ದೆಹಲಿ ಗಣರಾಜ್ಯೋತ್ಸವ ಪರೇಡ್​: ಎಸ್​ಡಿಎಂ ಉಜಿರೆ ಕಾಲೇಜಿನ ಮೂವರು ವಿದ್ಯಾರ್ಥಿಗಳು ಆಯ್ಕೆ

students
Published on

ದಕ್ಷಿಣ ಕನ್ನಡ: ದೇಹಲಿಯಲ್ಲಿ ನಡೆಯುವ 75 ನೇ ವರ್ಷದ ಗಣರಾಜ್ಯೋತ್ಸವದ ಪಥ ಸಂಚಲನದಲ್ಲಿ ಪಾಲ್ಗೊಳ್ಳಲು ಉಜಿರೆಯ ಎಸ್.ಡಿ.ಎಂ ಪದವಿ ಕಾಲೇಜಿನ ಎನ್​ಸಿಸಿಯ ಮೂವರು ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.

ರಾಷ್ಟ್ರಪತಿ, ಪ್ರಧಾನಮಂತ್ರಿ ಹಾಗೂ ಇನ್ನಿತರರಿಗೆ ಗೌರವಪೂರ್ವಕವಾಗಿ ಗಾಡ್ ಆಫ್ ಆನರ್ ನೀಡಲು ನೌಕಾ ವಿಭಾಗದಿಂದ ರಾಧಿಕಾ ಸಿ.ಎಸ್ ಮತ್ತು ತರುಣ್ ಆಯ್ಕೆಯಾಗಿದ್ದಾರೆ. ಭೂಸೇನೆ ವಿಭಾಗದಿಂದ ಉದೀತ್ ಯು.ವಿ. ಅವರು ಪಥ ಸಂಚಲನದ ಮತ್ತು ಫ್ಲ್ಯಾಗ್ ಏರಿಯಾಕ್ಕೆ ಆಯ್ಕೆಯಾಗಿದ್ದಾರೆ.

ಗೋವಾ ಮತ್ತು ಕರ್ನಾಟಕ ಡೈರೆಕ್ಟರೇಟ್​ನಿಂದ 120 ಕೆಡೆಟ್​ಗಳು ದೆಹಲಿಯ ಪಥ ಸಂಚಲನದಲ್ಲಿ ಭಾಗವಹಿಸಲಿದ್ದಾರೆ. ಇದರಲ್ಲಿ ಭಾಗವಹಿಸುವ ಎನ್​ಸಿಸಿ ಕೆಡೆಟ್​ಗಳನ್ನು ಆಯ್ಕೆ ಮಾಡಲು ಹಂತ ಹಂತವಾಗಿ ಆಯ್ಕೆ ಪ್ರಕ್ರಿಯೆಗಳು ನಡೆದಿದ್ದವು. ದೇಶದ ವಿವಿಧಡೆ 7 ತರಬೇತಿಗಳನ್ನು ಮುಗಿಸಿದ ನಂತರ ಎಸ್.ಡಿ.ಎಂ ಕಾಲೇಜಿನ ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.

ಕಾಲೇಜಿನ ಎನ್​ಸಿಸಿಯ ಅಧಿಕಾರಿಗಳು ಈ ವಿದ್ಯಾರ್ಥಿಗಳಿಗೆ ತರಬೇತಿ ಮತ್ತು ಮಾರ್ಗದರ್ಶನ ನೀಡಿದ್ದಾರೆ. ದೆಹಲಿ ಪಥ ಸಂಚಲನಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳನ್ನು ಪ್ರಾಂಶುಪಾಲ ಮತ್ತು ಆಡಳಿತ ವರ್ಗವು ಅಭಿನಂದಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net