ಧಮ್ಮ ಚಿಂತನೆ ಜನತೆಗೆ ತಲುಪಿಸಿ

Deliver Dhamma thoughts to the people
Published on

ಜಮಖಂಡಿ : ನಾಡಿನ ಜನರಲ್ಲಿ ಧಮ್ಮ ಚಿಂತನೆಗಳ ಅರಿವು ಮೂಡಿಸುವುದರ ಜೊತೆಗೆ ಶೋಷಿತರ, ಧಮನಿತರ, ಬಡವರ, ಹಾಗೂ ಮಹಿಳೆಯರ ಶ್ರೇಯೋಭಿವೃದ್ಧಿಗಾಗಿ ನಿರಂತರವಾಗಿ ಕೆಲಸ ಮಾಡಬೇಕು ಎಂದು ಬಾಗಲಕೋಟೆ ಧಮ್ಮಪಾಲ ಬಂತೇಜಿ ಹೇಳಿದರು.ನಗರದ ಮೈಗೂರ ರಸ್ತೆ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್​ ಹತ್ತಿರ ಬೋಧಿಸತ್ವ ಗೌತಮಬುದ್ಧ ನಗರ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆ ಉದ್ಘಾಟಿಸಿ ಅವರು ಮಾತನಾಡಿದರು.

ಡಿಎಸ್​ಎಸ್​ ಜಿಲ್ಲಾ ಸಂಚಾಲಕ, ಸಂಸ್ಥೆ ಅಧ್ಯ ಪರಶುರಾಮ ಕಾಂಬಳೆ ಮಾತನಾಡಿ, ಸರ್ಕಾರದ ಸೌಲಭ್ಯಗಳನ್ನು ಬಡವರಿಗೆ ಮುಟ್ಟಿಸುವ ಕಾರ್ಯ ಎಲ್ಲರೂ ಮಾಡಬೇಕು ಎಂದರು.ವಕೀಲ ಎಸ್​.ಪಿ. ದೊಡಮನಿ, ಜಿಲ್ಲಾ ಮುಖಂಡ ಎಚ್​.ಎನ್​. ನೀಲನಾಯಕ, ಪ್ರೊ. ಈಶ್ವರ ಭಜಂತ್ರಿ, ನಿವೃತ್ತ ಶಿಕ ಕೆ.ಪಿ. ಮೋಹಿತೆ, ಬಸವರಾಜ ದೊಡಮನಿ ಇತರರಿದ್ದರು.

ಜಮಖಂಡಿ ನಗರದಲ್ಲಿ ಬೋಧಿಸತ್ವ ಗೌತಮಬುದ್ಧ ನಗರ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆಯನ್ನು ಬಾಗಲಕೋಟೆ ಧಮ್ಮಪಾಲ ಬಂತೇಜಿ ಉದ್ಘಾಟಿಸಿದರು. ಪರಶುರಾಮ ಕಾಂಬಳೆ, ಎಸ್​.ಪಿ. ದೊಡಮನಿ, ಎಚ್​.ಎನ್​. ನೀಲನಾಯಕ, ಬಸವರಾಜ ದೊಡಮನಿ ಇತರರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net