ಕಾಂಗ್ರೆಸ್ ಸಾಧನೆಗಳನ್ನು ಜನರ ಮನೆಮನೆಗೆ ತಲುಪಿಸಿ : ಶಿವಾನಂದ ಪಾಟೀಲ

ಬಸವನಬಾಗೇವಾಡಿ ತಾಲೂಕು ಯರನಾಳ ಗ್ರಾಮದಲ್ಲಿ ಏರ್ಪಡಿಸಿದ್ದ ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಬಿಜೆಪಿ, ಜೆಡಿಎಸ್ ಪಕ್ಷದ ನೂರಾರು ಕಾರ್ಯಕರ್ತರು, ಮುಖಂಡರು ಶಾಸಕ ಶಿವಾನಂದ ಪಾಟೀಲ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡರು.
Bring Congress achievements to people's doorsteps
ಬಸವನಬಾಗೇವಾಡಿ ತಾಲೂಕು ಯರನಾಳ ಗ್ರಾಮದಲ್ಲಿ ಏರ್ಪಡಿಸಿದ್ದ ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಬಿಜೆಪಿ, ಜೆಡಿಎಸ್ ಪಕ್ಷದ ನೂರಾರು ಕಾರ್ಯಕರ್ತರು, ಮುಖಂಡರು ಶಾಸಕ ಶಿವಾನಂದ ಪಾಟೀಲ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡರು.
Published on

ಬಸವನಬಾಗೇವಾಡಿ: ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಮಾಜಿ ಸಿ.ಎಂ. ಸಿದ್ದರಾಮಯ್ಯ ಸರ್ಕಾರದ ಯೋಜನೆಗಳು ಮತ್ತು ಕಳೆದ 15 ವರ್ಷದಿಂದ ಕ್ಷೇತ್ರದಲ್ಲಿ ನಾನು ಮಾಡಿರುವ ವಿವಿಧ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮತದಾರರ ಮನೆಮನೆಗೆ ತೆರಳಿ ಸಾಧನೆಯ ವಿವಿರ ಮುಟ್ಟಿಸುವ ಕೆಲಸ ಮಾಡಬೇಕು ಎಂದು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶಾಸಕ ಶಿವಾನಂದ ಪಾಟೀಲ ಹೇಳಿದರು.

ತಾಲೂಕಿನ ಹತ್ತರಕಿಹಾಳ, ಯರನಾಳ ಗ್ರಾಮದ ವಿವಿಧಡೆ ಚುನಾವಣೆ ಪ್ರಚಾರ ನಡೆಸಿ, ನಂತರ ಯರನಾಳ ಗ್ರಾಮದಲ್ಲಿ ಪಕ್ಷದ ಚುನಾವಣಾ ಪ್ರಚಾರದ ಕಾರ್ಯಾಲಯ ಉದ್ಘಾಟಿಸಿ ಅವರು ಮಾತನಾಡಿದರು.

