ಕೆಲಸ ಗೊತ್ತಿಲ್ಲದವರು ಧರ್ಮ, ಜಾತಿ ರಾಜಕಾರಣ ಮಾಡ್ತಾರೆ

manish_sisodia
Published on

ಬೆಂಗಳೂರು: ಅಭಿವೃದ್ಧಿ ಕೆಲಸಗಳು ಗೊತ್ತಿಲ್ಕದವರು ಧರ್ಮ, ಜಾತಿ ರಾಜಕಾರಣ ಮಾಡುತ್ತಾರೆ. ಅಭಿವೃದ್ಧಿಯೇ ಆಮ್ ಆದ್ಮಿ ಪಾರ್ಟಿಗೆ ಮಾನದಂಡ. ಇದನ್ನು ದೆಹಲಿ ಜನತೆ ಗುರುತಿಸಿ, ಮನ್ನಣೆ ನೀಡಿ ಮತ್ತೆ ಅಧಿಕಾರ ನೀಡಿದ್ದಾರೆ ಎಂದು ಆಮ್ ಆದ್ಮಿ‌ ಪಕ್ಷದ ನೇತೃತ್ವದ ದೆಹಲಿ ಸರ್ಕಾರದ ಉಪ ಮುಖ್ಯಮಂತ್ರಿ ಮನಿಷ್ ಸಿಸೋಡಿಯಾ ಹೇಳಿದರು.

ಬೆಂಗಳೂರಿನ ಬಸಪ್ಪ ರಸ್ತೆಯಲ್ಲಿ ಪಕ್ಷ ಪ್ರಾರಂಭಿಸಿರುವ ಆಮ್ ಆದ್ಮಿ ಕ್ಲಿನಿಕ್ ಗೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿದ ಅವರು,‌ವಿಶ್ವದರ್ಜೆಯ ಶಿಕ್ಷಣ, ಜನಸಾಮಾನ್ಯರಿಗೆ ಉಚಿತ ಆರೋಗ್ಯ ಸೇವೆ ಕಾರ್ಯಸೂಚಿ ಮುಂದಿಟ್ಟುಕೊಂಡು ಮುಂಬರುವ ಬೃಹತ್ ಬೆಂಗಳೂರು ಮಹಾ ನಗರ ಪಾಲಿಕೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲುತ್ತೇವೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದ ಅವರು, ದೆಹಲಿ ಮಾದರಿ ಆಡಳಿತ ನೀಡುತ್ತೇವೆ ಎಂಬ ಭರವಸೆ ನೀಡಿದರು. ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ, ಮುಖಂಡರಾದ‌ ರಾಣಿ ದೇಸಾಯಿ, ಜಗದೀಶ್ ವಿ ಸದಂ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net