೆ ವಹಿಸಿದ್ದರು.
ಡಾ.ವೀರಣ್ಣ ರಾಜೂರ ಮತ್ತು ಡಾ.ಸಿ.ಎಂ.ಕುಂದಗೋಳ ಸಂಪಾದನೆಯ ಸುವರ್ಣ ದೀಪ್ತಿ ಸ್ಮರಣೆ ಸಂಚಿಕೆ ಸೇರಿ ಒಟ್ಟು 16 ವಿವಿಧ ಪುಸ್ತಕಗಳನ್ನು ಮತ್ತು ಬಸವೇಶ್ವರ ಪೀಠದ ಕುರಿತು ಮಾಡಿದ ಸಾಕ್ಷ$್ಯ ಚಿತ್ರವನ್ನು ಬಿಡುಗಡೆ ಮಾಡಲಾಯಿತು.
ಬೆಂಗಳೂರು ಬಸವ ಸಮಿತಿ ಅಧ್ಯ ಅರವಿಂದ ಜತ್ತಿ, ಸ್ವರ್ಣ ಗ್ರುಪ್ ಆ್ ಕಂಪನಿ ವ್ಯವಸ್ಥಾಪಕ ನಿರ್ದೇಶಕ ಡಾ. ವಿ.ಎಸ್.ವಿ ಪ್ರಸಾದ, ಡಾ.ಎಂ.ಎಂ.ಕಲಬುರಗಿ ರಾಷ್ಟ್ರೀಯ ಪ್ರತಿಷ್ಠಾನ ಅಧ್ಯ ಡಾ. ವೀರಣ್ಣ ರಾಜೂರ, ಕವಿವಿ ಕುಲಸಚಿವ ಡಾ. ಎ.ಚೆನ್ನಪ್ಪ, ಡಾ. ನಿಜಲಿಂಗಪ್ಪ ಮಟ್ಟಿಹಾಳ, ಡಾ.ಸಿ. ಕೃಷ್ಣಮೂತಿರ್, ಡಾ.ಸಿ.ಎಂ.ಕುಂದಗೋಳ, ಡಾ.ವೀರಣ್ಣ ರಾಜೂರ, ಇತರರು ಇದ್ದರು.