ಹೊಸಪೇಟೆ: ೬೫ ಡಿಫೆಕ್ಟಿವ್ ಸೈಲನ್ಸರ್ ಬೈಕ್‌ಗಳು ವಶಕ್ಕೆ

WhatsApp Image 2023-08-16 at 12.56.00 PM
Published on

* ಜಿಲ್ಲಾ ಪೊಲೀಸರ ಕಾರ್ಯಾಚರಣೆ
* ಬೈಕ್ ವ್ಹೀಲಿಂಗ್, ರೇಸ್ ತಡೆಗೆ ಜನರ ಆಗ್ರಹ

ಹೊಸಪೇಟೆ: ಬುರ್, ಬುರ್ ಎಂದು ರೇಸ್ ಮಾಡಿ ಕರ್ಕಶ ಶಬ್ದದಿಂದ ಜನರಿಗೆ ಕಿರಿಕಿರಿ ಉಂಟು ಮಾಡುವ ಬೈಕ್ ಸವಾರರ ಹೆಡೆ ಮುರಿಕಟ್ಟಲು ಜಿಲ್ಲಾ ಪೊಲೀಸ್ ಇಲಾಖೆ ಮುಂದಾಗಿರುವುದು ಸ್ವಾಗತಾರ್ಹ. ಅದರೊಂದಿಗೆ ಬೇಕಾಬಿಟ್ಟಿಯಾಗಿ ಬೈಕ್ ಓಡಿಸುವ ಮತ್ತು ವ್ಹೀಲಿಂಗ್ ಮಾಡುವವರ ವಿರುದ್ಧವೂ ಕ್ರಮಕ್ಕೆ ಮುಂದಾಗಬೇಕು ಎಂಬ ಮಾತು ಸಾರ್ವಜನಿಕರಿಂದ ಕೇಳಿಬರುತ್ತಿದೆ.

ಸ್ವಾತಂತ್ರೊö್ಯÃತ್ಸವದ ದಿನವಾದ ಮಂಗಳವಾರದಿAದ ಬೈಕ್ ಡಿಫೆಕ್ಟಿವ್ ಸೈಲೆನ್ಸರ್‌ಗಳ ಪತ್ತೆ ಕಾರ್ಯವನ್ನು ಚುರುಕುಗೊಳಿಸಿದ್ದು, ಒಂದೇ ದಿನ ೬೫ ಬೈಕ್‌ಗಳನ್ನು ವಶಕ್ಕೆ ಪಡೆದಿದೆ. ಬುಲೆಟ್ ಸೇರಿದಂತೆ ವಿವಿಧ ಕಂಪನಿಯ ಬೈಕ್‌ಗಳಿಗೆ `ಡಿಫೆಕ್ಟಿವ್ ಸೈಲನ್ಸರ್' ಅಳವಿಡಿಸಿಕೊಂದು ಶಾಲಾ- ಕಾಲೇಜು ಸುತ್ತಮುತ್ತ, ನಗರದ ಪ್ರಮುಖ ರಸ್ತೆಗಳಲ್ಲಿ ಭಾರೀ ಶಬ್ದ ಮಾಡುತ್ತಾ ಸಾಗುತ್ತಿದ್ದ ಬೈಕ್‌ಗಳನ್ನು ಜಪ್ತಿ ಮಾಡಿದೆ. ಹೊಸಪೇಟೆ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗರಿಷ್ಟ ೫೦ ಬೈಕ್ ಬೈಕ್‌ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೂಡ್ಲಿಗಿ, ಎಚ್.ಬಿ.ಹಳ್ಳಿಯಲ್ಲಿ ತಲಾ ೭ ಹಾಗೂ ಹೊಪೇಟೆ ಪಟ್ಟಣ ಠಾಣಾ ಪೊಲೀಸರು ಇಂದು ಬೈಕ್ ವಶಕ್ಕೆ ಪಡೆದಿದ್ದಾರೆ.

