ಸೋಲನ್ನು ಸವಾಲಾಗಿ ಸ್ವೀಕರಿಸಿ ಮುನ್ನಡೆಯಬೇಕು

kpp1 (7)
Published on

ಕೊಪ್ಪ: ಸೋಲು ಗೆಲುವುಗಳನ್ನು ಸಕಾರಾತ್ಮಕ ಚಿಂತನೆಗಳೊಂದಿಗೆ ಸ್ವೀಕರಿಸಬೇಕು. ಪ್ರಯತ್ನದಲ್ಲಿನ ಸೋಲು ನಮ್ಮ ಹತಾಶೆಗೆ ಕಾರಣವಾಗಬಾರದು. ಸೋಲನ್ನು ಸವಾಲಾಗಿ ಸ್ವೀಕರಿಸಿ ಮುನ್ನಡೆಯುವ ಛಲ ನಮ್ಮದಾಗಬೇಕು. ಅದರಿಂದ ಯಶಸ್ಸು ನಮ್ಮದಾಗುತ್ತದೆ ಎಂದು ನಿವತ್ತ ಉಪನ್ಯಾಸಕ ಜಿ.ಎಸ್ ನಟೇಶ್ ತಿಳಿಸಿದರು.

ಕನ್ನಡ ಸಾಹಿತ್ಯ ಪರಿಷತ್, ರೋಟರಿ ಕ್ಲಬ್ ಹಾಗೂ ರೋಟರಿ ಸಮುದಾಯದಳ ಹರಿಹರಪುರದ ಆಶ್ರಯದಲ್ಲಿ ಗುರುವಾರ ಹರಿಹರಪುರದ ಅರಾಸ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಸಕಾರಾತ್ಮಕ ಚಿಂತನೆಯ ಶಕ್ತಿ ವಿಷಯ ಕುರಿತು ಆಯೋಜಿಸಿದ್ದ ಪ್ರೇರಣಾನುಡಿ ಕಾರ್ಯಕ್ರಮದಲ್ಲಿ ಮಾತನಾಡಿ, ವಿದ್ಯೆ ಅಹಂಕಾರಕ್ಕೆ ಕಾರಣವಾಗ ಬಾರದು. ವಿದ್ಯಾ, ವಿನಯ ಸಂಪನ್ನತೆ ಬದುಕಿನ ಸಾರ್ಥಕತೆಗೆ ಮೂಲವಾಗಿದೆ. ವಿದ್ಯೆಯಿಂದ ವಿನಯ, ವಿನಯದಿಂದ ಗುಣ, ಗುಣದಿಂದ ಸಮಾಜದಲ್ಲಿ ಗೌರವ ದೊರೆಯುತ್ತದೆ. ಕೇವಲ ಶೈಕ್ಷಣಿಕ ಪ್ರಮಾಣ ಪತ್ರ ಒಂದೇ ವಿದ್ಯೆಗೆ ಮಾನದಂಡವಲ್ಲ. ವಿದ್ಯಾರ್ಥಿ ಜೀವನದಲ್ಲಿ ಕೆಟ್ಟ ಸಹವಾಸದಿಂದ ದೂರವಿರಬೇಕು. ಹೆಚ್ಚು ಒಳ್ಳೆಯ ವಿಚಾರಗಳನ್ನು ಗ್ರಹಿಸಿಕೊಳ್ಳಬೇಕು ಎಂದರು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಜೆ.ಎಂ. ಶ್ರೀಹರ್ಷ, ಪ್ರಾಚಾರ್ಯ ಮಹದೇವ್, ನರಸಿಂಹಮೂರ್ತಿ ಅಡಿಗ, ರವಿರಾಜ್, ಗೋಪಾಲ್, ಎ.ಒ ವೆಂಕಟೇಶ್, ಎಸ್.ಎನ್ ಚಂದ್ರಕಲಾ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net