ಸಿರಗುಪ್ಪ: ದಿವ್ಯಜ್ಯೋತಿ ಲಕ್ಕಿ ಸ್ಕೀಮ್ ಹೆಸರಿನಲ್ಲಿ ಗ್ರಾಹಕರಿಂದ ಪ್ರತಿ ತಿಂಗಳು ಲಕ್ಕಿ ಡಿಪ್ ಎತ್ತುವುದರ ಮೂಲಕ ಬಹುಮಾನ ಕೊಡುತ್ತೇವೆ ಎಂದು ಸಾರ್ವಜನಿಕರನ್ನು ನಂಬಿಸಿ ಹಣ ಪಡೆದು ವಂಚಿಸಿ ಪರಾರಿಯಾಗಿದ್ದ ಆರೋಪಿತರನ್ನು ಸಿರಗುಪ್ಪ ಪೊಲೀಸರು ಬಂಧಿಸಿದ್ದಾರೆ.
ವಿನೋದ ಹಾಗೂ ಶಿವರಾಜ ಅವರಿಂದ 8.10 ಸಾವಿರ ರೂ., ಕಾರು ಹಾಗೂ ಬೈಕ್ ವಶಕ್ಕೆ ಪಡೆದಿದ್ದಾರೆ. ಲಕ್ಕಿ ಸ್ಕೀಮ್‌ನ ಮಾಲೀಕ ವಿನೋದ ಕುಮಾರ್, ಬಸರಹಳ್ಳಿ ಗ್ರಾಮ ನಿವಾಸಿಯಾಗಿದ್ದು, ಸಹ ಮಾಲೀಕ ಶಿವರಾಜ ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ಡಂಕನಕಲ್ಲು ಗ್ರಾಮದ ನಿವಾಸಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.