

ವಿಜಯಪುರ:ರಾಜ್ಯ ಸರ್ಕಾರ ಜಾತಿಗಣತಿ ಸಮೀಕ್ಷೆ ನೆಪದಲ್ಲಿ ಬೆಳೆಹಾನಿ ಪರಿಹಾರ ನೀಡಲು ವಿಳಂಬ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಅಖಂಡ ಕರ್ನಾಟಕ ರೈತ ಸಂದ ಪದಾಧಿಕಾರಿಗಳು ಪ್ರತಿಭಟನಾ ಮೆರವಣಿಗೆ ನಡೆಸಿದರು.ನಗರದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಸೋಮವಾರ ರೈತ ಸಂದ ನೂರಾರು ಕಾರ್ಯಕರ್ತರು ಜಮಾಯಿಸಿ ಮಳೆಯಿಂದ ಹಾನಿಗೊಳಗಾದ ತೊಗರಿ, ಹತ್ತಿ, ಕೊಳೆತ ಈರುಳ್ಳಿ ಹಿಡಿದು ಪ್ರದರ್ಶಿಸಿದರಲ್ಲದೆ, ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ೂಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಜಿಲ್ಲಾಧಿಕಾರಿಗಳ ಮೂಲಕ ಕಂದಾಯ ಸಚಿವ ಹಾಗೂ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.ಸಂ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, ರಾಜ್ಯ ಸರ್ಕಾರ ರೈತರನ್ನು ಪರಿಹಾರದಿಂದ ವಂಚಿತರನ್ನಾಗಿಸುವ ಉದ್ದೇಶದಿಂದ ಸಮೀೆ ನೆಪದಲ್ಲಿ ಬೆಳೆಹಾನಿ ಪರಿಹಾರ ನೀಡಲು ವಿಳಂಬ ನೀತಿ ಅನುಸರಿಸುತ್ತಿದೆ. ಅಲ್ಲದೆ, ರೈತರ ಬದುಕು ಮೂರಾಬಟ್ಟಿ ಮಾಡಲು ಹೊರಟಿದೆ ಎಂದು ಆರೋಪಿಸಿದರು.
ಮೊದಲಿನಿಂದಲೂ ಜಿಲ್ಲೆ ಬರದ ಹಣೆಪಟ್ಟಿ ಕಟಿಕೊಂಡಿದೆ. ಪ್ರಸ್ತುತ ವರ್ಷ ಮುಂಗಾರು ಹಂಗಾಮದಲ್ಲಿ ಬಿಟ್ಟು ಬಿಡದೆ 2 ತಿಂಗಳವರೆಗೆ ವಿಪರೀತ ಸುರಿದ ಮಳೆಗೆ ಬಿತ್ತಿದ ತೊಗರಿ, ಶೇಂಗಾ, ಈರುಳ್ಳಿ, ಹತ್ತಿ, ಮೆಕ್ಕೆಜೋಳ, ಸೆಜ್ಜೆ, ದಾಳಿಂಬೆ, ಲಿಂಬೆ ಮತ್ತಿತರ ಬೆಳೆಗಳು ನೀರಲ್ಲಿ ನಿಂತು ಸಂಪೂರ್ಣ ಹಾಳಾಗಿವೆ ಎಂದು ತಿಳಿಸಿದರು.ಬರದಿಂದ ತತ್ತರಿಸಿ ಸಾಲದ ಸುಳಿಯಲ್ಲಿ ಸಿಲುಕಿರುವ ರೈತರಿಗೆ ಸರ್ಕಾರ ಬೆಳೆಹಾನಿ ಪರಿಹಾರ ನೀಡಿ ಆಸರೆಯಾಗುವುದು ಬಿಟ್ಟು ಅನಾವಶ್ಯಕವಾಗಿ ಕಾಲಹರಣ ಮಾಡುತ್ತಿದೆ ಎಂದು ದೂರಿದರು.
