ರಕ್ಷಣಾ ಸಚಿವ ರಾಜನಾಥಸಿಂಗ್ 'ಜನೋಪಕಾರಿ "ಶ್ರೀಮಂತ" ಕಾಗವಾಡದ ಸೇವಕ ' ಎಂದು ಬಣ್ಣಿಸಿದ್ದು ಯಾರನ್ನ?..

IMG-20230426-WA0035.jpg
Published on

ಬೆಳಗಾವಿ : ಕಾಗವಾಡ ವಿಧಾನಸಭಾ ಕ್ಷೇತ್ರದಲ್ಲಿ ಶ್ರೀಮಂತ ಪಾಟೀಲ ಅವರು ತಮ್ಮ ಜನೋಪಕಾರಿ ಕಾಯಕದಿಂದಲೇ ಉತ್ತಮ‌ ಹೆಸರು ಮಾಡಿದ್ದಾರೆ. ಅವರು ಮಂತ್ರಿಯಾಗುವುದಕ್ಕಿಂತಲೂ ಕ್ಷೇತ್ರದ ಜನರ ಸೇವೆ ಮಾಡುವುದರಲ್ಲಿ ಹೆಚ್ಚಿನ ಆನಂದ ಪಡೆಯುತ್ತಾರೆ ಎಂದು  ರಕ್ಷಣಾ ಸಚಿವ ರಾಜನಾಥಸಿಂಗ್ ಬಣ್ಣಿಸಿದರು.

ಕಾಗವಾಡ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀಮಂತ ಪಾಟೀಲ ಪರ ಅಥಣಿ ಶುಗರ್ಸ್ ಕಾರ್ಖಾನೆ ಆವರಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪ್ರಚಾರಾರ್ಥ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ಬಾರಿಯ ಸಾರ್ವತ್ರಿಕ ಚುನಾವಣೆಯಲ್ಲಿ ಜನತೆ ಕರ್ನಾಟಕದಲ್ಲಿ ಸರ್ಕಾರ ರಚಿಸಲು ಬಿಜೆಪಿ ಆಯ್ಕೆ ಮಾಡಿತ್ತು. ಆದರೆ, ಕಾಂಗ್ರೆಸ್ ಹಾಗೂ ಜನತಾದಳ ಜನಾದೇಶ ದಿಕ್ಕರಿಸಿ ಆಡಳಿತ ವಹಿಸಿಕೊಂಡಿದ್ದವು.‌ ಈ ಬಾರಿ ಹಾಗಾಗದಂತೆ ರಾಜ್ಯಾದ್ಯಂತ ಬಿಜೆಪಿಗೆ ಸ್ಪಷ್ಟ ಬಹುಮತ ನೀಡಿ ಎಂದು ಮನವಿ ಮಾಡಿದರು.

ಕಾಗವಾಡ ಕ್ಷೇತ್ರದ ಬಂಧುಗಳಿಗೆ ನಮಸ್ಕಾರ ಎಂದು ಕನ್ನಡದಲ್ಲಿಯೇ ಮಾತು ಆರಂಭಿಸಿದ ಅವರು, ಜಗತ್ತಿಗೆ ಪ್ರಜಾಪ್ರಭುತ್ವದ ಅಡಿಪಾಯ ಹಾಕಿಕೊಟ್ಟ
ಭಗವಾನ್ ಬಸವೇಶ್ವರ ಹಾಗೂ ಸಂಗೊಳ್ಳಿ ರಾಯಣ್ಣನ ಕ್ರಾಂತಿಕಾರಿ ಭೂಮಿ ಇದು. ಅನುಭವ ಮಂಟಪದ ಮೂಲಕ ಸಾಮಾಜಿಕ ನ್ಯಾಯ ಒದಗಿಸಿದ ಬಸವಣ್ಣನವರ ವಿಚಾರದಾರೆಗಳಂತೆಯೇ ಯಾವುದೇ ಜಾತಿ, ಧರ್ಮದ ಭೇದಭಾವ ಮಾಡದೇ ಕ್ಷೇತ್ರದ ಜನರಿಗೆ ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರಗಳ ಯೋಜನೆ ಸೌಲಭ್ಯ, ಸಂಕಷ್ಟದಲ್ಲಿ ಸೇವೆ ಹಾಗೂ ಅಭಿವೃದ್ಧಿ ಸಾಧಿಸುತ್ತ ಕ್ಷೇತ್ರದ ಮನ ಗೆದ್ದಿದ್ದಾರೆ. ಅಂಥ ಜನ ಸೇವಕನನ್ನು ಮತ್ತೊಮ್ಮೆ ಆಯ್ಕೆ ಮಾಡುವ ಮೂಲಕ ಬಿಜೆಪಿ ಸರ್ಕಾರದ ರಚನೆಗೆ ಕೈ ಜೋಡಿಸಬೇಕು ಎಂದರು.‌