ಹೊಸಪೇಟೆಯಲ್ಲೇ ಹೆಚ್ಚು:
ಕರ್ಕಶ ಶಬ್ದ ಉಂಟು ಸೈಲೆನ್ಸರ್‌ಗಳನ್ನು ಹೊಂದಿರುವ ಬೈಕ್‌ಗಳು ಜಿಲ್ಲಾದ್ಯಂತ ಇವೆ. ಅದರಲ್ಲೂ ಹೊಸಪೇಟೆಯಲ್ಲಿ ಈ ಸಂಖ್ಯೆ ತುಸು ಹೆಚ್ಚಿದೆ. ಕರ್ಕಶ ಶಬ್ದ ಬರಲೆಂದೇ ಕೆಲ ಯುವಕರು ತಮ್ಮ ಬೈಕ್‌ಗಳ ಸೈಲನ್ಸರ್ ಫಿಲ್ಟರ್‌ಗಳನ್ನು ಕೀಳಿಸಿದರೆ, ಇನ್ನೂ ಕೆಲವರು ಬೈಕ್‌ನ ಶಬ್ದ ಹೆಚ್ಚಿಸಲು ವಿವಿಧ ಬಿಡಿ ಭಾಗಗಳನ್ನು ಜೋಡಿಸುತ್ತಾರೆ. ಕಾಲೇಜು ಯುವಕರಲ್ಲಿ ಈ ಖಯಾಲಿ. ಈ ಬಗ್ಗೆ ತಿಳಿ ಹೇಳಿದರೂ ನಮ್ಮ ಮಾತಿಗೆ ಕಿವಿಗೊಡುವುದಿಲ್ಲ ಎಂಬುದು ಅನೇಕ ಮೆಕ್ಯಾನಿಕ್‌ಗಳ ಅಸಹಾಯಕ ನುಡಿ.

ವ್ಹೀಲಿಂಗ್ ಕೂಡಾ ನಡೆಯುತ್ತೆ!
ನಗರದ ಜಿಲ್ಲಾ ಕ್ರೀಡಾಂಗಣ ಹಿಂಭಾಗದಲ್ಲಿ ಕೆಲ ತಿಂಗಳ ಹಿಂದಷ್ಟೇ ಬುಲೆಟ್ ಬೈಕ್ ವ್ಹೀಲಿಂಗ್ ಮಾಡುವಾಗ ಭೀಕರ ಅಪಘಾತ ಸಂಭವಿಸಿದ ದೃಶ್ಯಗಳು ಜಾಲತಾಣಗಳಲ್ಲಿ ಹರಿದಾಡಿದರೂ, ಯುವಕರು ಎಚ್ಚೆತ್ತುಕೊಳ್ಳುತ್ತಿಲ್ಲ. ಸಿದ್ಧಿಪ್ರಿಯಾ ಕಲ್ಯಾಣ ಮಂಟಪ- ಕನಕದಾಸ ವೃತ್ತ ಮಾರ್ಗವಾಗಿ ರೈಲ್ವೇ ಗೇಟ್ ವರೆಗೆ ಹಾಗೂ ಹೊಸಪೇಟೆ ಉಪ ವಿಭಾಗ ಸರ್ಕಾರಿ ಆಸ್ಪತ್ರೆ ರಸ್ತೆ, ಕಾಲೇಜ್ ರೋಡ್, ಡಾ. ಪುನೀತ್ ರಾಜ್‌ಕುಮಾರ್ ಜಿಲ್ಲಾ ಕ್ರೀಡಾಂಗಣದ ಸುತ್ತಮುತ್ತ, ಐಬಿ ರೋಡ್ ಹಾಗೂ ಬಳ್ಳಾರಿ ರಸ್ತೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಅಪಾಯಕಾರಿಯಾಗಿ ವ್ಹೀಲಿಂಗ್ ನಡೆಸುತ್ತಾರೆ. ಈ ಬಗ್ಗೆ ಪ್ರಶ್ನಿಸಿದರೆ, ಜಗಳಕ್ಕೆ ಬರುತ್ತಾರೆ ಎಂಬುದು ಸಾರ್ವಜನಿಕರ ಆರೋಪ.

