ಬಿಜೆಪಿ ಸೋಲಿಸಲು ಜನ ತೀರ್ಮಾನಿಸಿದ್ದಾರೆ

download (2)-01
Published on

ಚಿತ್ರದುರ್ಗ: ಪ್ರಧಾನಿ ನರೇಂದ್ರ ಮೋದಿ,ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ಶಾ ಅವರು ರಾಜ್ಯಕ್ಕೆ ನೂರು ಬಾರಿ ಬಂದರೂ,ಬಿಜೆಪಿಯನ್ನು ಈ ಬಾರಿ ಸೋಲಿಸಲು ಜನ ತೀರ್ಮಾನಿಸಿದ್ದಾರೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.

ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು,ರಾಜ್ಯದಲ್ಲಿ ಜನರು ಬಿಜೆಪಿಯನ್ನು ಸೋಲಿಸುತ್ತಾರೆ.ಮಹಾತ್ಮ ಗಾಂಧಿ ವರ್ಸಸ್ ಸಾರ್ವಕರ್ ಚರ್ಚೆ,ಸಿದ್ದರಾಮಯ್ಯರನ್ನು ಹೊಡೆಯಿರಿ ಎನ್ನುವುದು ಸಿದ್ಧಾಂತವೇ ಎಂದು ನಡ್ಡಾ ಅವರನ್ನು ಪ್ರಶ್ನಿಸಿದರು. ಸಿದ್ದಾಂತ ಎಂ ದರೆ ಜನರ ಸಮಸ್ಯೆಗಳನ್ನು ಬಗೆ ಹರಿಸುವುದು.

ಆದರೆ ಬಿಜೆಪಿ ಸಿದ್ಧಾಂತ ಜನರನ್ನು ಪ್ರಚೋದಿಸುವುದು,ದ್ವೇಷ ರಾಜಕಾರಣ ಮಾಡುವುದಾಗಿದೆ.

ಬಿಜೆಪಿರಾಜ್ಯಾಧ್ಯಕ್ಷ ನಳೀನ್ ಕು ಮಾರ್ ಕಟೀಲ್‌ಗೆ ರಾಜಕೀಯ ಜ್ಞಾನ ಇಲ್ಲ ಎಂದು ಕೊಂಡಿದ್ದೇ,ಆದರೆ ನಡ್ಡಾ ಅವರಿಗೂ ರಾಜಕೀಯ ಜ್ಞಾನ ಗೊತ್ತಿಲ್ಲ. ಕಾಂಗ್ರೆಸ್ ಮ ನುಷ್ಯತ್ವದ ರಾಜಕಾರಣ ಮಾಡುತ್ತಿದೆ. ಎಲ್ಲ ವರ್ಗದವರನ್ನೂ ಮನುಷ್ಯರೆಂದು ನೋಡುತ್ತದೆ. ಎಲ್ಲ ಜಾತಿ,ಧರ್ಮಗಳ ಮೇಲೂ ಗೌರವ ಇಟ್ಟು ಕೊಂಡಿದೆ.

ನಮ್ಮ ಸರ್ಕಾರದ ಅವಧಿ ಭ್ರಷ್ಟಾಚಾರಗಳಾಗಿದ್ದರೆ ತನಿಖೆ ಮಾಡಿಸಲಿ. ನಾವು ಆರೋಪಿಸಿದರೆ ದಾಖಲೆ ಕೊಡಿ ಎನ್ನುತ್ತಾರೆ ಹೊರತು ತನಿಖೆಗೆ ಆದೇಶಿಸಲು ಹೆದರುತ್ತಿದ್ದಾರೆ. ನಮ್ಮ ಸರ್ಕಾರ ಎಂದು ಆರೋಪಗಳ ಪ್ರಕರಣಗಳ ತನಿಖೆಯನ್ನು ಸಿಬಿಐಗೆ ಒಪ್ಪಿಸಿತ್ತು ಎಂದರು. ಅವ ರಿಗೆ ಜಾತಿ,ಧರ್ಮ ಅಂದರೆ ಏನೆಂದು ಗೊತ್ತಿಲ್ಲವೆಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಗೆ ಟೀಕೆಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net