ಬಿಜೆಪಿ ಮೂಲತಃ ಜಾತಿ ಹಾಗೂ ಧರ್ಮದ ಬೇಧ ಭಾವ ಮಾಡುವ ಪಕ್ಷವಲ್ಲ, ಎಲ್ಲರನ್ನೂ ಒಂದೇ ಸಮಾನವಾಗಿ ಕಾಣುವ ಪಕ್ಷವಾಗಿದೆ. ರಾಜಕಾರಣ ಮಾನವೀಯತೆ ಹಾಗೂ ನ್ಯಾಯಯುತವಾಗಿರಬೇಕು. ಆದರೆ, ಧರ್ಮಾಧಾರಿತ ರಾಜಕಾರಣ ಮಾಡಬಾರದು. ಆ ಕೆಲಸವನ್ನು ನಿರಂತರವಾಗಿ ಕಾಂಕ್ರೆಸ್ ಮಾಡಿದೆ.
ರಾಜಕಾರಣ ಆಳುವುದಕ್ಕಾಗಿ ಅಲ್ಲ. ಜನ ಸೇವೆ ಮಾಡಲು, ಸೇವಾ ಸರ್ಕಾರ ನಡೆಸಲು. ಆದರೆ, ನೀವೆನು ಮಾಡುತ್ತಿದ್ದೀರಿ? ಎಂದು ಕಾಂಗ್ರೆಸ್ ನಾಯಕರನ್ನು ಕುಟುಕಿದ ಅವರು,  ನಾವು ಕೇವಲ ಸರ್ಕಾರ ರಚಿಸಲು ರಾಜಕಾರಣ ಮಾಡಲ್ಲ. ನಾವು ಸ್ವಾಭಿಮಾನಿ ಸಮಾಜ ರಚಿಸಲು ರಾಜಕಾರಣ ಮಾಡುತ್ತೇವೆ. ಸಂವಿಧಾನ ನೀಡಿದ್ದ ಹಕ್ಕುಗಳನ್ನು ಮೊಟಕುಗೊಳಿಸಿ ಇಡೀ ದೇಶದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದ್ದು ಕಾಂಗ್ರೆಸ್. ಅಂಥಹ ಜನ ವಿರೋಧಿ ಕ್ರಮವನ್ನು ಬಿಜಪಿ ಸರ್ಕಾರ ಎಂದಿಗೂ ಮಾಡುವುದಿಲ್ಲ ಎಂದು ಹೇಳಿದರು.‌

ಈ ಹಿಂದಿನ‌ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಸಚಿವರು ಭ್ರಷ್ಟಾಚಾರ ನಡೆಸಿ ಜೈಲು ವಾಸವನ್ನೂ ಮಾಡುವ ಮೂಲಕ ಯುಪಿಎ ಸರ್ಕಾರದ ಸಾಧನೆ ಏನು ಎನ್ನುವುದನ್ನು ತೋರಿಸಿದ್ದಾರೆ.‌
ಆದರೆ, ಇದೀಗ ಮೋದಿ ಅರ್ಕಾರದಲ್ಲಿ ಭ್ರಷ್ಟಾಚಾರದ ಮೇಲೆ ಪ್ರಹಾರವಾಗುತ್ತಿದೆ. ದೊಡ್ಡ ದೊಡ್ಡ ಮಂತ್ರಿಗಳೂ ಜೈಲ ಸೇರುತ್ತಿದ್ದಾರೆ. ಬ್ರಷ್ಟಾಚಾರ ನಿಲ್ಲಬೇಕೊ ಬೇಡವೊ? ಇದೆಲ್ಲ ಕೊನೆಗಾಣುವುದು ಮೋದಿಯಿಂದಲೇ ಅಲ್ಲವೇ? ಕಾಂಗ್ರೆಸ್ ಅವಧಿಯಲ್ಲಿ ಕೇವಲ ಹತ್ತು ಸಾವಿರ ಕೋಟಿ ರೂ.ಭ್ರಷ್ಟಾಚಾರ ಹಣ ಜಪ್ತಿ ಮಾಡಲಾಗಿತ್ತು. ಆದರೆ, ಕಳೆದ 9 ವರ್ಚಗಳಲ್ಲಿ ಬಿಜೆಪಿ ಸರ್ಕಾರ 1.10 ಲಕ್ಷ ಕೋಟಿ ರೂ.ಜಪ್ತಿ ಮಾಡಲಾಗಿದೆ. ದೇಶದ ಯಾರೊಬ್ಬರೂ ಮೋದಿ ಅರ್ಕಾರ ಭ್ರಷ್ಟ ಸರ್ಕಾರ ಎಂಬ ಆರೋಪ ಬರದಂತೆ ಆಡಳಿತ ನಡೆಸಲಾಗುತ್ತಿದೆ. ದೇಶದ ಸರ್ವತೋಮುಖ ಅಭಿವೃದ್ಧಿಗೆ ಮೋದಿ ಕೈಗೊಳ್ಳುವ ನಿರ್ಣಯಗಳಿಂದ ಅಂತಾರಾಷ್ಟ್ರೀಯ ವೇದಿಕೆಗಳಲ್ಲೂ ಭಾರತದ ಸಲಹೆ ಸೂಚನರಗಳಿಗೆ ಇಡೀ ಜಗತ್ತೇ ಕಿವಿಗೊಡುತ್ತಿವೆ ಎಂದರು

