ಶಾಸಕ ಪೊನ್ನಣ್ಣ ಬಳಿಗೆ ನಿಯೋಗ

ಶಾಸಕ ಪೊನ್ನಣ್ಣ ಬಳಿಗೆ ನಿಯೋಗ
Published on

ಗೋಣಿಕೊಪ್ಪ: ಹುದಿಕೇರಿ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಸಾಕಷ್ಟು ಅವ್ಯವಹಾರಗಳು ನಡೆದಿದ್ದು, ಈ ಬಗ್ಗೆ ದಾಖಲೆ ಸಹಿತ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಅವರ ಬಳಿ ನಿಯೋಗ ತೆರಳಿ ಸಂಘದ ಅವ್ಯವಹಾರಗಳ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ಮನವಿ ಸಲ್ಲಿಸಲಾಗುವುದು ಎಂದು ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಿದೇರಿರ ನವೀನ್ ಹೇಳಿದರು.

ಹುದಿಕೇರಿ ಕೊಡವ ಸಮಾಜ ಆವರಣದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಹುದಿಕೇರಿ ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯರ ಸಭೆಯಲ್ಲಿ ಮಾತನಾಡಿದ ಅವರು, ಸಂಘದ ಚುನಾವಣೆ ನಡೆಯಲು ಅಗತ್ಯ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗುವುದು. ಸಂಘದ ವಿಚಾರದಲ್ಲಿ ನನ್ನ ಹೆಸರು ಹಾಗೂ ಅಜ್ಜಿಕುಟ್ಟಿರ ನರೇನ್ ಕಾರ್ಯಪ್ಪ ಅವರ ಹೆಸರನ್ನು ತರಲಾಗುತ್ತಿದೆ. ಕೆಲವರು ಶಾಸಕ ಪೊನ್ನಣ್ಣ ಅವರ ಹಸ್ತಕ್ಷೇಪ ಇದೆ ಎಂದು ಹೇಳಿಕೆ ನೀಡುತ್ತಿದ್ದಾರೆ. ಸಹಕಾರ ಸಂಘದ ವಿಚಾರದಲ್ಲಿ ಯಾರೂ ಕೂಡ ಹಸ್ತಕ್ಷೇಪ ಮಾಡಿಲ್ಲ ಎಂದು ಹೇಳಿದರು.

ಸದಸ್ಯ ಚಂಗುಲಂಡ ಸೂರಜ್, ಎಂ.ಪಿ.ರೇಖಾ, ಗ್ರಾ.ಪಂ. ಸದಸ್ಯ ಮನೋಹರ್, ಸಿ.ಸಿ.ಚಿಟ್ಟಿಯಪ್ಪ, ಆಲೀರ ಎಂ.ಸಾಧಲಿ, ಎ.ಟಿ.ನವೀನ್, ಪಿ.ಕೆ.ಕಾರ್ಯಪ್ಪ, ಎಚ್.ಪಿ. ಕಾವೇರಪ್ಪ, ಇಟ್ಟಿರ ಭವಿನ್, ಸಿ.ಎಸ್.ಬೋಪಯ್ಯ, ಎಂ.ಆರ್.ಅಮಿತಾ, ನೂರೇರ ಬನ್ಸಿ, ಅಜ್ಜಿಕುಟ್ಟಿರ ಗಿರೀಶ್, ಚಂಗುಲಂಡ ಕರುಂಬಯ್ಯ, ಮಧು ತಮ್ಮಯ್ಯ, ಕಳ್ಳೆಂಗಡ ದಿನೇಶ್, ಬಲ್ಲಮಾಡ ದೀಕ್ಷಿತ್, ಕಳ್ಳೆಂಗಡ ಸಚಿನ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net