ದೆಹಲಿಯಲ್ಲಿ ಪೇಜಾವರ ಶ್ರೀ ಗುರುವಂದನೋತ್ಸವಕ್ಕೆ ಚಾಲನೆ

IMG-20231030-WA0010
Published on

ಉಡುಪಿ: ಅಯೋಧ್ಯಾ ರಾಮಮಂದಿರದ ವಿಶ್ವಸ್ಥ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ಷಷ್ಠಿಯಬ್ದಿ ಪ್ರಯುಕ್ತ ದೆಹಲಿಯಲ್ಲಿ 3 ದಿನ ನಡೆಯುವ  ಗುರುವಂದನೋತ್ಸವಕ್ಕೆ  ಸೋಮವಾರ ಚಾಲನೆ ನೀಡಲಾಯಿತು.

 ಕೇಂದ್ರ ಸರ್ಕಾರದ ಭಾರತೀಯ ಭಾಷಾ ಅಧ್ಯಯನ ಸಮಿತಿ ಅಧ್ಯಕ್ಷ ಪ್ರೊ. ಚ.ಮೂ ಕೃಷ್ಣ್ಣಶಾಸ್ತ್ರಿ ಉದ್ಘಾಟಿಸಿದರು. ವಿಶ್ವ ಹಿಂದು ಪರಿಷತ್ತಿನ ಅಂತಾರಾಷ್ಟ್ರೀಯ ಕಾರ್ಯಾಧ್ಯಕ್ಷ ಡಾ.ಅಲೋಕ್ ಕುಮಾರ್ , ಉದ್ಯಮಿ ರಮೇಶ್ ವಿಗ್ , ಗುವಾಹಟಿಯ ಕುಮಾರ ಭಾಸ್ಕರ ವರ್ಮ ಸಂಸ್ಕತ ಮತ್ತು ಪುರಾತನ ಅಧ್ಯಯನ ವಿಶ್ವ ವಿದ್ಯಾಲಯದ ಉಪಕುಲಪತಿ ಡಾ.ಪ್ರಹ್ಲಾದ್ ಜೋಶಿ,  ಬೆಂಗಳೂರು ಪೂರ್ಣಪ್ರಜ್ಞ ಸಂಶೋಧನ ಕೇಂದ್ರದ ನಿರ್ದೇಶಕ  ಡಾ.ಎ.ವಿ.  ನಾಗಸಂಪಿಗೆ ,  ಲಾಲ್ ಬಹದ್ದೂರ್ ಶಾಸ್ತ್ರಿ ಸಂಸ್ಕೃತ ವಿವಿ ಉಪಕುಲಪತಿ ಡಾ ಮುರಲಿಮನೋಹರ ಪಾಠಕ್ ,   ಶಶಾಂಕ್ ಭಟ್ , ದೆಹಲಿ ಪೇಜಾವರ ಮಠದ ಪ್ರಧಾನ ವ್ಯವಸ್ಥಾಪಕ  ಮತ್ತು ಗುರುಕುಲದ ಪ್ರಾಚಾರ್ಯ ವಿದ್ವಾನ್ ವಿಠೋಬಾಚಾರ್ಯ ,  ವಿದ್ವಾನ್ ಆನಂದತೀರ್ಥಾಚಾರ್ಯ ಸದಾಶಿವ ಭಟ್ , ಡಿ .ಪಿ ಅನಂತ್ ದೆಹಲಿ ವಿ ಹಿಂಪ ಪ್ರಾಂತ ಕಾರ್ಯದರ್ಶಿ ಸುರೇಂದ್ರ ಗುಪ್ತಾ  ಉಪಸ್ಥಿತರಿದ್ದರು.
ಕೇಂದ್ರೀಯ ಸಂಸ್ಕೃತ ವಿ ವಿ ಉಪಕುಲಪತಿ  ಡಾ.ಶ್ರೀನಿವಾಸಾಚಾರ್ಯ ವರಖೇಡಿ ಸ್ವಾಗತಿಸಿದರು.  ವಿದ್ವಾನ್ ನಾರಾಯಣಾಚಾರ್ಯ ಕಾರ್ಯಕ್ರಮ ನಿರ್ವಹಿಸಿದರು . ಅಶುತೋಷ್ ತಿವಾರಿ ವೇದಘೋಷಗೈದರು. ಕಾರ್ಯಕ್ರಮಕ್ಕೆ ಮೊದಲು ಶ್ರೀಗಳವರನ್ನು ನಗರದಲ್ಲಿ ಶೋಭಾಯಾತ್ರೆಯ ಮೂಲಕ ಬರಮಾಡಿಕೊಳ್ಳಲಾಯಿತು.


ಸಮಾರಂಭದ ಅಂಗವಾಗಿ  ಮಂಗಳವಾರ ದಿನಪೂರ್ತಿ ಕೇಂದ್ರೀಯ ಸಂಸ್ಕೃತ ವಿ.ವಿ ಆಶ್ರಯದಲ್ಲಿ ಭಗವದ್ಗೀತಾ ಜೀವನ್ಮಾರ್ಗದರ್ಶಿನಿ ಎಂಬ ವಿಷಯದಲ್ಲಿ ವಿಚಾರಗೋಷ್ಠಿ ನಡೆಯಲಿದು,್ದ ಅನೇಕ ವಿದ್ಯಾಪಿಠ ಹಾಗೂ ಸಂಸ್ಕೃತ ವಿವಿಗಳ ಪ್ರಾಧ್ಯಾಪಕರು ವಿದ್ವಾಂಸರು ಭಾಗವಹಿಸಲಿದ್ದಾರೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net