12 ಜನ ಹೋರಾಟಗಾರರ ನಿಯೋಗ ದೆಹಲಿಗೆ

BASAVARAJA KALASA
BASAVARAJA KALASA
Published on

ರಾಯಚೂರು ರಾಯಚೂರಿನಲ್ಲಿ ಏಮ್ಸ್ ಸ್ಥಾಪಿಸಲು ರಾಜ್ಯದ ಎಲ್ಲಾ ಸಂಸದರು ಹಾಗೂ ರಾಜ್ಯ ಸಭಾ ಸದಸ್ಯರಲ್ಲಿ ಮನವಿಮಾಡಲು 12 ಜನ ಹೋರಾಟಗಾರರ ನಿಯೋಗ ದೆಹಲಿ ತೆರಳಿ ಭೇಟಿ ಮಾಡಿ ಮನವಿ ಮಾಡುವದಾಗಿ ಏಮ್ಸ್ ಹೋರಾಟ ಸಮಿತಿ ಪ್ರಧಾನ ಸಂಚಾಲಕ ಬಸವರಾಜ ಕಳಸ ಹೇಳಿದರು.

ಅವರಿಂದು ಮಾಧ್ಯಮಗೋಷ್ಟಿಉದ್ದೇಶಿಸಿ ಮಾತನಾಡಿ ಏಮ್ಸ್ ಮಂಜೂರಾತಿಗೆ ಪ್ರಾರಂಭವಾಗಿರುವ ಹೋರಾಟ 1038 ದಿನಕ್ಕೆ ಕಾಳಿಟ್ಟಿದೆ. ಪಕ್ಷಾತೀತವಾಗಿ ಹೋರಾಟಕ್ಕೆ ಸ್ಪೂರ್ತಿದಾಯಕ ಬೆಂಬಲ ವ್ಯಕ್ತವಾಗಿದೆ.

ಆದರೆ ಕೇಂದ್ರ ಸರ್ಕಾರ ಮತ್ತು ಬಿಜೆಪಿ ನಾಯಕರು ಮಾತ್ರ ಸ್ಪಂದಸುತ್ತಿಲ್ಲ. ಇತ್ತೀಚಗೆ ಹೋರಾಟ ಸ್ಥಳಕ್ಕೆ ಆಗಮಿಸಿದ್ದ ಶಾಸಕ ಡಾ.ಶಿವರಾಜ ಪಾಟೀಲ್ ಏಮ್ಸ್ ಮಂಜೂರಾತಿಗೆ ಕೇಂದ್ರ ಸರ್ಕಾರದ ಬಳಿ ಪಕ್ಷದ ನಿಯೋಗ ವಿಜಯೇಂದ್ರ ನೇತೃತ್ವದಲ್ಲಿ ತೆರಳುವದಾಗಿಹೇಳಿದ್ದರು.

ಆದರೆ 40 ದಿನ ಕಳೆದರೂ ಯಾವುದೇ ನಿಯೋಗ ತೆರಳುವ ಪ್ರಕ್ರಿಯೆಗಳೇ ನಡೆದಿಲ್ಲ. ವೀರಾವೇಷದ ಮಾತುಗಳನ್ನಾಡಿದ ಶಾಸಕರು ನಿಯೋಗ ತೆರಳಲು ಮುಂದಾಗದೇ ಇರುವದು ವಿಷಾದನೀಯ ಬೆಳವಣಿಗೆ. ತ್ವರಿತವಾಗಿ ನಿಯೋಗ ದಹೆಲಿ ಹೋಗಿ ಸರ್ಕಾರದ ಮೇಲೆ ಒತ್ತಡ ಹಾಕಬೇಕೆಂದರು. ರಾಜ್ಯದ ಉನ್ನತ ಶಿಕ್ಷಣ ಸಚಿವಾಲಯದ ಸೂಚನೆ ಮೇರೆಗೆ

ಏಮ್ಸ್ ಮಂಜೂರಾತಿ ಬೇಕಿರುವ ಮೌಲಭೂತ ಸೌಕರ್ಯ, ಭೂಮಿ, ನೀರು, ವಿದ್ಯುತ್, ಸಂಪಕ ವ್ಯವಸ್ಥೆ ವಿಸ್ತತವರದಿಯನ್ನು ನೀಡುವಂತೆ ಸೂಚಿಸಿದ್ದರಿಂದ ಜಿಲ್ಲಾಧಿಕಾರಿ ನಿತೀಶ ಇವರು ಪೂರ್ಣ ಮಾಃಹಿತಿಯನ್ನು ನೀಡಿದ್ದಾರೆ. 38 ಪುಟುಗಳಮಾಹಿತಿಯನ್ನು ರವಾನಿಸಲಾಗಿದೆ.

ಉನ್ನತ ಶಿಕ್ಷಣ ಇಲಾಖೆ ಮೂಲಕ ಕೇಂದ್ರಕ್ಕೆ ವರದಿ ರವಾನೆಯಾಗಲಿದೆ. ಎರಡನೇ ಬಾರಿಗೆ ಜಿಲ್ಲಾಧಿಕಾರಿಗಳು ಪತ್ರ ಬರೆದು ಮನವರಿಕೆ ಮಾಡಿರುವದು ಸ್ವಾಗತಾರ್ಹ ಬೆಳವಣಿಗೆಯಾಗಿದೆ ಎಂದರು. ದೆಹಲಿತೆರಳಿರುವನಿಯೋಗ ಪಕ್ಷಾತೀತವಾಗಿ ಕೇಂದ್ರ ಸಚಿವರು, ಸಂಸದರು, ರಾಜ್ಯ ಸಭಾ ಸದಸ್ಯರಗಳನ್ನು ಭೇಟಿ ಮಾಡಿ ರಾಯಚೂರಿಗೆ ಎಮ್ಸ್ ಮಂಜೂರಿ ಮಾಡುವದು ರಾಜ್ಯ ಸಮಸ್ಯೆಯೆಂದು ಪರಿಭಾವಿಸುವಂತೆ ಮನವಿ ನೀಡುವದಾಗಿ ಹೇಳಿದರು.

ಈ ಸಂದರ್ಬದಲ್ಲಿ ಜಾನವೆಸ್ಸಿ, ವಿನಯಕುಮಾರ ಚಿತ್ರಗಾರ, ಕೆ.ಇ.ಕುಮಾರ, ನರಸಪ್ಪ, ರಮೇಶ ಕಲ್ಲೂರಕರ್, ಸಂತೋಷಕುಮಾರ ಮಿರ್ಜಾಪುರು, ಮಹೇಂದ್ರ ಸಿಂಗ್ ಸೇರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net