

ಹಳಿಯಾಳ: ಕೇಂದ್ರ ಸರ್ಕಾರದ ಜನಪರ ಯೋಜನೆಗಳನ್ನು ಬೂತ್ ಮಟ್ಟದಲ್ಲಿ ಜನಸಾಮಾನ್ಯರಿಗೆ ತಲುಪಿಸಲು ಪಕ್ಷದ ಕಾರ್ಯಕರ್ತರು ಪ್ರಾಮಾಣಿಕವಾಗಿ ಶ್ರಮಿಸುವಂತೆ ಮಾಜಿ ಶಾಸಕ ಮತ್ತು ಬಿಜೆಪಿ ರಾಜ್ಯ ಕಾರ್ಯಾಕಾರಿಣಿ ಸಮಿತಿ ಸದಸ್ಯ ಸುನೀಲ ಹೆಗಡೆ ಹೇಳಿದರು.
ಪಟ್ಟಣದ ರಾಮಚಂದ್ರ ಭವನದಲ್ಲಿ ಗುರುವಾರ ಆಯೋಜಿಸಿದ್ದ ಸಂಕಲ್ಪದಿಂದ - ಸಾಧನೆಯವರೆಗೆ ಎಂಬ ಮಂಡಲ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಎಲ್. ಘೊಟ್ನೆಕರ ಮಾತನಾಡಿ, ಸ್ವಾರ್ಥಕ್ಕೆ ಆಸೆ ಪಡದೆ, ನಿಸ್ವಾರ್ಥದಿಂದ ಭಾರತೀಯರ ಉಜ್ವಲ ಭವಿಷ್ಯಕ್ಕೆ ಹಗಲಿರುಳು ಎನ್ನದೆ ನಿರಂತರ ದುಡಿಯುತ್ತಿರುವ ನರೇಂದ್ರ ಮೋದಿ ಅವರ ಸರ್ಕಾರ ಇಡೀ ವಿಶ್ವವೇ ಕಂಡ ಅಪರೂಪದ ಪ್ರಜಾಪ್ರಭುತ್ವ ಆಳ್ವಿಕೆಯಾಗಿದೆ ಎಂದು ಬಣ್ಣಿಸಿದರು.
ಜಿಲ್ಲಾ ವಿಶೇಷ ಆಹ್ವಾನಿತ ಮಂಗೇಶ ದೇಶಪಾಂಡೆ ಅವರು ವಿಕಸಿತ ಭಾರತ ಸಂಕಲ್ಪ ಪತ್ರ ಪ್ರತಿಜ್ಞಾ ವಿಧಿ ಬೋಧಿಸಿದರು. ಹಳಿಯಾಳ ತಾಲೂಕು ಅಧ್ಯಕ್ಷ ವಿಠ್ಠಲ ಸಿದ್ದನ್ನವರ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶಿವಾಜಿ ನರಸಾನಿ, ಹಳಿಯಾಳ ಮಂಡಲ ಪ್ರಧಾನ ಕಾರ್ಯದರ್ಶಿ ಸಂತೋಷ ಘಟಕಾಂಬಳೆ, ಪ್ರಮುಖರಾದ ಜ್ಞಾನೇಶ ಮಾನಗೆ, ವಿ.ಎಂ. ಪಾಟೀಲ, ತಾನಾಜಿ ಪಟ್ಟೆಕರ, ಬಸಣ್ಣಾ ಕುರುಬಗಟ್ಟಿ, ಹನುಮಂತ ಚಿನಗಿನಕೊಪ್ಪ ಇತರರಿದ್ದರು.