

ಚಿತ್ರದುರ್ಗ: ಮತದಾರರಿಗೆ ಕಾಂಗ್ರೆಸ್ ಕೊಟ್ಟಿರುವ ಮೂರು ಭರವಸೆಗಳ ಗ್ಯಾರಂಟಿ ಕಾರ್ಡ್‌ನ್ನು ಸಾಮೂಹಿಕವಾಗಿ ಭಾಗವಹಿಸುವಂತೆ ಮಾಜಿ ಸಂ ಸದ ಬಿ.ಎನ್.ಚಂದ್ರಪ್ಪ ಪಕ್ಷದೆಲ್ಲ ನಾಯಕರು,ಕಾರ‌್ಯಕರ್ತರಿಗೆ ಸಲಹೆ ನೀಡಿದರು.
ಚಿತ್ರದುರ್ಗ ನಗರ ಮತ್ತು ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಸಮಿತಿ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ಏರ್ಪಡಿಸಿದ್ದ ಗ್ಯಾರಂ ಟಿ ಕಾರ್ಡ್ ವಿತರಣೆ ಕಾರ‌್ಯಕ್ರಮ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ,ಈ ಕ್ಷೇತ್ರದಲ್ಲಿರುವ 35 ವಾರ್ಡ್‌ಗಳು ಹಾಗೂ 23 ಗ್ರಾಪಂಗಳ ಪ್ರತಿ ಮನೆವಗೂ ಮೂರ‌್ನಾಲ್ಕು ದಿನದೊಳಗೆ ಗ್ಯಾರಂಟಿ ಕಾರ್ಡ್ ತಲುಪ ಬೇಕೆಂದರು.
ಮಾಜಿ ಶಾಸಕ ಎಸ್.ಕೆ.ಬಸವರಾಜನ್ ಮಾತನಾಡಿ,ಸಿದ್ದರಾಮಯ್ಯರ ಸರ್ಕಾರ ನೂರು ಭರವಸೆಗಳನ್ನು ಈಡೇರಿಸಿದೆ. ಟಿಕೆಟ್ ಆಕಾಂಕ್ಷಿಗಳು ಕಾರ್ಡ ವಿತರಣೆ ಸಕ್ರಿಯವಾಗಿ ಭಾಗವಹಿಸ ಬೇಕೆಂದರು. ಮುಖಂಡ ವಿರೇಂದ್ರ ಪಪ್ಪಿ,ಮಾಜಿ ಶಾಸಕ ಉಮಾಪತಿ ಮಾತನಾಡಿದರು.
ಚಿತ್ರದುರ್ಗ ನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಯು.ಲಕ್ಷ್ಮೀಕಾಂತ್,ಗ್ರಾಮಾಂತರ ಬ್ಲಾಕ್ ಅಧ್ಯಕ್ಷ ಆರ್.ಪ್ರಕಾಶ್,ಡಿಸಿಸಿ ಅಧ್ಯಕ್ಷ ಎಂ.ಕೆ.ತಾಜ್‌ಪೀರ್, ಹಾಲಸ್ವಾಮಿ,ಹನುಮಲಿ ಷಣ್ಮುಖಪ್ಪ,ಸಂಪತ್ ಕುಮಾರ್,ಎನ್,ಡಿ,ಕುಮಾರ್,ಮುದಸಿರ್,ಒ.ಶಂಕರ್,ಮಹಡಿ ಶಿ ವಮೂರ್ತಿ,ನಾಗರಾಜ್ ಜಾನ್ಹವಿ,ರಾಜಪ್ಪ,ಗೀತಾ ನಂದಿನಿಗೌಡ, ಮೀನಾಕ್ಷಿ,ವೆಂಕಟೇಶ್,ಅಲ್ಲಾಭಕ್ಷಿ,ಮೈಲಾರಪ್ಪ,ಕೃಷ್ಣಪ್ಪ,ಆನ್ವರ್ ಇತರರು ಇದ್ದರು.