ಕಟ್ಟ ಕಡೆಯ ವ್ಯಕ್ತಿಗೆ ಯೋಜನೆ ತಲುಪಿಸಿ

bbgd garantee
ಬಸವನಬಾಗೇವಾಡಿ ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ವತಿಯಿಂದ ತಾಲೂಕಿನ ಯರನಾಳ ಗ್ರಾಮದಲ್ಲಿ 6ನೇ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಸುರೇಶ ಹಾರಿವಾಳ ಮಹಿಬೂಬ್ ನಾಯ್ಕೋಡಿ, ಪ್ರಕಾಶ ದೇಸಾಯಿ ಇತರರಿದ್ದರು.
Published on

ಬಸವನಬಾಗೇವಾಡಿ: ಸರ್ಕಾರದ ಯಾವುದೇ ಯೋಜನೆಗಳು ಸಮಾಜದ ಕಟ್ಟಕಡೆ ವ್ಯಕ್ತಿಗೆ ತಲುಪಿದಾಗ ಮಾತ್ರ ಆ ಯೋಜನೆಗೆ ಮಹತ್ವ ಬರುತ್ತದೆ ಎಂದು ಬಸವನಬಾಗೇವಾಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಹಾರಿವಾಳ ಹೇಳಿದರು.

ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯಿಂದ ತಾಲೂಕಿನ ಯರನಾಳದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ 6ನೇ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ರಾಜ್ಯ ಸರ್ಕಾರದ ಪಂಚ ಯೋಜನೆಗಳನ್ನು ಜನತೆಗೆ ತಲುಪಿಸುವ ಕೆಲಸವನ್ನು ಪಕ್ಷದ ಕಾರ್ಯಕರ್ತರು, ವಿವಿಧ ಅಧಿಕಾರಿಗಳು ಮಾಡುತ್ತಿದ್ದಾರೆ. ಅನ್ನಭಾಗ್ಯ, ಗೃಹ ಜ್ಯೋತಿ, ಗೃಹಲಕ್ಷ್ಮೀ, ಶಕ್ತಿ ಯೋಜನೆ, ಯುವನಿಧಿ ಸಕಾಲದಲ್ಲಿ ಸರ್ವರಿಗೂ ದೊರಕಲು ಸಾಧ್ಯವಾಗಿದೆ ಎಂದು ತಿಳಿಸಿದರು.

ಆದರೆ, ವಿರೋಧ ಪಕ್ಷದವರು ಈ ಯೋಜನೆಗಳಿಂದ ಸರ್ಕಾರ ದಿವಾಳಿಯಾಗಿದೆ. ಮತ್ತು ಅತ್ತೆ ಸೊಸೆ ಮಧ್ಯ ಕಲಹ ಉಂಟಾಗಿದೆ ಎಂದು ಆರೋಪಿಸುತ್ತಿದ್ದಾರೆ. ಈ ಯೋಜನೆಗಳಿಂದ ಎಷ್ಟೋ ಕುಟುಂಬದ ಮಹಿಳೆಯರು ಸ್ವಾವಲಂಬಿ ಬದುಕು ಕಟ್ಟಿಕೊಂಡಿದ್ದಾರೆ. ಹೀಗಾಗಿ ಯೋಜನೆಗಳು ಅವರಿಗೆ ಸಹಕಾರಿ ಆಗಿವೆ ಎಂದರು.

ಬಸವನಬಾಗೇವಾಡಿ ತಾಲೂಕು ಗ್ಯಾರಂಟಿ ಯೋಜನೆ ಅಧ್ಯಕ್ಷ ಮಹಿಬೂಬ್ ನಾಯ್ಕೋಡಿ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಾಶ ದೇಸಾಯಿ, ಯರನಾಳ ಗ್ರಾಪಂ ಅಧ್ಯಕ್ಷೆ ಶಾಂತಾಬಾಯಿ ಕೋಲಕಾರ, ಕಾಂಗ್ರೆಸ್ ಮುಖಂಡ ಸಂಗಮೇಶ ಕಾಳಹಸ್ತೇಶ್ವಮಠ, ಗ್ಯಾರಂಟಿ ಯೋಜನೆ ಸದಸ್ಯರಾದ ಮಹಾಂತೇಶ ತಳೆವಾಡ, ಶಂಕರ ಚಕ್ರಮನಿ, ಬಂಡೆಪ್ಪ ನಾಟಿಕರ, ಕವಿತಾ ಮನೋರಮಠ, ಮಹಾದೇವಿ ಮನಗೂಳಿ, ಯರನಾಳ ಗ್ರಾಮಸ್ಥರು ಇದ್ದರು.

ಪಂಚಯೋಜನೆ ಗ್ಯಾರಂಟಿಯ ಪ್ರಗತಿ ಪರಿಶೀಲನೆ ನಡೆಸಿ ಯರನಾಳ ಪಂಚಾಯಿತಿ ಮಟ್ಟದಲ್ಲಿ ಉಳಿದ ಲಾನುಭವಿಗಳಿಗೆ ಯೋಜನೆಗಳ ಲಾಭ ಪಡೆದುಕೊಳ್ಳಲು ಸೂಚಿಸಲಾಯಿತು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಅರ್ಹ ಫಲಾನುಭವಿಗಳನ್ನು ಗುರುತಿಸಿ ಸಮಿತಿಗೆ ಮಾಹಿತಿ ತಲುಪಿಸಲು ನಿರ್ದೇಶಿಸಲಾಯಿತು.

ಶ್ರೀಶೈಲ ಬಳಗಾರ ನಿರೂಪಿಸಿ, ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net