ಬಳಿಘಟ್ಟ ಗ್ರಾಪಂ ಉಪಾಧ್ಯಕ್ಷರ ವಿರುದ್ಧ ಅವಿಶ್ವಾಸ ಗೊತ್ತುವಳಿಗೆ ಸೋಲು

23mlk1
ಬಳಿಘಟ್ಟ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರ ವಿರುದ್ಧ ನಿಗದಿಯಾಗಿದ್ದ ಅವಿಶ್ವಾಸ ಗೊತ್ತುವಳಿ ಮಂಡನೆ ಸಭೆಯಲ್ಲಿ ಉಪವಿಭಾಗಾಧಿಕಾರಿ ಶ್ರೀನಿವಾಸ್, ಪಿಡಿಒ ರಾಜೇಂದ್ರ ಇತರರು ಇದ್ದರು.
Published on

ಮೇಲುಕೋಟೆ: ಬಳಿಘಟ್ಟ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ನಾಗೇಶ್ ವಿರುದ್ಧ ಕಾಂಗ್ರೆಸ್ ಹಾಗೂ ರೈತ ಸಂಘದ ಬೆಂಬಲಿತ ಸದಸ್ಯರು ಮಂಡಿಸಿದ್ದ ಅವಿಶ್ವಾಸ ನಿರ್ಣಯ ವಿಫಲವಾಗಿದೆ.'

ಕಾಂಗ್ರೆಸ್ ಮತ್ತು ರೈತ ಸಂಘದ ಬೆಂಬಲಿತ ಸದಸ್ಯರಾದ ಪಟೇಲ್ ಜಯರಾಮು, ಜ್ಯೋತಿ ಮಹೇಶ್, ಹಾಲಿ ಅಧ್ಯಕ್ಷೆ ಸುಶೀಲಮ್ಮ ಸೇರಿ 7 ಸದಸ್ಯರು ಉಪಾಧ್ಯಕ್ಷ ನಾಗೇಶ್ ಅವರನ್ನು ಪದಚ್ಯುತಿಗೊಳಿಸಲು ಅವಿಶ್ವಾಸ ಗೊತ್ತುವಳಿ ಮಂಡಿಸಲು ಸಭೆ ಆಯೋಜಿಸುವಂತೆ ಮನವಿ ಮಾಡಿದ್ದರು.

ವಿಶ್ವಾಸಮತ ಸಾಬೀತುಪಡಿಸಲು ನೋಡಲ್ ಅಧಿಕಾರಿಯಾಗಿರುವ ಪಾಂಡವಪುರ ಉಪವಿಭಾಗಾಧಿಕಾರಿ ಶ್ರೀನಿವಾಸ್ ಬುಧವಾರ 12 ಗಂಟೆಗೆ ಸಭೆ ನಿಗದಿ ಮಾಡಿದ್ದರು. ಆದರೆ ಸಭೆಗೆ ಯಾರೊಬ್ಬ ಸದಸ್ಯರು ಭಾಗವಹಿಸದ ಕಾರಣ ಸಭೆಯನ್ನು ರದ್ದು ಮಾಡಿದ ಪರಿಣಾಮ ಅವಿಶ್ವಾಸ ನಿರ್ಣಯ ವಿಫಲವಾಗಿದೆ. ಅಧ್ಯಕ್ಷರಾಗಿ ಸುಶೀಲಮ್ಮ, ಉಪಾಧ್ಯಕ್ಷರಾಗಿ ನಾಗೇಶ್ ಮುಂದುವರಿದಿದ್ದಾರೆ. ಪಿಡಿಒ ರಾಜೇಂದ್ರ ಇತರರು ಇದ್ದರು

ಬಳಿಘಟ್ಟ ಗ್ರಾಮ ಪಂಚಾಯಿತಿ 10 ಸದಸ್ಯ ಬಲ ಹೊಂದಿದ್ದು, ಜೆಡಿಎಸ್ ಬೆಂಬಲಿತ 6 ಸದಸ್ಯರು ಹಾಗೂ ಕಾಂಗ್ರೆಸ್-ರೈತ ಸಂಘದ ಬೆಂಬಲಿತ 4 ಸದಸ್ಯರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net