

ಹುಬ್ಬಳ್ಳಿ : ಜದ್ರಾಮ್ ಕುಂಟಿ - ಆಲಮಟ್ಟಿ ನಿಲ್ದಾಣಗಳ ಮಧ್ಯೆ ನಡೆಯುತ್ತಿರುವ ಸುರಕ್ಷತೆಗೆ ಸಂಬಂಧಿಸಿದ ಕಾಮಗಾರಿಯಿಂದಾಗಿ ಜುಲೈ 8ರಂದು ವಿವಿಧ ರೈಲುಗಳು ತಡವಾಗಿ ಸಂಚರಿಸಲಿವೆ.
ವಿಜಯಪುರ - ಎಸ್ಎಸ್ಎಸ್ ಹುಬ್ಬಳ್ಳಿ ಡೈಲಿ ಪ್ಯಾಸೆಂಜರ್ ಸ್ಪೇಷ್ಪೇಲ್ ರೈಲು 80 ನಿಮಿಷ ತಡವಾಗಿ ಹಾಗೂ ಬಾಗಲಕೋಟ -ಮೈಸೂರು ಬಸವಾ ಡೈಲಿ ಎಕ್ಸ್ಪ್ರೆಸ್ ರೈಲು 30 ನಿಮಿಷ ತಡವಾಗಿ ಸಂಚರಿಸಲಿವೆ.
ಪ್ರಾತ್ಯಕ್ಷಿಕೆ ನಿಲುಗಡೆ : ದಾದರ - ಎಸ್ಎಸ್ಎಸ್ ಹುಬ್ಬಳ್ಳಿ - ದಾದರ ಡೈಲಿ ಎಕ್ಸ್ಪ್ರೆಸ್ ರೈಲಿಗೆ ಜು. 7 ರಿಂದ ಕರಾಡ ಮತ್ತು ಸಾಂಗ್ಲಿ ಮಧ್ಯದ ಕಿಲೋಸ್ಕರವಾಡಿ ನಿಲ್ದಾಣದಲ್ಲಿ ಎರಡು ನಿಮಿಷಗಳ ಪ್ರಾಯೋಗಿಕ ನಿಲುಗಡೆ ಸೌಲಭ್ಯ ಒದಗಿಸಲಿದೆ.
ಕಿಲೋಸ್ಕರವಾಡಿ ನಿಲ್ದಾಣದಕ್ಕೆ ದಾದರ-ಎಸ್ಎಸ್ಎಸ್ ಹುಬ್ಬಳ್ಳಿ ಡೈಲಿ ಎಕ್ಸ್ಪ್ರೆಸ್ ರೈಲು ಬೆಳಗಿನಜಾವ 4.18ಕ್ಕೆ ಆಗಮಿಸಿ, 4.20ಕ್ಕೆ ಹೊರಡಲಿದೆ. ಎಸ್ಎಸ್ಎಸ್ ಹುಬ್ಬಳ್ಳಿ - ದಾರರ ಡೈಲಿ ಎಕ್ಸ್ಪ್ರೆಸ್ ರೈಲು ರಾತ್ರಿ 9.58ಕ್ಕೆ ಆಗಮಿಸಿ, 10 ಗಂಟೆಗೆ ಹೊರಡಲಿದೆ.