ಅರಣ್ಯ ನಾಶದಿಂದಲೇ ಕಾಡಾನೆಗಳ ಹಾವಳಿ

MDG jc
ಮೂಡಿಗೆರೆ ಪ್ರೇರಣಾ ಜೆಸಿಐ ಸಪ್ತಾಹದಲ್ಲಿ ವಿದ್ಯಾರ್ಥಿನಿ ತಸ್ಮಿಯಾ ಮತ್ತು ವಿ.ವಿಧೇಯ್ ಪರವಾಗಿ ಪ್ರಾಚಾರ್ಯ ಜಗದೀಶ್ ಅವರನ್ನು ಸನ್ಮಾನಿಸಲಾಯಿತು. ಸುಪ್ರೀತ್, ಮಾಡ್ಲ ಪ್ರಕಾಶ್, ಮಂಚೇಗೌಡ, ಎ.ಜಿ.ಸುಬ್ರಾಯ ಗೌಡ, ಅನಸೂಯಾ, ಕವಿತಾ ಸಂತೋಷ್, ಪಿ.ಕೆ.ಹಮೀದ್, ಸುದೀಪ್, ಸುಚಿತ್ರಾ ಇತರರಿದ್ದರು.
Published on

ಮೂಡಿಗೆರೆ: ಅರಣ್ಯವನ್ನು ನಾಶ ಮಾಡುತ್ತಿರುವುದರಿಂದ ಆಹಾರ ಸಿಗದೆ ಕಾಡಾನೆಗಳು ನಾಡಿನತ್ತ ಬರುತ್ತಿವೆ ಎಂದು ಒಕ್ಕಲಿಗರ ಸಂಘದ ಜಿಲ್ಲಾ ಕಾರ್ಯದರ್ಶಿ ಮಾಡ್ಲ ಪ್ರಕಾಶ್ ಹೇಳಿದರು.

ಪ್ರೇರಣ ಜೆಸಿಐ ಸಪ್ತಾಹದ ಅಂಗವಾಗಿ ಗುರುವಾರ ಪಟ್ಟಣದಲ್ಲಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ರಸಪ್ರಶ್ನೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರಕೃತಿ ವಿಕೋಪದಿಂದ ಸಾರ್ವಜನಿಕ ಆಸ್ತಿ ನಾಶವಾದಾಗ ಚರ್ಚೆಗಿಳಿಯುವ ಜನರು, ಕಾಡುಪ್ರಾಣಿಗಳ ಬಗ್ಗೆ ಚರ್ಚೆಗಿಳಿಯುತ್ತಿಲ್ಲ. ಅರಣ್ಯ ಉಳಿದರೆ ಮಾತ್ರ ಮನುಷ್ಯ ಬದುಕಬಹುದು. ಅರಣ್ಯ ನಾಶ ಮುಂದುವರಿದರೆ ಗಂಡಾಂತರ ತಪ್ಪಿದ್ದಲ್ಲ ಎಂದು ಆತಂಕ ವ್ಯಕ್ತಪಡಿಸಿದರು.
ಎಸ್‌ಎಸ್‌ಎಲ್ಸಿ ಮತ್ತು ಪಿಯುಸಿಯಲ್ಲಿ ತಾಲೂಕಿಗೆ ಟಾಪರ್‌ಗಳಾದ ಎಸ್.ನಿಶ್ಚಿತಾ, ತಸ್ಮಿಯಾ, ಉಜ್ವಲ್, ವಿ.ವಿಧೇಯ್ ಅವರನ್ನು ಪುರಸ್ಕರಿಸಲಾಯಿತು. ವಿವಿಧ ಶಾಲೆ ಮತ್ತು ಕಾಲೇಜಿನ ವಿದ್ಯಾರ್ಥಿಗಳು ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ಜೆಸಿಐ ಅಧ್ಯಕ್ಷ ಸುಪ್ರೀತ್ ಕಾರ್ಬೈಲ್, ಉದ್ಯಮಿ ಮಂಚೇಗೌಡ, ತಾಪಂ ಮಾಜಿ ಅಧ್ಯಕ್ಷ ಎ.ಜಿ.ಸುಬ್ರಾಯ ಗೌಡ, ಶಿಕ್ಷಕಿ ಅನಸೂಯಾ, ಕವಿತಾ ಸಂತೋಷ್, ಪಿ.ಕೆ.ಹಮೀದ್, ಸುದೀಪ್ ತ್ರಿಪುರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net