ಸರಿಯಾದ ಸಮಯಕ್ಕೆ ಸೌಲಭ್ಯ ತಲುಪಿಸಿ

28manju6
Published on

ಯರಗಟ್ಟಿ: ಶಾಲಾ&ಕಾಲೇಜು ಆರಂಭವಾಗುತ್ತಿದ್ದು, ಮಕ್ಕಳಿಗೆ ಆದಾಯ ಮತ್ತು ಜಾತಿ ಪ್ರಮಾಣ ಪತ್ರ, ರೈತರಿಗೆ ಬಿತ್ತನೆ ಸೌಲಭ್ಯ ಪಡೆಯಲು ದಾಖಲೆಗಳ ಅವಶ್ಯಕತೆಯಿರುತ್ತದೆ. ಅವರಿಗೆಲ್ಲ ಸತಾಯಿಸದೇ ನಿಗದಿತ ಸಮಯದಲ್ಲಿಯೇ ನೀಡಿ ಎಂದು ತಾಲೂಕು ತಹಸೀಲ್ದಾರ್​, ಗ್ರಾಮ ಲೆಕ್ಕಾಧಿಕಾರಿಗಳಿಗೆ ಶಾಸಕ ವಿಶ್ವಾಸ ವೈದ್ಯ ಸೂಚಿಸಿದರು.

ಯರಗಟ್ಟಿ ತಾಲೂಕಿನ ತಹಸೀಲ್ದಾರ್​ ಕಚೇರಿ ಸಭಾಂಗಣದಲ್ಲಿ ಗ್ರಾಮ ಆಡಳಿತ ಅಧಿಕಾರಿಗಳಿಗೆ ಲ್ಯಾಪ್​ಟಾಪ್​ ವಿತರಣೆ ಮಾಡಿ ಮಾತನಾಡಿದ ಅವರು, ಕಂದಾಯ ಇಲಾಖೆಯಲ್ಲಿ ಪ್ರಸ್ತುತ ನಿರ್ವಹಿಸುತ್ತಿರುವ ವಿವಿಧ ಐಟಿ ವ್ಯವಸ್ಥೆಗಳನ್ನು ಬಗರ್​ ಹುಕುಂ ತಂತ್ರಾಂಶ, ಪೋಡಿ ಪ್ರಕರಣ (1&5 ಮತ್ತು 6&10) ತಂತ್ರಾಂಶ, ಪಹಣಿ ದಾಖಲೆಗಳೊಂದಿಗೆ ಆಧಾರ್​ ಜೋಡಣೆ, ಸರ್ಕಾರಿ ಜಮೀನುಗಳ ಸಂರಕ್ಷಣೆ, ಲ್ಯಾಂಡ್​ ಬಿಟ್​ ಯೋಜನೆಯಲ್ಲಿ ಅತ್ಯುತ್ತಮ ಪ್ರಗತಿ ಸಾಧಿಸುವ ಸಲುವಾಗಿ ಸರ್ಕಾರವು ಟ್ಯಾಪ್​ಟಾಪ್​ ನೀಡುತ್ತಿದೆ. ಇದನ್ನು ಸದುಪಯೋಗ ಪಡಿಸಿಕೊಂಡು ಆಡಳಿತದಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳಿ ಎಂದರು.

ತಾಲೂಕು ತಹಸೀಲ್ದಾರ್​ ಎಂ.ವಿ. ಗುಂಡಪ್ಪಗೋಳ, ಶಿರಸ್ತೇದಾರ ಎಸ್​.ಬಿ.ಕುಲಕರ್ಣಿ, ಕಂದಾಯ ನಿರೀಕ್ಷಕ ವೈ.ಎಫ್​. ಮುರ್ತೇನ್ನವರ, ಪಪಂ ನಾಮನಿರ್ದೇಶಿತ ಸದಸ್ಯ ನಿಖಿಲ ಪಾಟೀಲ, ಎಪಿಎಂಸಿ ಅಧ್ಯಕ್ಷ ನೀಲಕಂಡ ಸಿದ್ದಬಸವರ, ಪ್ರಕಾಶ ವಾಲಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net