ಪೈಗಂಬರ್ ಸಂದೇಶಗಳನ್ನು ಎಲ್ಲರಿಗೂ ತಲುಪಿಸಿ

ಹನುಮಸಾಗರದ ಜಾಮಿಯಾ ಮಸೀದಿಯಲ್ಲಿ ಈದ್ ಮಿಲಾದ್ ನಿಮಿತ್ತ ಹಮ್ಮಿಕೊಂಡಿದ್ದ ಧರ್ಮ ಸಭೆಯನ್ನು ಮಾಜಿ ಸಚಿವ ಅಮರೇಗೌಡ ಪಾಟೀಲ್ ಬಯ್ಯಪುರ ಉದ್ಘಾಟಿಸಿದರು. ಕಾಡಾ ಅಧ್ಯಕ್ಷ ಹಸನಸಾಬ್ ದೋಟಿಹಾಳ, ಪ್ರಮುಖರಾದ ವಿಶ್ವನಾಥ ಕನ್ನೂರ, ಪ್ರಶಾಂತ ಗಡಾದ, ಮಹಾಂತೇಶ ಅಗಸಿಮುಂದಿನ, ಸೂಚಪ್ಪ ದೇವರಮನಿ, ಮೈಬೂಬಸಾಬ್ ಮೂಲಿಮನಿ ಇತರರಿದ್ದರು.

Published on

ಹನುಮಸಾಗರ: ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರು ಸಂದೇಶಗಳ ಮೂಲಕ ಸಮಾಜದಲ್ಲಿ ಶಾಂತಿ, ಸಮಾನತೆ ಸಾರಿದ್ದಾರೆ ಎಂದು ಮಾಜಿ ಸಚಿವ ಅಮರೇಗೌಡ ಪಾಟೀಲ್ ಬಯ್ಯಪೂರ ಹೇಳಿದರು.

ಪಟ್ಟಣದ ಜಾಮಿಯಾ ಮಸೀದಿ ಅವರಣದಲ್ಲಿ ಈದ್ ಮಿಲಾದ್ ನಿಮಿತ್ತ ಶುಕ್ರವಾರ ಹಮ್ಮಿಕೊಡಿದ್ದ ಧರ್ಮ ಸಭೆಯಲ್ಲಿ ಮಾತನಾಡಿದರು. ಪ್ರವಾದಿ ಮೊಹಮ್ಮದರ ಆದರ್ಶಗಳು ಪಾಲಿಸಿದಾಗ ಆಚಣೆಗೆ ಅರ್ಥಬರುತ್ತದೆ. ಅವರ ಸಂದೇಶಗಳನ್ನು ಪ್ರತಿಯೊಬ್ಬರಿಗೂ ತಲುಪಿಸುವ ಕಾರ್ಯ ಆಗಬೇಕು ಎಂದರು. ಕಾಡಾ ಅಧ್ಯಕ್ಷ ಹಸನಸಾಬ್ ದೋಟಿಹಾಳ ಮಾತನಾಡಿ, ಪ್ರವಾದಿ ಮೊಹಮ್ಮದ್ ಅವರು ಅಲ್ಲಾನ ಸಂದೇಶಗಳನ್ನು ಜನರಿಗೆ ತಲುಪಿಸಿದ್ದರು. ಸಾಮಾಜಿಕ ನ್ಯಾಯ, ಬಡವರ ಮೇಲೆ ಕರುಣೆ ಮತ್ತು ಧರ್ಮನಿಷ್ಠೆಯನ್ನು ಪ್ರತಿಪಾದಿಸಿ ಮಾನವೀಯ ಮೌಲ್ಯಗಳನ್ನು ಸಾರಿದ್ದಾರೆ ಎಂದು ತಿಳಿಸಿದರು.

ಇಸ್ಲಾಂ ಧರ್ಮ ಗುರು ಸಯ್ಯದ್ ಷಾ ಮುರ್ತುಜಾ ಖಾದರಿ ಫೈಸಲ್ ಪಾಷಾ, ತಂಜೀಮ ಇಸ್ಲಾಂ ಕಮೀಟಿ ಅಧ್ಯಕ್ಷ ಡಾ.ನಜೀರಸಾಬ್ ಮೇಣೆದಾಳ, ಅಂಜುಮನ್ ಇಸ್ಲಾಂ ಕಮೀಟಿ ಅಧ್ಯಕ್ಷ ಖಾದರಸಾಬ್ ತಹಸೀಲ್ದಾರ್, ಪ್ರಮುಖರಾದ ಮೈನೂದ್ದಿನ್ ಖಾಜಿ, ವಿಶ್ವನಾಥ ಕನ್ನೂರ, ಪ್ರಶಾಂತ ಗಡಾದ, ಮಹಾಂತೇಶ ಅಗಸಿಮುಂದಿನ, ಸೂಚಪ್ಪ ದೇವರಮನಿ, ಮೈಬೂಬಸಾಬ್ ಮೂಲಿಮನಿ, ಗೌಸುದ್ದಿನಸಾಬ್ ಒಂಟೆಳಿ, ಅಬ್ದುಲ್ ರಜಾಕ್ ಟೇಲರ್, ಮೌಲಿ ಮೋಟಗಿ, ಹುಸೇನ ಮುದಗಲ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net