2013ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 165 ಭರವಸೆಗಳನ್ನು ನೀಡಿತ್ತು. ಜನರ ಆಶೀರ್ವಾದದಿಂದ ರಾಜ್ಯದಲ್ಲಿ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ 5 ವರ್ಷದ ಅವಧಿಯಲ್ಲಿ ರಾಜ್ಯದ ಜನರಿಗೆ ನೀಡಿದ 165 ಭರವಸೆಗಳಲ್ಲಿ 166 ಭರವಸೆಗಳನ್ನು ಪೂರೈಸಿದೆ. ಒಂದು ಕಾಲದಲ್ಲಿ ಡೋಣಿ ನದಿ ಭಾಗದ ಹತ್ತಾರು ಹಳ್ಳಿಗಳಿಗೆ ಡೋಣಿ ನದಿ ಪ್ರವಾಹದಿಂದ ರಸ್ತೆ ಸಂಪರ್ಕ, ಕುಡಿಯುವ ನೀರು ಸೇರಿದಂತೆ ಅನೇಕ ಮೂಲ ಸೌಲಭ್ಯದಿಂದ ವಂಚಿತಗೊಂಡಿದ್ದವು. ನಾನು 2004ರಲ್ಲಿ ಶಾಸಕನಾದ ಬಳಿಕ ಡೋಣಿ ನದಿ ಭಾಗದಲ್ಲಿ ಬರುವ ಹತ್ತರಕಿಹಾಳ, ಯರನಾಳ, ಡೋಣೂರ, ಬಿಸನಾಳ, ಯಂಭತ್ನಾಳ, ನಂದಿಹಾಳ, ಮುಳ್ಯಾಳ, ನೇಗಿನಾಳ, ದೇಗಿನಾಳ ಸೇರಿದಂತೆ ಅನೇಕ ಗ್ರಾಮಗಳಿಗೆ ರಸ್ತೆ ಸಂಪರ್ಕ ಇಲ್ಲದೆ ಈ ಭಾಗದ ಜನರು ತೊಂದರೆ ಅನುಭವಿಸುತ್ತಿದ್ದರು. ಈಗ ಈ ಭಾಗದ ಯಾವುದೇ ಹಳ್ಳಿಯಿಂದ ವಿಜಯಪುರ ನಗರ ಹಾಗೂ ಬಸವನಬಾಗೇವಾಡಿ ಪಟ್ಟಣ ಸೇರಿದಂತೆ ಯಾವುದೇ ನಗರಕ್ಕೆ ಸಂಚರಿಸಲು ರಸ್ತೆ ಸಂಪರ್ಕ ಕಲ್ಪಿಸಲಾಗಿದೆ. ಈ ಭಾಗದ ಜನರಿಗೆ ಕೃಷ್ಣಾನದಿಯ ಕುಡಿಯುವ ನೀರು ಒದಗಿಸಿಕೊಡಲಾಗಿದೆ. ಇದರ ಜತೆಗೆ ಶೈಕ್ಷಣಿಕ ಮತ್ತು ಇನ್ನಿತರ ಮೂಲ ಸೌಲಭ್ಯಗಳನ್ನು ದೊರಕಿಸಿ ಕೊಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ ಎಂದರು.

ಇದೇ ಸಂದರ್ಭದಲ್ಲಿ ಬಿಜೆಪಿ, ಜೆಡಿಎಸ್ ಪಕ್ಷದ ನೂರಾರು ಕಾರ್ಯಕರ್ತರು, ಮುಖಂಡರು ಕಾಂಗ್ರೆಸ್ ಸೇರ್ಪಡೆಗೊಂಡರು.ಜಿಪಂ ಮಾಜಿ ಅಧ್ಯಕ್ಷ ಚಂದ್ರಶೇಖರಗೌಡ ಪಾಟೀಲ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಹಾರಿವಾಳ, ಯರನಾಳ ಗ್ರಾಪಂ ಅಧ್ಯಕ್ಷ ಬಸವರಾಜ ಜಾಲಗೇರಿ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಗುರುಶಾಂತ ನಿಡೋಣಿ, ಶಾಂತೇಶ್ವರ ಬ್ಯಾಂಕ್‌ನ ಅಧ್ಯಕ್ಷ ಶ್ರೀಮಂತ ಇಂಡಿ, ಪಿಕೆಪಿಎಸ್ ಬ್ಯಾಂಕ್‌ನ ಅಧ್ಯಕ್ಷ ಸಂಗನಬಸಪ್ಪ ತಳೇವಾಡ, ಶಂಕರಗೌಡ ಪಾಟೀಲ, ಶೇಕಪ್ಪ ಹುಕ್ಕೇರಿ, ಅನೀಲ ಹಾರಿವಾಳ, ಶಾಂತು ವಿವೇಕಿ, ಸಿದ್ದು ಸಜ್ಜನ, ಮಹಾದೇವಪ್ಪ ಬಡಿಗೇರ, ಎಸ್.ಜಿ. ಪಾಟೀಲ, ಶ್ರೀಶೈಲ ಬಳಗಾರ, ಜಗದೀಶ ಪಾಟೀಲ, ಶಿವಾನಂದ ಬೀಳಗಿ, ಸುರಜ್ ಪಾಟೀಲ, ಯಮನಪ್ಪ ವಾಲೀಕಾರ, ರಾಜು ಕಳಸಗೊಂಡ, ಬಸವರಾಜ ಬ್ಯಾಕೊಡ, ಮಲ್ಲಪ್ಪ ಹಾರಿವಾಳ, ದೇಸಪ್ಪ ಉಕ್ಕಲಿ, ಶಿವಪ್ಪ ಕರೂರ, ಬಿ.ಬಿ. ಲಗಟಗೇ, ಈರಣ್ಣ ಕಲ್ಯಾಣಿ, ಭೀರಾಯ ಬಿರಾದಾರ, ಬಸಪ್ಪ ಅವಟಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net