ಪದವಿ ಪರೀಕ್ಷೆ 28ಕ್ಕೆ ಮುಂದೂಡಿಕೆ

sslc exam
Published on

ಬೆಳಗಾವಿ: ನಾಗರಿಕ ಸಿವ್ಹಿಲ್ ಪೊಲೀಸ್ ಕಾನ್ಸ್‌ಟೇಬಲ್‌ಗಳ ನೇಮಕ ಪರೀಕ್ಷೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸೆ. 20ರಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಿಂದ ನಡೆಯಬೇಕಿದ್ದ ಸ್ನಾತಕ ಮತ್ತು ಸ್ನಾತಕೋತ್ತರ 2, 4, 6ನೇ ಸೆಮಿಸ್ಟರ್ ಪದವಿ ಪರೀಕ್ಷೆಗಳನ್ನು ಸೆ. 28ಕ್ಕೆ ಮುಂದೂಡಲಾಗಿದೆ.

ಇನ್ನುಳಿದ ಪರೀಕ್ಷೆಗಳು ವೇಳಾಪಟ್ಟಿ ಪ್ರಕಾರ ನಡೆಯಲಿವೆ. ಸಂಬಂಧಪಟ್ಟ ಎಲ್ಲ ಸ್ನಾತಕ ಮತ್ತು ಸ್ನಾತಕೋತ್ತರ ವಿಭಾಗಗಳ ಮುಖ್ಯಸ್ಥರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಸಹಕರಿಸಲು ಕೋರಲಾಗಿದೆ. ಆದರೆ, ಪರೀಕ್ಷಾ ಕೇಂದ್ರದ ಮುಖ್ಯಸ್ಥರು ಪರೀಕ್ಷೆಗಳ ಪ್ರಶ್ನೆ ಪತ್ರಿಕೆಯ ಕವರ್ ಅನ್ನು ಪರೀಕ್ಷಾ ದಿನದಂದೇ ತೆರೆಯಬೇಕು ಎಂದು ಆರ್‌ಸಿಯು ಮೌಲ್ಯಮಾಪನ ವಿಭಾಗದ ಕುಲಸಚಿವ ಪ್ರೊ.ಎಸ್.ಎಂ. ಹುರಕಡ್ಲಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net