ಸರ್ಕಾರಿ ಸೌಲಭ್ಯ ಅರ್ಹರಿಗೆ ತಲುಪಿಸಿ

P PURA MLA 05 (2)
Published on

ಪರಶುರಾಮಪುರ: ಸರ್ಕಾರಿ ಸೌಲಭ್ಯಗಳನ್ನು ಅರ್ಹರಿಗೆ ತಲುಪಿಸಲು ಅಧಿಕಾರಿಗಳು ಹೆಚ್ಚು ಕಾಳಜಿ ವಹಿಸಬೇಕು ಎಂದು ಶಾಸಕ ಟಿ.ರಘುಮೂರ್ತಿ ಸೂಚಿಸಿದರು.

ಸಮೀಪದ ಬೆಳಗೆರೆ ಗ್ರಾಮದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಾರ್ವಜನಿಕರ ಕುಂದು-ಕೊರತೆಗಳ ಸಭೆ ಉದ್ಘಾಟಿಸಿ ಮಾತನಾಡಿದರು.

ಸ್ಥಳೀಯ ಆಸ್ಪತ್ರೆ ವೈದ್ಯರು, ದಾದಿಯರು ಜನರಿಗೆ ಗುಣಮಟ್ಟದ ಆರೋಗ್ಯ ಸೇವೆ ಒದಗಿಸಬೇಕು. ಗೋಮಾಳ ಒತ್ತುವರಿ ಆಗದ ರೀತಿ ಅಧಿಕಾರಿಗಳು ಕ್ರಮಕೈಗೊಳ್ಳಬೇಕು. ಕುಡಿವ ನೀರು, ಸ್ವಚ್ಛತೆಗೆ ಆದ್ಯತೆ ನೀಡಬೇಕು. ಬಡ, ಮಧ್ಯಮ ವರ್ಗದ ಜನರ ಪ್ರಗತಿಗೆ ಸರ್ಕಾರ ಜಾರಿಗೊಳಿಸಿರುವ ಐದು ಗ್ಯಾರಂಟಿ ಯೋಜನೆಗಳಿಂದ ಅರ್ಹರು ವಂಚಿತರಾಗದಂತೆ ಎಚ್ಚರ ವಹಿಸಬೇಕು ಎಂದು ಸೂಚಿಸಿದರು.

ತಾಲೂಕು ತಹಸೀಲ್ದಾರ್ ರೆಹಾನ್ ಪಾಷಾ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ಲಲಿತಮ್ಮ ತಿಪ್ಪೇಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ರೂಪಾ, ಮಾಜಿ ಅಧ್ಯಕ್ಷ ಜೆ ರವಿ, ಎಚ್.ಮಧು, ಸದಸ್ಯರಾದ ರಂಗಸ್ವಾಮಿ, ನಿಜಲಿಂಗಪ್ಪ, ಶಿವಮ್ಮ, ವಿಶಾಲಾಕ್ಷಿ, ಮಂಜುನಾಥ, ವೀರೇಶ, ಬಿಇಒ ಸುರೇಶ, ಅಕ್ಷರ ದಾಸೋಹ ಎಡಿಎ ತಿಪ್ಪೇಸ್ವಾಮಿ, ಅರಣ್ಯಾಧಿಕಾರಿ ಬಹುಗುಣ, ಪಶು ವೈದ್ಯಕೀಯ ಎಡಿಎ ಡಾ.ರೇವಣ್ಣ, ಹರಿಪ್ರಸಾದ್, ತೋಟಗಾರಿಕಾ ಎಡಿಎ ಆರ್.ವಿರೂಪಾಕ್ಷಪ್ಪ, ನಿತಿನ್, ತಾಪಂ ಅಧಿಕಾರಿ ಸಂಪತ್‌ಕುಮಾರ, ಎಇಇ ಕಾವ್ಯಾ, ಅಬಕಾರಿ ನಿರೀಕ್ಷಕ ಸಿ.ನಾಗರಾಜು, ಪಿಡಿಒ ದೇವೇಂದ್ರಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net