ಜಿಲ್ಲೆಯ ಸಚಿವರೂ ಸೇರಿ ಇನ್ನಿತರ ಸಚಿವರು ವೈಮಾನಿಕ ಸಮೀಕ್ಷೆ ನಡೆಸಿ ಹಾಳಾದ ಬೆಳೆಗಳ ಸ್ಥಿತಿಗತಿ ಕುರಿತು ಮನವರಿಕೆ ಮಾಡಿಕೊಂಡಿದ್ದಾರೆ. ಮತ್ತೊಮ್ಮೆ ಸಮೀೆ ಮಾಡಲಾಗುವುದೆಂದು ಹೇಳಿದ್ದಾರೆ. ಹೀಗೆ ಉದ್ದೇಶಪೂರ್ವಕವಾಗಿ ವಿಳಂಬ ಮಾಡುತ್ತಿದ್ದಾರೆ. ಸರ್ಕಾರ ರೈತರಿಗೆ ಮೋಸ ಮಾಡದೆ ಕೂಡಲೇ ನೂರಕ್ಕೆ ನೂರರಷ್ಟು ಬೆಳೆಗಳು ಹಾನಿಯಾಗಿವೆ ಎಂದು ಪರಿಗಣಿಸಿ ತ್ವರಿತವಾಗಿ ಪರಿಹಾರ ಹಣ ಬಿಡುಗಡೆಗೊಳಿಸಬೇಕೆಂದು ಆಗ್ರಹಿಸಿದರು.ಸಂಗನಬಸವ ಶ್ರೀಗಳು, ರೈತ ಮುಖಂಡರಾದ ಉಮೇಶ ವಾಲೀಕಾರ, ಬಾಲಪ್ಪಗೌಡ ಲಿಂಗದಳ್ಳಿ, ಮಲ್ಲಿಕಾರ್ಜುನ ಕೆಂಗನಾಳ, ಹೊನಕೇರೆಪ್ಪ ತೆಲಗಿ, ಚಂದ್ರಾಮ ತೆಗ್ಗಿ, ಗುರುಬಸಯ್ಯ ತೆಗ್ಗಿನಮಠ, ಶ್ರೀಶೈಲ ಕುರನದ, ಮೈಬೂಬ ಮುಲ್ಲಾ, ರ್ಯಾವಪ್ಪಗೌಡ ಪುಲೇಶಿ, ಶರಣಪ್ಪ ಮುರಡಿ, ಶೇಖಪ್ಪ ಮುರಡಿ, ಶಿವಲಿಂಗಪ್ಪ ಕಾಮನಕೇರಿ, ಸಂತೋಷ ಪಾಟೀಲ, ಶಿವಪ್ಪ ಸುಂಗಠಾಣ, ಸಂಗಪ್ಪ ಪಡಸಲಗಿ, ಮಲ್ಲಪ್ಪ ಪಡಸಲಗಿ, ಗುರಲಿಂಗಪ್ಪ ಪಡಸಲಗಿ, ದಾವಲಸಾ ನಧಾಪ, ರಾಜೇಶ ವಾಲೀಕಾರ, ಗಿರಮಲ್ಲಪ್ಪ ದೊಡಮನಿ, ನಾಗಪ್ಪ ಬೂದಗೋಳಿ, ಶಂಕ್ರಪ್ಪ ಸುಂಟ್ಯಾಣ, ಸಿದ್ದಪ್ಪ ಸುಂಟ್ಯಾಣ, ಸಂಗನಗೌಡ ಬಿರಾದಾರ, ಬಸು ಹೆಬ್ಬಾಳ, ಪರಸಪ್ಪ ಜೋಗಿ ಮತ್ತಿತರರಿದ್ದರು.
ಸಮೀಕ್ಷೆ ನೆಪದಲ್ಲಿ ಬೆಳೆಹಾನಿ ಪರಿಹಾರ ನೀಡಲು ವಿಳಂಬ ನೀತಿ ಅನುಸರಿಸುತ್ತಿರುವ ರಾಜ್ಯ ಸರ್ಕಾರದ ಕ್ರಮ ವಿರೋಧಿಸಿ ವಿಜಯಪುರದಲ್ಲಿ ಅಖಂಡ ಕರ್ನಾಟಕ ರೈತ ಸಂದ ವತಿಯಿಂದ ಅಪರ ಜಿಲ್ಲಾಧಿಕಾರಿ ಸೋಮನಿಂಗ ಗೆಣ್ಣೂರ ಅವರಿಗೆ ಮನವಿ ಸಲ್ಲಿಸಲಾಯಿತು. ಅರವಿಂದ ಕುಲಕರ್ಣಿ, ಸಂಗನಬಸವ ಶ್ರೀಗಳು, ಉಮೇಶ ವಾಲೀಕಾರ ಮತ್ತಿತರರಿದ್ದಾರೆ.