

ರಾಯಚೂರು: ರೈಲ್ವೆ ಮಾರ್ಗ ನಿರ್ಮಾಣಕ್ಕಾಗಿ ವಶಪಡಿಸಿಕೊಂಡ ಭೂಮಿಗೆ ಪರಿಹಾರ ನೀಡದ ಕಾರಣ ನ್ಯಾಯಾಲಯದ ಆದೇಶದ ಮೇರೆಗೆ ಸೋಮವಾರ ಸ್ಥಳೀಯ ಸಹಾಯಕ ಆಯುಕ್ತ ಕಚೇರಿಯ ಕಂಪ್ಯೂಟರ್, ಪ್ರಿಂಟರ್ ಸೇರಿದಂತೆ ಇನ್ನಿತರ ಸಾಮಗ್ರಿಗಳನ್ನು ಜಪ್ತಿ ಮಾಡಲಾಯಿತು.
ಯಲ್ಲಮ್ಮ ಎಂಬ ಮಹಿಳೆಯ ಜಮೀನನ್ನು ರೈಲ್ವೆ ಮಾರ್ಗ ನಿರ್ಮಾಣಕ್ಕಾಗಿ ಭೂಮಿಯನ್ನು ಸ್ವಾೀನ ಪಡಿಸಿಕೊಳ್ಳಲಾಗಿತ್ತು. ಸ್ವಾೀನ ಪಡಿಸಿಕೊಳ್ಳಲಾದ ಭೂಮಿಗೆ ಸಹಾಯಕ ಆಯುಕ್ತರ ಕಚೇರಿಯಿಂದ ಪರಿಹಾರ ನೀಡದ ಕಾರಣ ಮಹಿಳೆ ನ್ಯಾಯಾಲಯಕ್ಕೆ ಮೊರೆ ಹೋಗಿದ್ದರು.
ನ್ಯಾಯಾಲಯದಿಂದ ಪರಿಹಾರ ನೀಡುವಂತೆ 40 ಬಾರಿ ನಿರ್ದೇಶನ ನೀಡಿದ್ದರೂ ಸಹಾಯಕ ಆಯುಕ್ತರ ಕಚೇರಿಯಿಂದ ಸ್ಪಂದನೆ ದೊರೆಯದ ಕಾರಣ ಸ್ಥಳೀಯ ನ್ಯಾಯಾಲಯ ಸಾಮಗ್ರಿ ಜಪ್ತಿಗೆ ಅದೇಶ ನೀಡಿದ ಹಿನ್ನೆಲೆಯಲ್ಲಿ ಮಹಿಳೆ ಪರ ನ್ಯಾಯವಾದಿ ಬಸವರಾಜ ಸಕ್ರಿ ನೇತೃತ್ವದಲ್ಲಿ ಸಾಮಗ್ರಿಗಳನ್ನು ವಶಕ್ಕೆ ಪಡೆಯಲಾಯಿತು.