ಪದವಿ ಕಾಲೇಜು ಓಪನ್‌, ತರಗತಿ ಮಾತ್ರ ಆ.16ರ ಬಳಿಕ

mng-july26-degree college 3
Published on

ಮಂಗಳೂರು: ಸುದೀರ್ಘ ಆನ್‌ಲೈನ್‌ ತರಗತಿಗಳ ಬಳಿಕ ಸೋಮವಾರದಿಂದ ಪದವಿ ಕಾಲೇಜುಗಳು ಜಿಲ್ಲೆಯಲ್ಲೂ ತೆರೆದುಕೊಂಡಿವೆ.
ಆದರೆ ಭೌತಿಕ ತರಗತಿಗಳನ್ನು ಪರೀಕ್ಷೆ ಮುಗಿಸಿದ ನಂತರ ಆಗಸ್ಟ್‌ 16ರ ಬಳಿಕವೇ ಪ್ರಾರಂಭಿಸುವುದಕ್ಕೆ ಮಂಗಳೂರು ವಿಶ್ವವಿದ್ಯಾಲಯ ಈಗಾಗಲೇ ತೀರ್ಮಾನ ಕೈಗೊಂಡಿದೆ. ಹಾಗಾಗಿ ವಿದ್ಯಾರ್ಥಿಗಳು ಪರೀಕ್ಷೆಗೆ ತಯಾರಾಗುವುದಕ್ಕೆ, ಸಂಶಯ ನಿವಾರಣೆಗಾಗಿ ಕಾಲೇಜುಗಳಿಗೆ ಆಗಮಿಸುವುದಕ್ಕೆ ಅವಕಾಶ ನೀಡಲಾಗಿದೆ. ಅಲ್ಲದೆ ಕಾಲೇಜುಗಳು ಆ.2ರಿಂದ ಪರೀಕ್ಷೆ ನಡೆಸುವುದಕ್ಕೆ ಸಿದ್ಧತೆಗಳನ್ನೂ ಪ್ರಾರಂಭಿಸಿವೆ.
ಮಂಗಳೂರು ವಿಶ್ವವಿದ್ಯಾಲಯ ವ್ಯಾಪ್ತಿಯ ದ.ಕ, ಉಡುಪಿ, ಕೊಡಗು ಜಿಲ್ಲೆಯ ಒಟ್ಟು 207 ಕಾಲೇಜುಗಳು ಸೋಮವಾರ ಪುನರಾರಂಭಗೊಂಡವು. ಅನೇಕ ವಿದ್ಯಾರ್ಥಿಗಳು ಕಾಲೇಜಿಗೆ ಹಾಜರಾಗಿ ಪರೀಕ್ಷೆ ಕುರಿತ ಸಿದ್ಧತೆಗಳನ್ನು ಮಾಡುವುದು ಕಂಡುಬಂತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net