ಬಡಜನತೆಗೆ ಪಂಚ ಗ್ಯಾರಂಟಿ ಯೋಜನೆ ತಲುಪಿಸಿ

mbl garantee
ಮುದ್ದೇಬಿಹಾಳ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ನಡೆದ ಗ್ಯಾರಂಟಿ ಅನುಷ್ಠಾನ ಸಮಿತಿ ಸಭೆಯಲ್ಲಿ ಸಿಡಿಪಿಒ ಶಿವಮೂರ್ತಿ ಕುಂಬಾರ ಇಲಾಖೆ ಪ್ರಗತಿ ವಿವರಿಸಿದರು. ಶಂಕರಗೌಡ ಹಿರೇಗೌಡರ, ಎನ್.ಎಸ್. ಮಸಳಿ, ಲಕ್ಷ್ಮಣ ಲಮಾಣಿ, ಸಮಿತಿ ಸದಸ್ಯರು, ಅಕಾರಿಗಳು ಇದ್ದಾರೆ.
Published on

ಮುದ್ದೇಬಿಹಾಳ: ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಪಂಚ ಗ್ಯಾರಂಟಿ ಯೋಜನೆಯನ್ನು ಬಡವರಿಗೆ ತಲುಪಿಸಲು ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡಬೇಕೆಂದು ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶಂಕರಗೌಡ ಹಿರೇಗೌಡರ ಸೂಚಿಸಿದರು.

ಇಲ್ಲಿನ ತಾಪಂ ಸಭಾಭವನದಲ್ಲಿ ಬುಧವಾರ ಸಮಿತಿ ಸಭೆ ನಡೆಸಿ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಂದ ಗ್ಯಾರಂಟಿ ಯೋಜನೆಗಳ ಪ್ರಗತಿಯ ಮಾಹಿತಿ ಪಡೆದು ಅವರು ಮಾತನಾಡಿದರು.

ಅರ್ಹರಿಗೆ ಡಿಬಿಟಿ (ಡೈರೆಕ್ಟ್ ಬ್ಯಾಂಕ್ ಟ್ರಾೃನ್ಚಾಕ್ಷನ್) ಮೂಲಕ ನೆರವು ಒದಗಿಸಲಾಗಿದೆ. ವಿದ್ಯಾವಂತ ನಿರುದ್ಯೋಗಿಗಳಿಗೆ ಯುವನಿಧಿ, ಪದವೀಧರರಿಗೆ ಮಾಸಿಕ 3,000, ಡಿಪ್ಲೊಮಾ, ಐಟಿಐ ಪದವೀಧರರಿಗೆ ಮಾಸಿಕ 1,500 ರೂ. ನೆರವು ಒದಗಿಸುವ ಈ ಯೋಜನೆ ಎರಡು ವರ್ಷದವರೆಗೆ ಜಾರಿಯಲ್ಲಿರುವಂಥದ್ದು. ಇದುವರೆಗೆ ತಾಲೂಕಿನಲ್ಲಿ 815 ಪದವೀಧರರು, 795 ಡಿಪ್ಲೊಮಾ, 20 ಐಟಿಐ ಆದವರು ನೋಂದಾಯಿಸಿದ್ದು, 1.28 ಕೋಟಿ ರೂ. ಬಳಕೆಯಾಗಿದೆ. ಗೃಹಲಕ್ಷ್ಮೀ ಯೋಜನೆಯ ಲಾನುಭವಿಗಳಿಗೆ ಈ ತಿಂಗಳು ನೆರವು ಜಮಾ ಆಗುತ್ತದೆ ಎಂದರು.

ಸಮಿತಿ ಉಪಾಧ್ಯಕ್ಷ ಲಕ್ಷ್ಮಣ ಲಮಾಣಿ ಮಾತನಾಡಿದರು. ತಾಪಂ ಇಒ ಎನ್.ಎಸ್. ಮಸಳಿ, ಸಿಡಿಪಿಒ ಶಿವಮೂರ್ತಿ ಕುಂಬಾರ, ಸಮಿತಿಯ ಪಿಂಟು ಸಾಲಿಮನಿ, ಸಂಗಪ್ಪ ಮೇಲಿನಮನಿ, ಆನಂದ ಮುದೂರ, ಬಿ.ಆರ್. ಚಪ್ಪರಬಂದ, ರಾಮಣ್ಣ ರಾಜನಾಳ, ಬಸವರಾಜ ಚಿನಿವಾರ, ಸುಜಾತ ಸಿಂಧೆ, ಹಣಮಂತ ಕುರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net