ಸೇನಾನಿಗಳ ಅವಹೇಳನ: ಪಿಐಎಲ್ ಅರ್ಜಿ ಎಚ್ಚರಿಕೆ

senani avahelana
Published on

ಮಡಿಕೇರಿ: ಜಿಲ್ಲೆಯ ವೀರ ಸೇನಾನಿಗಳನ್ನು ಅವಹೇಳನ ಮಾಡಿದ ಆರೋಪಿಯ ಜಾಮೀನನ್ನು ರದ್ದುಪಡಿಸಿ ಗಡಿಪಾರು ಮಾಡದಿದ್ದಲ್ಲಿ ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ಪಿಐಎಲ್(ಸಾರ್ವಜನಿಕ ಹಿತಾಶಕ್ತಿ) ಅರ್ಜಿ ದಾಖಲಿಸಲಾಗುವುದು ಎಂದು ಮರೆನಾಡು ಕೊಡವ ಸಂಘದ ಅಧ್ಯಕ್ಷ ಬೊಟ್ಟಂಗಡ ಗಿರೀಶ್ ಪೆಮ್ಮಯ್ಯ ಎಚ್ಚರಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊಡಗಿನ ವೀರ ಸೇನಾನಿಗಳಾದ ಜನರಲ್ ತಿಮ್ಮಯ್ಯ ಹಾಗೂ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪನವರ ಬಗ್ಗೆ ವಾಟ್ಸಪ್ ಗ್ರೂಪ್‌ನಲ್ಲಿ ವಿದ್ಯಾಧರ್ ಎಂಬುವವರು ಅವಹೇಳನ ಮಾಡಿದ್ದಾರೆ. ಇಬ್ಬರು ವೀರ ಸೇನಾನಿಗಳು ಯಾವುದೇ ಜನಾಂಗಕ್ಕೆ ಸೇರಿದ ವ್ಯಕ್ತಿಗಳಲ್ಲ. ದೇಶ ಕಂಡ ಮಾಹಾನ್ ನಾಯಕರು. ಅವರ ಕುರಿತು ಅವಹೇಳನ ಮಾಡಿರುವುದು ಸರಿಯಲ್ಲ. ಈ ಹಿನ್ನೆಲೆ ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ. ಮುಂದಿನ ೧೫ ದಿನದ ಒಳಗಾಗಿ ಕಾನೂನು ಕ್ರಮ ಕೈಗೊಳದಿದಲ್ಲಿ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಶಕ್ತಿ ಅರ್ಜಿ ಹಾಕಲಾಗುವುದು ಎಂದು ಎಚ್ಚರಿಸಿದರು.

ವಿದ್ಯಾಧರ್ ಅವರನ್ನು ಗುಪ್ತಚರ ಸಂಸ್ಥೆ ಮತ್ತು ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್.ಐ.ಎ.) ಮುಂತಾದ ಸಂಸ್ಥೆಗಳಿಂದ ತನಿಖೆಯಾಗಬೇಕು. ಅಲ್ಲದೇ, ಪೊಲೀಸರು ಮತ್ತೊಂದು ಎಫ್.ಐ.ಆರ್ ದಾಖಲಿಸಿ, ಜಾಮೀನು ರದ್ದುಮಾಡಿ, ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಮಚ್ಚಮಾಡ ರಂಜಿ, ಕಾರ್ಯದರ್ಶಿ ಬೋಡಂಗಡ ಕಾರ್ಯಪ್ಪ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net