ಸೋಲು ಗೆಲುವಿಗೆ ಮೊದಲ ಮೆಟ್ಟಿಲು

24mnv01
ಮಾನ್ವಿ ಲೋಯೋಲಾ ಕಾಲೇಜ್ ಆವರಣದಲ್ಲಿ ನಡೆದ ತಾಲೂಕು ಮಟ್ಟದ ಕ್ರೀಡಾ ಕೂಟಕ್ಕೆ ಜಿಲ್ಲಾ ಪಿಯು ಶಿಕ್ಷಣ ಇಲಾಖೆ ಉಪನಿರ್ದೇಶಕ ಜಯರಾಮಯ್ಯ ಚಾಲನೆ ನಿಡಿದರು. ಈ ವೇಳೆ ದೈಹಿಕ ಶಿಕ್ಷಕರಾದ ಶಾಂತಯ್ಯಸ್ವಾಮಿ, ಖೇಮನಾಯ್ಕ ಇದ್ದರು.
Published on

ಮಾನ್ವಿ: ವಿದ್ಯಾರ್ಥಿಗಳಿಗೆ ಪಠ್ಯ ಚಟುವಟಿಕೆ ಜತೆಗೆ ಕ್ರೀಡೆ ಅವಶ್ಯ. ಇದರಿಂದ ಕಲಿಕಾ ಸಾಮಾರ್ಥ್ಯ ಹೆಚ್ಚಳವಾಗುತ್ತದೆ ಎಂದು ಜಿಲ್ಲಾ ಪಿಯು ಶಿಕ್ಷಣ ಇಲಾಖೆ ಉಪನಿರ್ದೇಶಕ ಡಿ.ಕೆ.ಜಯರಾಮಯ್ಯ ಹೇಳಿದರು.

ಲೋಯೋಲಾ ಕಾಲೇಜ್‌ನಲ್ಲಿ ಶಿಕ್ಷಣ ಇಲಾಖೆ, ನೇತಾಜಿ ಪಿಯು ಕಾಲೇಜ್ ಹಾಗೂ ಸರ್ವೋದಯ ಪಿಯು ಕಾಲೇಜ್ ಸಂಯುಕ್ತಾಶ್ರಯದಲ್ಲಿ ನಡೆದ ತಾಲೂಕು ಮಟ್ಟದ ಕ್ರೀಡಾ ಕೂಟದಲ್ಲಿ ಶುಕ್ರವಾರ ಮಾತನಾಡಿದರು.

ಕ್ರೀಡೆಗಳಲ್ಲಿ ಸೋಲು-ಗೆಲವು ಸಾಮಾನ್ಯ. ಸೋಲು ಗೆಲುವಿನ ಮೂಲವಾಗಿದೆ. ತಾಲೂಕಿನ 4ಸರ್ಕಾರಿ ಮತ್ತು 16ಖಾಸಗಿ ಪಿಯು ಕಾಲೇಜು ಸೇರಿ ಒಟ್ಟು 20ಕಾಲೇಜುಗಳ ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದು, ಸಹೋದರತ್ವದಿಂದ ಆಟವಾಡಬೇಕು, ಕ್ರೀಡೆ ಹಾಗೂ ಅಭ್ಯಾಸ ಎರಡು ಕಡೆ ಗಮನ ಹರಿಸಿದಾಗ ಯಶಸ್ಸು ಪಡೆಯುವುದು ಸಾಧ್ಯ ಎಂದರು.

ನೇತಾಜಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಕೆ.ಇ.ನರಸಿಂಹ, ಸರ್ವೋದಯ ಪಿಯು ಕಾಲೇಜ್ ಅಧ್ಯಕ್ಷ ಮನೋಜ್‌ಕುಮಾರ ಮಿಶ್ರ, ಮಾನ್ವಿ ಕಾಲೇಜಿನ ಅಧ್ಯಕ್ಷ ಎಚ್.ಮೌನೇಶ, ಲೋಯೋಲಾ ಕಾಲೇಜಿನ ಪ್ರಾಚಾರ್ಯ ಫಾದರ್ ಪ್ರವೀಣ್,

ಸರ್ಕಾರಿ ಪಿಯು ಕಾಲೇಜುಗಳ ಪ್ರಾಚಾರ್ಯರಾದ ಡಾ.ಕುಂಟೆಪ್ಪ ಗೌರಿಪುರ, ಪ್ರಕಾಶ, ಖಾಸಗಿ ಕಾಲೇಜಿನ ಪ್ರಾಚಾರ್ಯರಾದ ಕೆ.ಇ.ವಿಜಯಲಕ್ಷ್ಮೀ, ರೇಣುಕಾ, ವೀರಭದ್ರಯ್ಯ ಹಿರೇಮಠ, ಅನೀಲ್, ತಾಲೂಕು ಖಾಸಗಿ ಶಾಲೆಗಳ ಒಕ್ಕೂಟದ ಅಧ್ಯಕ್ಷ ಎಚ್.ಶರ್ಫುದ್ದಿನ್ ಪೋತ್ನಾಳ, ದೈಹಿಕ ಶಿಕ್ಷಕರಾದ ಶಾಂತಯ್ಯಸ್ವಾಮಿ, ಖೇಮನಾಯ್ಕ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net