ನಮ್ಮ ಸರ್ಕಾರವು ನಮ್ಮದೇ ದೇಶದ ಮತ್ತೊಂದು ಸರ್ಕಾರದ ಜತೆ ಹೊಇರಾಡುತ್ತಿಲ್ಲ.‌ ಬದಲಾಗಿ, ಜನರಿಗೆ ಸೇವೆ ಒದಗಿಸುವುದು ಹಾಗೂ ದೇಶದ ಅಭಿವೃದ್ಧಿ ಸಾಧಿಸಲು ಯಾವುದೇ ದಿಟ್ಟ ಕ್ರಮಕ್ಕೂ ಹಿಂಜರಿಯದೇ ಸಕಾಲಕ್ಕೆ ಕ್ರಮವಹಿಸಲಾಗುತ್ತಿದೆ.‌ಯುಪಿಎ ಸರ್ಕಾರದ ಅವಧಿಯಲ್ಲಿ‌ಒಂದು ದಿನದಲ್ಲಿ 5 ಕಿ.ಮೀ.‌ರಸ್ತೆ ನಿರ್ಮಾಣ ಮಾಡಲಾಗುತ್ತಿತ್ತು. ಆದರೆ, ಇಂದು ಮೋದಿ ಸರ್ಕಾರ ದಿನಕ್ಕೆ 38ಕಿಮಿ ನಿರ್ಮಾಣ ಮಾಡಲಾಗುತ್ತಿದೆ. ಯುವಕರಿಗೆ ಉದ್ಯೋಗ ಸೃಜಿಸಲು ತುಮಕೂರಿನಲ್ಲಿ ಮೇಕ ಇನ್ ಇಂಡಿಯಾದಡಿ ಹೆಲಿಕ್ಯಾಪ್ಟರ್ ತಯಾರಿಕೆ ಕೈಗಾರಿಕೆ ಮತ್ತು ದಕ್ಷಿಣ ಭಾರತದಲ್ಲಿ ಮೂರು ಕೈಗಾರಿಕಾ ಕಾರಿಡಾರ್ ನಿರ್ಮಾಣ ಮಾಡಲಾಗುತ್ತಿದೆ. ಪ್ರತಿ ಕಾರಿಡಾರ್ ಕರ್ನಾಟಕದೊಂದಿಗೆ ಸಂಪರ್ಕಹೊಂದಿರಲಿದ್ದು, ಅಕ್ಕಪಕ್ಕದ ಜಿಲ್ಲೆಗಳ ಯುವ ಜನಾಂಗಕ್ಕೆ ಹೆಚ್ಚಿನ ಉದ್ಯೋಗಾವಕಾಶ ಒದಗಿಸಲಿದೆ ಎಂದರು.  

ಶಾಸಕ ಶ್ರೀಮಂತ ಪಾಟೀಲ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ರೈತ ಮೋರ್ಚಾ ಅಧ್ಯಕ್ಷ ದುಂಡಪ್ಪ ಬೆಂಡವಾಡ,  ಶೀತಲ ಪಾಟೀಲ, ಮಹಾದೇವ ಕೋರೆ, ಉತ್ತಮ‌ ಪಾಟೀಲ, ಅಭಯ ಪಾಟೀಲ, ಆರ್.ಎಂ.ಪಾಟೀಲ, ತಮ್ಮಣ್ಣ ಪಾರಶೆಟ್ಟಿ, ಸಂಜಯ ತೆಲಸಂಗ, ದಾದಾ ಶಿಂಧೆ, ಶ್ರೀನಿವಾಸ ಪಾಟೀಲ, ಯೋಗೇಶ ಪಾಟೀಲ, ಸುಶಾಂತ ಪಾಟೀಲ, ರಾಕೇಶ ಪಾಟೀಲ, ಮುರಿಗೆಪ್ಪ ಮಗದುಪ್ಪ ಸೇರಿದಂತೆ ಇತರರು ಇದ್ದರು.‌

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net