ಐಬಿ ರಸ್ತೆ, ಸಾಯಿ ಬಾಬಾ ದೇವಸ್ಥಾನದಿಂದ ಸಿದ್ದಿಪ್ರಿಯಾ ಕಲ್ಯಾಣ ಮಾರ್ಗವಾಗಿ ಜಿಲ್ಲಾ ಕ್ರೀಡಾಂಗಣದ ವರೆಗೆ ಭಾನುವಾರ ಮತ್ತು ರಜಾ ದಿನಗಳಲ್ಲಿ ಹಗಲಿರುಳು ವ್ಹೀಲಿಂಗ್ ನಡೆಯುತ್ತದೆ. ಕೆಲವೊಮ್ಮೆ ರಾತ್ರಿ ಸಮಯದಲ್ಲಿ ಯುವಕರು ಬೈಕ್ ರೇಸ್ ನಡೆಸುತ್ತಾರೆ. ಅಶಿಸ್ತಿನಿಂದ ಓಡಿಸುವ ಬೈಕ್‌ಗಳಿಗೆ ನಂಬರ್ ಪ್ಲೇಟ್ ಇರುವುದಿಲ್ಲ. ಅವರಲ್ಲಿ ಡ್ರೆöÊವಿಂಗ್ ಲೈಸನ್ಸ್ ಇರುವುದೂ ಅನುಮಾನ.
ಒಟ್ಟಾರೆ ಪೊಲಿಗಳ ಉಪಟಳದಿಂದ ಶಾಲಾ, ಕಾಲೇಜು ಮಕ್ಕಳು, ಆಸ್ಪತ್ರೆಯ ರೋಗಿಗಳು ಮತ್ತು ಜನಸಾಮಾನ್ಯರು ಕಿರಿಕಿರಿ ಅನುಭವಿಸುವಂತಾಗಿದೆ. ಈ ಬಗ್ಗೆ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಸಾರ್ವಜನಿಕರದ್ದು.

ಕರ್ಕಶ ಶಬ್ದವನ್ನು ಉಂಟುಮಾಡಿ ಜನರ ಶಾಂತಿಗೆ ಭಂಗ ತರುವುದನ್ನು ಸಹಿಸುವುದಿಲ್ಲ. ಅಶಿಸ್ತಿನಿಂದ ಬೈಕ್ ಓಡಿಸುವವರ ವಿರುದ್ಧ ಕಾರ್ಯಾಚರಣೆ ನಿರಂತರವಾಗಿ ನಡೆಯುತ್ತದೆ. ಮೂರು ತಿಂಗಳ ಹಿಂದೆಯೂ ೭೦ ಬೈಕ್‌ಗಳ ಡಿಫೆಕ್ಟಿವ್ ಸೈಲನ್ಸರ್ ಬೈಕ್ ಸೀಸ್ ಮಾಡಿದ್ದೆವು. ಈಗ ಮತ್ತೆ ನಡೆಯುತ್ತಿದೆ. ನಿನ್ನೆ ಕೂಡ್ಲಿಗಿಯಲ್ಲಿ ವ್ಹೀಲಿಂಗ್ ಮಾಡುತ್ತಿದ್ದ ಸವಾರನ ವಿರುದ್ಧ ಪ್ರಕರಣ ದಾಖಲಿಸಿದ್ದೇವೆ. ವ್ಹೀಲಿಂಗ್ ಅಪಾಯಕಾರಿಯಾಗಿದು, ಪೊಲೀಸರು ಕ್ರಮ ಕೈಗೊಳ್ಳುವುದಕ್ಕಿಂತ ಹೆಚ್ಚಾಗಿ ಅವರ ಪೋಷಕರು ತಿಳುವಳಿಕೆ ನೀಡಬೇಕು. - ಶ್ರೀಹರಿ ಬಾಬು ಬಿ.ಎಲ್., ಎಸ್ಪಿ,

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net