ಸೋಲು-ಗೆಲುವನ್ನು ಸಮನಾಗಿ ಸ್ವೀಕರಿಸಿ

04 KAVITAL 01
ಕವಿತಾಳ ಸಮೀಪದ ವಟಗಲ್‌ನ ಇಂದಿರಾ ವಸತಿ ಮುರಾರ್ಜಿ ಶಾಲೆಯಲ್ಲಿ ಹಮ್ಮಿಕೊಂಡ ಕ್ರೀಡಾಕೂಟದ ಕ್ರೀಡಾಜ್ಯೋತಿಯನ್ನು ಶಾಸಕ ಆರ್ ಬಸನಗೌಡ ತುರ್ವಿಹಾಳ ಸ್ವೀಕರಿಸಿದರು. ಗ್ರಾಪಂ ಅಧ್ಯಕ್ಷ ಬಸನಗೌಡ ಬಾಲರಡ್ಡಿ, ಗ್ರಾಪಂ ಸದಸ್ಯ ಆದನಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್ ಯದ್ದಲದಿನ್ನಿ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ವೆಂಕಟರಡ್ಡಿ ಹಾಲಪೂರ, ಗುತ್ತೆದಾರ ಬಲವಂತರಾಯಗೌಡ ವಟಗಲ್ ಇತರರಿದ್ದರು.
Published on

ಕವಿತಾಳ: ಮಾನಸಿಕ ಮತ್ತು ದೈಹಿಕವಾಗಿ ಸದೃಢವಾಗಿರಲು ಕ್ರೀಡೆಗಳು ಸಹಕಾರಿಯಾಗುತ್ತವೆ ಎಂದು ಶಾಸಕ ಆರ್. ಬಸನಗೌಡ ತುರ್ವಿಹಾಳ ಹೇಳಿದರು. ವಟಗಲ್ ಇಂದಿರಾ ವಸತಿ ಮುರಾರ್ಜಿ ಶಾಲೆ ಆವರಣದಲ್ಲಿ ಪಾಮನಕಲ್ಲೂರು ಸಿಆರ್‌ಸಿ ವಲಯ ಮಟ್ಟದ ಕ್ರೀಡಾಕೂಟ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಮಂಗಳವಾರ ಮಾತನಾಡಿದರು.

ಪ್ರತಿಯೊಬ್ಬರೂ ಕ್ರೀಡಾ ಮನೋಭಾವವನ್ನು ಹೊಂದಿರಬೇಕು. ಕ್ರೀಡೆಗಳು ಭಾವೈಕ್ಯತೆಯ ಕೊಂಡಿಗಳಂತೆ ಕೆಲಸಮಾಡುತ್ತವೆ. ಕ್ರೀಡೆಯಲ್ಲಿ ಸೋಲು-ಗೆಲುವನ್ನು ಸಮನಾಗಿ ಸ್ವೀಕರಿಸಬೇಕು ಎಂದರು.


ಎಸ್‌ಡಿಎಮ್‌ಸಿ ಅಧ್ಯಕ್ಷ ಅಮರೇಶ ನಾಯಕ, ಗ್ರಾಪಂ ಮಾಜಿ ಅಧ್ಯಕ್ಷ ಅಮರೇಗೌಡ, ಮಂಜುರು ಗುಡಗುಂಟಿ, ಮಸ್ಕಿ ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಮಂಜುನಾಥ ಕವಿ, ಸಿಆರ್‌ಸಿ ಅಮಗುಂಡಪ್ಪ, ಶಿಕ್ಷಕರಾದ ಬಸನಗೌಡ ನಿಲೋಗಲ್, ಗಿರೀಶ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net