ಜಿಂಕೆ ಶಿಕಾರಿ ಮಾಡಿದ ಇಬ್ಬರ ಸೆರೆ

26 tth 03
ಜಿಂಕೆ ಬೇಟೆಯಾಡಿದ ಇಬ್ಬರನ್ನು ಬಂಧಿಸಿದ ಮಂಡಗದ್ದೆ ವಲಯ ಅರಣ್ಯಾಧಿಕಾರಿಗಳು.
Published on

ತೀರ್ಥಹಳ್ಳಿ: ಮಂಡಗದ್ದೆ ವಲಯ ವ್ಯಾಪ್ತಿಯ ಕುಳ್ಳುಂಡೆ ಗ್ರಾಮದ ಸರ್ವೇ ನಂಬರ್ 73ರಲ್ಲಿ ದಿವಾಕರಗೌಡ ಎಂಬುವ ಖಾತೆ ಜಾಗದ ಬಳಿ ಜಿಂಕೆಯನ್ನು ಶಿಕಾರಿ ಮಾಡಿ ಮಾಂಸ ಕಡಿಯುತ್ತಿರುವ ಸಂದರ್ಭದಲ್ಲಿ ಮಂಡಗದ್ದೆ ವಲಯ ಅರಣ್ಯಾಧಿಕಾರಿಗಳು ದಾಳಿ ಮಾಡಿ ಇಬ್ಬರನ್ನು ಬಂಧಿಸಿದ್ದ ಮೂವರು ಪರಾರಿಯಾಗಿದ್ದಾರೆ. ಕುಳ್ಳುಂಡೆ ಗ್ರಾಮದ ರಜಿತ್ ಬಿನ್ ಮಂಜುನಾಥ (23), ವಿನಯ್ ಬಿನ್ ಶಿವಪ್ಪ (19) ಬಂಧಿತರು. ಕುಳ್ಳುಂಡೆ ಮನೋಜ್ ಬಿನ್ ಗೋಪಾಲ (28), ಚಂದ್ರು ಬಿನ್ ನಟರಾಜ್ (25), ಮೂರಕೈ ನಿವಾಸಿ ಮಣಿಕಂಠ ಬಿನ್ ರವಿ (26) ತಪ್ಪಿಸಿಕೊಂಡಿದ್ದಾರೆ. ಜಿಂಕೆ ಮಾಂಸ ಮತ್ತು ಎರಡು ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಡಿಸಿಎಫ್ ಶಿವಶಂಕರ್, ಎಸಿಎಫ್ ಎಚ್.ಎಸ್.ಪ್ರಕಾಶ್, ಮತ್ತು ಆರ್‌ಎಫ್‌ಒ ಎಂ.ಪಿ.ಆದರ್ಶ ಮಾರ್ಗದರ್ಶನದಲ್ಲಿ ಉಪವಲಯ ಅರಣ್ಯಾಧಿಕಾರಿ ಬಿ.ಆರ್.ಸುಹಾಸ್, ಗಸ್ತು ಅರಣ್ಯ ಪಾಲಕರಾದ ಡಿ.ದುರ್ಗಪ್ಪ, ಎ.ವಿ.ಸಂತೋಷಕುಮಾರ್ ಮತ್ತು ವಲಯದ ಇತರ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net