ದೆಹಲಿ ಪರೇಡ್: ಮೈಸೂರಿನ ತನ್ಮಯಿ ಭಾಗಿ

mysore
Published on

ಮೈಸೂರು: ದೆಹಲಿಯಲ್ಲಿ ಇತ್ತೀಚೆಗೆ ನಡೆದ 75ನೇ ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ನಂಜನಗೂಡು ತಾಲೂಕಿನ ತಾಂಡವಪುರದ ಮಹಾರಾಜ ಇಂಜಿನಿಯರಿಂಗ್ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿನಿ ಎಸ್.ತನ್ಮಯಿ ಕರ್ನಾಟಕ ಬೆಟಾಲಿಯನ್ ಎನ್‌ಸಿಸಿ ತಂಡವನ್ನು ಪ್ರತಿನಿಧಿಸಿದ್ದರು.


ರಿಪಬ್ಲಿಕ್ ಡೇ ಕ್ಯಾಂಪ್ (ಆರ್‌ಡಿಸಿ) ಶಿಬಿರಗಳಲ್ಲಿ ಸುಮಾರು 3000 ಎನ್‌ಸಿಸಿ ಕೆಡೆಟ್‌ಗಳು ಪಾಲ್ಗೊಂಡಿದ್ದರು. ಅದರಲ್ಲಿ 119 ಕೆಡೆಟ್‌ಗಳಿಗೆ ಮಾತ್ರ ಪಥಸಂಚಲನದಲ್ಲಿ ಪಾಲ್ಗೊಳ್ಳುವ ಅವಕಾಶ ದೊರೆತಿತ್ತು.


ದೇಶದ 17 ಎನ್‌ಸಿಸಿ ತುಕಡಿಗಳು ಭಾಗವಹಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ಕರ್ನಾಟಕ ತಂಡವು ಮಹಾರಾಷ್ಟ್ರ ನಂತರ 2ನೇ ಅತ್ಯುತ್ತಮ ತಂಡವಾಗಿ ಹೊರಹೊಮ್ಮಿತು.

ತಂಡದ ಸದಸ್ಯೆ ಮೈಸೂರಿನ ತನ್ಮಯಿ ಪ್ರಧಾನ ಮಂತ್ರಿ ಮೋದಿ ಅವರಿಂದ ಬಹುಮಾನ ಪಡೆದರು. ತನ್ಮಯಿ ಮೈಸೂರಿನ ಶ್ರೀರಾಂಪುರ 2ನೇ ಹಂತದ ಬೆಮಲ್ ಬಡಾವಣೆ ವಾಸಿ ರಾಜರಾಜೇಶ್ವರಿ- ಎ.ಜೆ.ಶ್ರೀನಿವಾಸ್ ದಂಪತಿಯ ಪುತ್ರಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net