ಗ್ಯಾರೆಂಟಿ ವಿಚಾರದಲ್ಲಿ ದೋಷ - ಹೆಚ್‌ಡಿಕೆ

Defect in Warranty - HDK
Published on

ಮಡಿಕೇರಿ:

ಗ್ಯಾರೆಂಟಿಗಳ ವಿಚಾರದಲ್ಲಿ ಹಲವು ದೋಷಗಳಿದ್ದು, ಕಾಂಗ್ರೆಸ್ ಸರ್ಕಾರದ ಬಗ್ಗೆ ಜನರಿಗೆ ಅಸಮಾಧಾನವಿದೆ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹೇಳಿದರು. ಮಂಗಳವಾರ ಮಡಿಕೇಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಪಕ್ಷದ ಕಾರ್ಯಕರ್ತರ ಸಭೆ ನಡೆಸಲು ಕೊಡಗಿಗೆ ಬಂದಿದ್ದೇನೆ. ಪಕ್ಷ ಸಂಘಟನೆಯಲ್ಲಿ ಸ್ವಲ್ಪ ಕೊರತೆ ಇದೆ. ನಮ್ಮ ಶಕ್ತಿ ಕಡಿಮೆ ಆಗಿದ್ದರಿಂದ ಜಿಲ್ಲೆಯಲ್ಲಿ ಕಾಂಗ್ರೆಸ್ ಗೆದ್ದಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಪಕ್ಷದ ಸಂಘಟನೆಯಾಗಬೇಕಿದೆ. ಲೋಕಸಭಾ ಚುನಾವಣೆ ಬರುತ್ತಿರುವುದರಿಂದ ಪಕ್ಷ ಸಂಘಟನೆ ಮಾಡಬೇಕಾಗಿದೆ. ಮತ್ತೆ ಮೈತ್ರಿ ಸರ್ಕಾರ ಬರಬೇಕೆನ್ನುವ ನಿರೀಕ್ಷೆ ಜನರಲ್ಲಿ ಇದೆ, ರಾಜ್ಯದಲ್ಲಿ ಬಿಜೆಪಿ ಜೆಡಿಸ್ 28 ಸ್ಥಾನ ಗೆಲ್ಲುವ ನಿಟ್ಟಿನಲ್ಲಿ ಶ್ರಮವಹಿಸಲಾಗುವುದು ಎಂದರು.

ಮುಖ್ಯಮಂತ್ರಿಗಳ ಜನತಾದರ್ಶನ ವಿಚಾರ ಪ್ರಸ್ತಾಪಿಸಿದ ಹೆಚ್‌ಡಿಕೆ, ಸಿಎಂ ಜನಸ್ಪಂದನ ಮಾಡುತ್ತಿರುವುದು ಮೆಚ್ಚತ್ತಕ್ಕ ವಿಚಾರ. ಜನರ ಸಮಸ್ಯೆಗಳ ಗ್ರೌಂಡ್ ರಿಯಾಲಿಟಿ ಸಿಎಂಗೆ ಅರ್ಥ ಆಗಿರಬಹುದು. ನಾನು ಜನತಾ ದರ್ಶನ ಮಾಡಿದ್ದಾಗ ಇದ್ದಂತಹ ಸಮಸ್ಯೆಗಳು ಈಗಲೂ ಇದೆ ಎಂದು ಹೇಳಿದರು.

ಜಂಬೂರಿನಲ್ಲಿ ಇನ್ಫೋಸಿಸ್ ಮನೆ ಹಸ್ತಾಂತರ ವಿಳಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು
ನಮ್ಮ ಸರ್ಕಾರವಿದ್ದಾಗ ಸಂತ್ರಸ್ತರಿಗೆ ಸಮರ್ಪಕ ಪರಿಹಾರ ನೀಡಿದ್ದೆವು. ನಂತರ ಬಂದ ಸರ್ಕಾರಗಳು ಸಂತ್ರಸ್ತರನ್ನು ನಿರ್ಲಕ್ಷ್ಯ ಮಾಡಿವೆ ಎಂದರು.

ಕಾರ್ಯಕರ್ತರ ಸಭೆಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷರ ನೇಮಕ ಕುರಿತು ಚರ್ಚೆ ನಡೆಯಲಿದೆ.
ಶೀಘ್ರವೇ ಹೊಸ ಜಿಲ್ಲಾಧ್ಯಕ್ಷರ ನೇಮಕ ನಡೆಯಲಿದೆ ಎಂದು ಹೇಳಿದರು.
ಮಾಜಿ ಸಚಿವ ಸಾರಾ ಮಹೇಶ್, ಮಾಜಿ ಶಾಸಕ ಕೆ. ಮಹಾದೇವ್, ಜಿಲ್ಲಾ ಜೆಡಿಎಸ್ ಮುಖಂಡ ಸಿ.ಎಲ್ ವಿಶ್ವ, ಮನ್ಸೂರ್ ಅಲಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net