ಭಾರತಕ್ಕೆ ಸೋಲು: ಎಲ್‌ಇಡಿ ಸ್ಕ್ರೀನ್ ಗೆ ಕಲ್ಲು

WhatsApp Image 2023-11-19 at 9.14.57 PM
Published on

ಹೊಸಪೇಟೆ: ಕ್ರಿಕೆಟ್ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತಕ್ಕೆ ಸೋಲು ಸಮೀಪಿಸುತ್ತಿದ್ದಂತೆ ಕಿಡಿಗೇಡಿಯೊಬ್ಬ ಎಲ್‌ಇಡಿ ಸ್ಕಿçÃನ್‌ಗೆ ಕಲ್ಲು ಹೊಡೆದಿರುವ ಘಟನೆ ನಗರದಲ್ಲಿ ಭಾನುವಾರ ಸಂಭವಿಸಿದೆ.

ಭಾರತ ಮತ್ತು ಆಸ್ಟೆçÃಲಿಯಾ ವಿಶ್ವಕಪ್ ಅಂತಿಮ ಪಂದ್ಯದ ನೇರ ಪ್ರಸಾರವನ್ನು ಸಾರ್ವಜನಿಕರ ವೀಕ್ಷಣೆಗಾಗಿ ಇಲ್ಲಿನ ಡಾ.ಪುನೀತ್ ರಾಜ್‌ಕುಮಾರ್ ಜಿಲ್ಲಾ ಕ್ರೀಡಾಂಗಣದಲ್ಲಿ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯಿಂದ ದೊಡ್ಡ ಎಲ್‌ಇಡಿ ಪರದೆ ಅಳವಡಿಸಲಾಗಿತ್ತು. ಪಂದ್ಯ ವೀಕ್ಷಣೆಗೆ ನೂರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ್ದರು.

ಭಾರತ ಬ್ಯಾಟಿಂಗ್ ಆಯ್ದುಕೊಂಡು ಸಿಕ್ಸ್, ಫೋರ್ ಬಾರಿಸಿದಾಗ ಸಿಳ್ಳೆ ಹಾಕಿ ಸಂಭ್ರಮಿಸಿದ್ದ ಅಭಿಮಾನಿಗಳು, ಆಸ್ಟೆçÃಲಿಯಾ ತಂಡದ ಬ್ಯಾಟಿಂಗ್ ಆರಂಭಗೊAಡು, ಬ್ಯಾಟ್ಸಮನ್‌ಗಳು ಅಬ್ಬರಿಸಲು ಆರಂಭಿಸುತ್ತಿದ್ದAತೆ ಕೆಲ ಅಭಿಮಾನಿಗಳು ಬೇಸರದಿಂದ ಕಾಲ್ಕಿತ್ತಿದ್ದರು. ರಾತ್ರಿ ೯ ಗಂಟೆ ಸುಮಾರಿಗೆ ಭಾರತದ ಸೋಲು ಸಮೀಪಿಸುತ್ತಿದ್ದಂತೆ ಗುಂಪಿನಲ್ಲಿ ಕುಳಿತಿದ್ದ ವ್ಯಕ್ತಿಯೊಬ್ಬ ಪರದೆಗೆ ಕಲ್ಲು ಹೊಡೆದಿದ್ದರಿಂದ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು.

ಈ ವೇಳೆ ವ್ಯಕ್ತಿಯೊಬ್ಬರನ್ನು ವಿಚಾರಣೆಗೆ ಒಳಪಡಿಸಿದರಾದರೂ, ಅವನು ನಾನಲ್ಲ ನಾನಲ್ಲ ಎನ್ನುತ್ತಲೇ ಪೊಲೀಸರೆದುರೇ ಗಾಡಿ ಏರಿ ಹೊರಟೇ ಬಿಟ್ಟ. ಸ್ಕ್ರೀನ್ ಗೆ ಕಲ್ಲು ಬಿದ್ದು, ಜಖಂಗೊAಡಿದ್ದರಿAದ ಪ್ರದರ್ಶನವನ್ನು ಅರ್ಧಕ್ಕೆ ಮೊಟಕುಗೊಳಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net