ಜಿಂಕೆ ಮಾಂಸ ವಶ, ಇಬ್ಬರ ಬಂಧನ

Jinke maamsa
Published on

ಬೈಂದೂರು: ದ್ವಿಚಕ್ರ ವಾಹನದಲ್ಲಿ 20 ಕೆ.ಜಿ. ಜಿಂಕೆ ಮಾಂಸ ಸಾಗಿಸುತಿದ್ದ ಆರೋಪಿಗಳನ್ನು ಬೈಂದೂರು ಸಮೀಪದ ಒತ್ತಿನೆಣೆ ಬಳಿ ಪೋಲಿಸರು ವಶಕ್ಕೆ ಪಡೆದಿದ್ದಾರೆ.

ಮೊಹಮ್ಮದ್ ನಾಸೀರ್ ಹಾಗೂ ಅಬ್ದುಲ್ ಆಲಿಮ್ ಬಂಧಿತರು. ಆರೋಪಿಗಳಿಂದ ಗೊರಸು ಸಮೇತ ಇರುವ ಜಿಂಕೆಯ ನಾಲ್ಕು ಕಾಲು ಹಾಗೂ ಮಾಂಸ ವಶಪಡಿಸಿಕೊಳ್ಳಲಾಗಿದೆ. ಕುಂದಾಪುರ ಡಿವೈಎಸ್‌ಪಿ ಶ್ರೀಕಾಂತ್ ಮಾರ್ಗದರ್ಶನದಲ್ಲಿ ಬೈಂದೂರು ವೃತ್ತ ನಿರೀಕ್ಷಕ ಸಂತೋಷ್ ಆನಂದ್ ಕಾಯ್ಕಿಣಿ ನೇತೃತ್ವದಲ್ಲಿ ಠಾಣಾಧಿಕಾರಿ ನಿರಂಜನ ಗೌಡ, ಸಿಬ್ಬಂದಿ ಮೋಹನ್ ಪೂಜಾರಿ ಶಿರೂರು, ನಾಗೇಂದ್ರ ಬೈಂದೂರು, ಚಾಲಕ ಚಂದ್ರಶೇಖರ ಪೂಜಾರಿ, ಅಶೋಕ ರಾಥೋಡ್ ಕಾರ್ಯಾಚರಣೆ ನಡೆಸಿದ್ದರು. ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net